ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ಯಾಕೆ ಇದೆ? ಪ್ರಯಾಣಿಕರು ಅದನ್ನು ತೆರೆದರೆ ಏನಾಗುತ್ತದೆ?

Explainer ತುರ್ತು ನಿರ್ಗಮನ ಬಾಗಿಲುಗಳು, ಹೆಸರೇ ಸೂಚಿಸುವಂತೆ, ಪ್ರಯಾಣಿಕರು ಮತ್ತು ಸಿಬ್ಬಂದಿಗೆ ತುರ್ತು ಪರಿಸ್ಥಿತಿಯಲ್ಲಿ ವಿಮಾನದಿಂದ ತ್ವರಿತವಾಗಿ ಸ್ಥಳಾಂತರಿಸಲು ಸಹಾಯ ಮಾಡಲು ಇರುವ ದಾರಿ ಆಗಿದೆ

ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ಯಾಕೆ ಇದೆ? ಪ್ರಯಾಣಿಕರು ಅದನ್ನು ತೆರೆದರೆ ಏನಾಗುತ್ತದೆ?
ಇಂಡಿಗೋ ವಿಮಾನ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 18, 2023 | 9:30 PM

ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಪಕ್ಷದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಕಳೆದ ವರ್ಷ ಡಿಸೆಂಬರ್ 10 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ (Chennai airport) ಇಂಡಿಗೋ ವಿಮಾನದ (IndiGo aircraft) ತುರ್ತು ನಿರ್ಗಮನ ದ್ವಾರ ತೆರೆದಿದ್ದಾರೆ. ಈ ಘಟನೆಯ ಸಮಯದಲ್ಲಿ ವಿಮಾನವು ನೆಲದ ಮೇಲೆ ಇತ್ತು. ವಿಮಾನಯಾನ ಸಂಸ್ಥೆಯು ಮಂಗಳವಾರ (ಜನವರಿ 17) ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತುರ್ತು ನಿರ್ಗಮನ ದ್ವಾರ ತೆರೆದ ಪ್ರಯಾಣಿಕರ ಹೆಸರು ಬಹಿರಂಗ ಪಡಿಸಿರಲಿಲ್ಲ. ನಾಗರಿಕ ವಿಮಾನಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ವಿಮಾನದಲ್ಲಿ ಪ್ರಯಾಣಿಕರು ಅಪ್ಪಿ ತಪ್ಪಿ ನಿರ್ಗಮನ ದ್ವಾರ ತೆಗೆದಿದ್ದಾರೆ ಎಂದು ಹೇಳಿಕೆ ನೀಡಿದೆ. ತುರ್ತು ನಿರ್ಗಮನ ಬಾಗಿಲು ತೆರೆದಾಗ ವಿಮಾನವು ಟೇಕ್‌ಆಫ್‌ಗಾಗಿ ಸಿದ್ಧತೆ ನಡೆಸುತ್ತಿತ್ತು ಎಂದು ವರದಿಯಾಗಿದೆ. ಪ್ರೋಟೋಕಾಲ್ ಪ್ರಕಾರ, ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಮತ್ತು ಅದನ್ನು ಸಂಪೂರ್ಣವಾಗಿ ಪರೀಕ್ಷಿಸಿದ ನಂತರವೇ ವಿಮಾನ ಪ್ರಯಾಣ ಕೈಗೊಳ್ಳಲಾಗಿದೆ ಎಂದು ವಿಮಾನ ಸಂಸ್ಥೆ ಹೇಳಿದೆ.

ಪ್ರಯಾಣಿಕರೊಬ್ಬರು ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೆಲವು ಪ್ರಯಾಣಿಕರು ವಿಮಾನ ಹಾರುವ ಮುನ್ನ ಮಾತ್ರ ಅಲ್ಲ, ಹಾರುತ್ತಿರುವಾಗಲೂ ತುರ್ತು ನಿರ್ಗಮನ ಬಾಗಿಲು ತೆರೆದಿದ್ದರು.

