ಡೊಲ್ಚೆ ಆ್ಯಂಡ್ ಗಬಾನಾದ ಈ ಮಂಗನ ಟೋಪಿಗೆ ಬರೀ ರೂ. 40,000

Dolce and Gabbana : ಇಟಲಿಯ ಫ್ಯಾಷನ್​ ಹೌಸ್ ಡೊಲ್ಚೆ ಆ್ಯಂಡ್ ಗಬಾನಾದ ಈ ಖಾಕೀ ಬಣ್ಣದ ಸ್ಕೀ ಮಾಸ್ಕ್​ ಕ್ಯಾಪ್​ ರಿಯಾಯ್ತಿ ದರದಲ್ಲಿ ಲಭ್ಯವಿದೆ. ಕೊನೆಯಲ್ಲಿ ಹೋದವರಿಗೆ ಆದ್ಯತೆ!

ಡೊಲ್ಚೆ ಆ್ಯಂಡ್ ಗಬಾನಾದ ಈ ಮಂಗನ ಟೋಪಿಗೆ ಬರೀ ರೂ. 40,000
ಡೊಲ್ಚೆ ಆ್ಯಂಡ್ ಗಬಾನಾ ಕ್ಯಾಪ್​ ಬೆಲೆ ರೂ. 40,000
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 19, 2023 | 3:18 PM

Viral : ನಮ್ಮ ದೇಶದಲ್ಲಿ ಅಂತೂ ಚಳಿಗಾಲ ಅಂಚಿಗೆ ಬರ್ತಾ ಇದೆ. ಆದರೂ ಕೂಡ ಹೊರಗೆ ಬಿಸಿಲು ಒಳಗಿನ್ನೂ ಚಳಿಯೇ. ಇನ್ನೇನು ಚಳಿಗಾಲ ಮುಗೀತಲ್ಲ ಎಂದುಕೊಂಡು ನೀವು ಮಂಕೀ ಕ್ಯಾಪ್​ ತಗೊಳ್ಳೋದನ್ನ ಮುಂದಿನ ವರ್ಷಕ್ಕೆ ದೂಡ್ತಿದ್ರೆ ನಿಮಗೆ ಇಲ್ಲಿ ಅದ್ಭುತವಾದ ಆಫರ್​ ಇದೆ. ಡೊಲ್ಚೆ ಆ್ಯಂಡ್​ ಗಬಾನಾ (Dolce And Gabbana) ಈಗ ಮಾರುಕಟ್ಟೆಗೆ ಬಿಡುಗಡೆ ಮಾಡಿರೋ ಈ ಕ್ಯಾಪ್​ನ ಬೆಲೆ ಬರೀ ರೂ. 40,000! ಆದರೆ ನಿಮಗೇ ಅಂತ ವಿಶೇಷ ರಿಯಾಯಿತಿ ಕೂಡ ಇದೆ. ನೋಡಿ ಸ್ವಲ್ಪ ಮನಸ್ಸು ಮಾಡಿ.

ಇಟಲಿಯ ಫ್ಯಾಷನ್​ ಹೌಸ್ ಡೊಲ್ಚೆ ಆ್ಯಂಡ್ ಗಬಾನಾ ಖಾಕೀ ಬಣ್ಣದ ಸ್ಕೀ ಮಾಸ್ಕ್​ ಕ್ಯಾಪ್​ ಅನ್ನು ಇದೀಗ ಬಿಡುಗಡೆ ಮಾಡಿದೆ. ಇದರ ಸ್ಕ್ರೀನ್​ ಶಾಟ್​ ಇದೀಗ ವೈರಲ್ ಆಗುತ್ತಿದೆ. ಸ್ವಾತಿ ಮೊಯಿತ್ರಾ ಎನ್ನುವವರು ಇದನ್ನು ಟ್ವೀಟ್ ಮಾಡಿದ್ದಾರೆ. ಮೂಲ ಬೆಲೆ ರೂ. 40,000. ಆದರೆ ರೂ. 31,990 ರಿಯಾಯ್ತಿ ಇದಕ್ಕಿದೆ. ಇದನ್ನು ಜನವರಿ 17ರಂದು ಹಂಚಿಕೊಳ್ಳಲಾಗಿದೆ. ಈತನಕ 3,000ಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್ ನೋಡಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೆಟ್ಟಿಗರು ಇದು ಮಂಕೀ ಕ್ಯಾಪ್ (Monkey Cap) ​ನಂತಿದೆ ಎಂದಿದ್ದಾರೆ.

ಇದನ್ನೂ ಓದಿ : ಸ್ಟೀವ್ ಜಾಬ್ಸ್​ ಅವರ ಹಳೆಯ ಸ್ಯಾಂಡಲ್ಸ್​ ಹರಾಜು

ಇದು ಮಂಕೀ ಕ್ಯಾಪ್​ ಅಲ್ಲ ಏಕೆಂದರೆ ಇದರ ನೆತ್ತಿ ಮೇಲೆ ಪಾಂ ಪಾಂ ಇಲ್ಲ ಎಂದಿದ್ಧಾರೆ ಒಬ್ಬರು. ಮಲಯಾಳಂ ತಮಿಳು ಸಿನೆಮಾಗಳಲ್ಲಿ ತೋರಿಸುವ ಊಟಿಯ ಹನಿಮೂನ್​ ದೃಶ್ಯಗಳನ್ನು ಇದು ನೆನಪಿಸುವಂತಿದೆ ಎಂದಿದ್ದಾರೆ ಮತ್ತೊಬ್ಬರು. ನನಗೆ ಹೆಣೆಯಲು ಬಂದಿದ್ದರೆ ಐನೂರು ರೂಪಾಯಿಯಲ್ಲಿ ಇಂಥ ಟೋಪಿ ಮಾಡಿಕೊಡುತ್ತಿದ್ದೆ ಎಂದಿದ್ದಾರೆ ಮಗದೊಬ್ಬರು. ಇಷ್ಟೊಂದು ರಿಯಾಯ್ತಿ ಕೊಟ್ಟಿದ್ದರೂ ಪ್ರಯೋಜನವಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು.

ಚಳಿ ಕಮ್ಮಿ ಅನ್ನಸ್ತಿದೆಯಲ್ವಾ, ಬೇಡ ಅಲ್ವಾ ಈ ವರ್ಷ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:11 pm, Thu, 19 January 23