ವಿಮಾನಗಳಲ್ಲಿ ತುರ್ತು ನಿರ್ಗಮನ ದ್ವಾರ ಯಾಕಿದೆ?

ತುರ್ತು ನಿರ್ಗಮನ ಬಾಗಿಲುಗಳು, ಹೆಸರೇ ಸೂಚಿಸುವಂತೆ, ಪ್ರಯಾಣಿಕರು ಮತ್ತು ಸಿಬ್ಬಂದಿಗೆ ತುರ್ತು ಪರಿಸ್ಥಿತಿಯಲ್ಲಿ ವಿಮಾನದಿಂದ ತ್ವರಿತವಾಗಿ ಸ್ಥಳಾಂತರಿಸಲು ಸಹಾಯ ಮಾಡಲು ಇರುವ ದಾರಿ ಆಗಿದೆ.  ವಿಮಾನದಲ್ಲಿ ಅವಘಡ ಸಂಭವಿಸಿದಾಗ, ಕ್ರ್ಯಾಶ್-ಲ್ಯಾಂಡಿಂಗ್, ಬೆಂಕಿ ಕಾಣಿಸಿಕೊಂಡಾಗ, ಕ್ಯಾಬಿನ್‌ನಲ್ಲಿ ಹೊಗೆ ತುಂಬಿದಾಗ, ಅಥವಾ ತಕ್ಷಣದ ಸ್ಥಳಾಂತರಿಸುವ ಅಗತ್ಯವಿರುವ ಯಾವುದೇ ಘಟನೆ ಎದುರಾದಾಗ ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಇದು ಸಹಾಯಕ್ಕೆ ಬರುತ್ತದೆ.. ತುರ್ತು ಸಮಯದಲ್ಲಿ ಸ್ಥಳಾಂತರಿಸಲು ಸಿಬ್ಬಂದಿಯ ನಿರ್ದಿಷ್ಟ ಆದೇಶದ ಅಡಿಯಲ್ಲಿ ಮಾತ್ರ ಬಾಗಿಲುಗಳನ್ನು ತೆರೆಯಬೇಕು.

ಟೆಸ್ಟಿಂಗ್ ಮತ್ತು ಪ್ರಮಾಣೀಕರಣದ ಸಮಯದಲ್ಲಿ, ವಿಮಾನ ಸಿಬ್ಬಂದ ಎಲ್ಲಾ ಪ್ರಯಾಣಿಕರನ್ನು, ಗರಿಷ್ಠ-ಆಸನ ಸಾಮರ್ಥ್ಯವಿರುವಾಗ ತುರ್ತು ನಿರ್ಗಮನ ಮೂಲಕ 90 ಸೆಕೆಂಡುಗಳಲ್ಲಿ ಸ್ಥಳಾಂತರಿಸಬಹುದು.  2006 ರಲ್ಲಿ, ಏರ್‌ಬಸ್, ಅಣಕು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, 853 ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರು ತನ್ನ ಸೂಪರ್‌ಜಂಬೋ ಏರ್‌ಬಸ್ A380 ಅನ್ನು ಕೇವಲ 78 ಸೆಕೆಂಡುಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಬಹುದೆಂದು ಪ್ರದರ್ಶಿಸಿದ್ದರು.

ಇದನ್ನೂ ಓದಿ: ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದದ್ದು ತೇಜಸ್ವಿ ಸೂರ್ಯ, ಅವರು ಕ್ಷಮೆಯಾಚಿಸಿದ್ದಾರೆ: ನಾಗರಿಕ ವಿಮಾನಯಾನ ಸಚಿವ

ತುರ್ತು ಬಾಗಿಲುಗಳು ಎಲ್ಲಿವೆ?

ವಾಣಿಜ್ಯ ಜೆಟ್‌ಗಳಲ್ಲಿ, ಬಾಗಿಲುಗಳು ಸಾಮಾನ್ಯವಾಗಿ ವಿಮಾನದ ರೆಕ್ಕೆಗಳ ಮೇಲಿರುತ್ತವೆ, ಇದು ಪ್ರಯಾಣಿಕರ ಕೈಗೆಟುಕುತ್ತವೆ. ತುರ್ತು ಬಾಗಿಲುಗಳು ವಿಮಾನದ ಸಾಮಾನ್ಯ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳಿಂದ ಪ್ರತ್ಯೇಕವಾಗಿರುತ್ತವೆ.

ತುರ್ತು ನಿರ್ಗಮನದ ಪಕ್ಕದಲ್ಲಿ ಕುಳಿತುಕೊಳ್ಳಲು ನೀವು ಭಯಪಡಬೇಕೇ?

ಇಲ್ಲವೇ ಇಲ್ಲ. ವಾಸ್ತವವಾಗಿ, ತುರ್ತು ನಿರ್ಗಮನಗಳ ಪಕ್ಕದಲ್ಲಿರುವ ಆಸನಗಳು ಹೆಚ್ಚು ಲೆಗ್ ಸ್ಪೇಸ್ ಅನ್ನು ಹೊಂದಿರುತ್ತವೆ. ಆದ್ದರಿಂದ ಹೆಚ್ಚು ಆರಾಮದಾಯಕವಾಗಿದೆ. ಆದಾಗ್ಯೂ, ನೀವು ಎಂದಿಗೂ ಬಾಗಿಲು ತೆರೆಯಲು ಪ್ರಯತ್ನಿಸಬಾರದು ಇದು ವಿಮಾನ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ, ನಿಯಂತ್ರಕ ನಿಯಮಗಳ ಉಲ್ಲಂಘನೆಯಾಗದ್ದು ನಿಮ್ಮ ಮೇಲೆ ಕ್ರಮ ಜರಗಿಸಬಹುದು. ಕ್ಯಾಬಿನ್ ಸಿಬ್ಬಂದಿಯ ಸದಸ್ಯರು ಯಾವಾಗಲೂ ಪ್ರತ್ಯೇಕವಾಗಿ ಮತ್ತು ನೇರವಾಗಿ ಈ ಬಾಗಿಲುಗಳ ಮುಂದಿನ ಆಸನಗಳಲ್ಲಿ ಕುಳಿತು ಪ್ರಯಾಣಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ಅವುಗಳನ್ನು ಹೇಗೆ ತೆರೆಯಬೇಕು ಎಂಬುದರ ಕುರಿತು ತಿಳಿಸುತ್ತಾರೆ. ತುರ್ತು ಬಾಗಿಲುಗಳ ಮುಂದಿನ ಸೀಟುಗಳು ಖಾಲಿಯಾಗಿದ್ದರೆ, ಕ್ಯಾಬಿನ್ ಸಿಬ್ಬಂದಿ ಸಾಮಾನ್ಯವಾಗಿ ಸ್ವಯಂಸೇವಕರನ್ನು ಹುಡುಕುತ್ತಾರೆ. ತುರ್ತು ಬಾಗಿಲನ್ನು ತೆರೆಯಲು ಕಷ್ಟಪಡುವ ಮಗು ಅಥವಾ ವಯಸ್ಸಾದ ಪ್ರಯಾಣಿಕರು ಸಾಮಾನ್ಯವಾಗಿ ಅದರ ಪಕ್ಕದಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ.

ಪ್ರಯಾಣಿಕರು ತುರ್ತು ನಿರ್ಗಮನ ದ್ವಾರವನ್ನು ತೆರೆಯಬಹುದೇ?

ಚೆನ್ನೈ ಘಟನೆಯಂತೆ ವಿಮಾನವು ನೆಲದ ಮೇಲೆ ಇರುವಾಗ ಪ್ರಯಾಣಿಕರಿಗೆ ತುರ್ತು ಬಾಗಿಲು ತೆರೆದ ಘಟನೆಗಳಿವೆ. ಪ್ರಯಾಣಿಕರೊಬ್ಬರು ಹಾಗೆ ಮಾಡಿದಾಗ ನಿದರ್ಶನಗಳಿವೆ. ಒಬ್ಬ ವ್ಯಕ್ತಿ ಆ ನಿರ್ಗಮನ ದ್ವಾರ ಮೂಲಕ ಹೊರಬಂದು ವಿಮಾನದ ರೆಕ್ಕೆಗಳ ಮೇಲೆ ನಡೆದಿದ್ದರು. ಈ ಬಗ್ಗೆ ಕೇಳಿದಾಹ”ಕ್ಯಾಬಿನ್ ಉಸಿರುಕಟ್ಟಿಸುವಂತಿತ್ತು. ಅವರು ಸ್ವಲ್ಪ ತಾಜಾ ಗಾಳಿ ಬೇಕು ಎಂದು ಹೊರ ಹೋಗಿದ್ದೆ ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದರು. ಆದಾಗ್ಯೂ, ತುರ್ತು ಸಮಯದಲ್ಲಿ ಹಾಗೆ ಮಾಡಲು ಸಿಬ್ಬಂದಿ ಸದಸ್ಯರು ಅಧಿಕಾರ ನೀಡದ ಹೊರತು ಇದನ್ನು ಮಾಡುವುದು ಉಲ್ಲಂಘನೆಯಾಗಿದೆ.

ವಿಮಾನ ಹಾರಾಟ ನಡೆಸುತ್ತಿರುವಾಗ ತುರ್ತು ನಿರ್ಗಮನ ದ್ವಾರ ತೆರೆದರೆ ಏನಾಗುತ್ತದೆ?

ಇದು ಸಿನಿಮಾಗಳಲ್ಲಿ ಮಾತ್ರ ಸಂಭವಿಸುತ್ತದೆ. ವಾಸ್ತವದಲ್ಲಿ, ಪ್ರಯಾಣಿಕರು ಅಥವಾ ಸಿಬ್ಬಂದಿ ಇಬ್ಬರೂ ವಿಮಾನದ ಮಧ್ಯದಲ್ಲಿ ಹಾಗೆ ಮಾಡುವುದು ಅಸಾಧ್ಯ. ಏಕೆಂದರೆ ಒತ್ತಡದ ಕ್ಯಾಬಿನ್‌ನಲ್ಲಿ ಬಾಗಿಲಿನ ವಿರುದ್ಧ ತಳ್ಳುವ ಗಾಳಿಯ ಒತ್ತಡವನ್ನು ಮೀರಿ ಬಾಗಿಲು ತೆರೆಯಲು ಮಾನವರಿಗೆ ಶಕ್ತಿ ಇಲ್ಲ. ವಿಮಾನ ಹಾರುವಾಗ ಹೊರಗಿನ ಗಾಳಿಯು ಹಗುರ ಮತ್ತು ಕಡಿಮೆ ಆಮ್ಲಜನಕವನ್ನು ಹೊಂದಿರುವಾಗ, ವಿಮಾನ ಕ್ಯಾಬಿನ್‌ಗಳು ಸಮುದ್ರ ಮಟ್ಟದಿಂದ ಸುಮಾರು 8,000 ಅಡಿಗಳಷ್ಟು ಮೇಲಿದ್ದು ಪರಿಸ್ಥಿತಿಗಳಿಗೆ ಒತ್ತಡಕ್ಕೊಳಗಾಗುತ್ತವೆ. ಆದರೆ ಪ್ರಯಾಣಿಕರು ನಿರಾಯಾಸವಾಗಿ ಉಸಿರಾಡಬಹುದು.

‘ಕಾಕ್‌ಪಿಟ್ ಕಾನ್ಫಿಡೆನ್ಶಿಯಲ್’ ಲೇಖಕ ಮತ್ತು ಜನಪ್ರಿಯ ವಾಯುಯಾನ ವೆಬ್‌ಸೈಟ್ AskThePilot.com ನ ಸೃಷ್ಟಿಕರ್ತ ಏರ್‌ಲೈನ್ ಪೈಲಟ್ ಪ್ಯಾಟ್ರಿಕ್ ಸ್ಮಿತ್ ಪ್ರಕಾರ, “ಒಂದು ವಿಶಿಷ್ಟವಾದ ಪ್ರಯಾಣದ ಎತ್ತರದಲ್ಲಿ, ಎಂಟು ಪೌಂಡ್‌ಗಳಷ್ಟು ಒತ್ತಡವು ಪ್ರತಿ ಚದರ ಇಂಚು ಆಂತರಿಕ ವಿಮಾನದ ಮೇಲೆ ತಳ್ಳುತ್ತದೆ. ಅದು ಪ್ರತಿ ಚದರ ಅಡಿ ಬಾಗಿಲಿನ ವಿರುದ್ಧ 1,100 ಪೌಂಡ್‌ಗಳಿಗಿಂತ ಹೆಚ್ಚು. ಕಡಿಮೆ ಎತ್ತರದಲ್ಲಿಯೂ ಸಹ, ಕ್ಯಾಬಿನ್ ಒತ್ತಡದ ಮಟ್ಟವು ತುಂಬಾ ಕಡಿಮೆಯಿರುತ್ತದೆ, ಒಂದು ಅತ್ಯಲ್ಪ 2 ಪಿಎಸ್ಐ ವ್ಯತ್ಯಾಸವಿದ್ದರೂ ಬಾಗಿಲು ತೆರೆಯುವುದು ಸುಲಭವಲ್ಲ. ಬಾಗಿಲುಗಳು ವಿದ್ಯುತ್ ಮತ್ತು/ಅಥವಾ ಯಾಂತ್ರಿಕ ಲಾಚ್‌ಗಳಿಂದ ಮತ್ತಷ್ಟು ಸುರಕ್ಷಿತವಾಗಿರುತ್ತವೆ.

ಇದನ್ನೂ ಓದಿ: Tejasvi surya: ವಿಮಾನದ ಎಮೆರ್ಜೆನ್ಸಿ ಎಕ್ಸಿಟ್​ ಓಪನ್ ಮಾಡಿದ ಸಂಸದ ತೇಜಸ್ವಿ ಸೂರ್ಯ, ಇಂಡಿಗೋ ವಿಮಾನ 2 ತಾಸು ತಡ

ಟೇಕ್‌ಆಫ್ ಮಾಡುವ ಮೊದಲು ಮತ್ತು ಲ್ಯಾಂಡಿಂಗ್ ನಂತರ, ಪೈಲಟ್ ಕ್ಯಾಬಿನ್ ಸಿಬ್ಬಂದಿಗೆ ಬಾಗಿಲುಗಳನ್ನು ” arm ” ಅಥವಾ ” disarm ” ಎಂದು ಹೇಳುತ್ತಾರೆ.ಹಾಗೆಂದರೆ ಅರ್ಥವೇನು?

ಬಾಗಿಲು ‘ arm ‘ ಆಗಿದ್ದರೆ, ಗಾಳಿ ತುಂಬಬಹುದಾದ ತುರ್ತು ನಿರ್ಗಮನ ಸ್ಲೈಡ್ ಸ್ವಯಂಚಾಲಿತವಾಗಿ ನಿಯೋಜಿಸುತ್ತದೆ ಮತ್ತು ಬಾಗಿಲು ತೆರೆದರೆ ಉಬ್ಬಿಕೊಳ್ಳುತ್ತದೆ ಎಂದರ್ಥ. ಸ್ಲೈಡ್ ಮಾಡಲು ಹೆಚ್ಚು ಶಕ್ತಿ ಬೇಕು ಇದು ಆರು ಸೆಕೆಂಡುಗಳಲ್ಲಿ ಉಬ್ಬಿಕೊಳ್ಳಬಹುದು. ಬಾಗಿಲು ‘ armed ‘ ಆಗಿದ್ದರೆ, ಅದು ತುರ್ತು ಸ್ಥಳಾಂತರಿಸುವಿಕೆಯಲ್ಲಿ ಬಳಕೆಗೆ ಸಿದ್ಧವಾಗಿದೆ. ಬಾಗಿಲನ್ನು disarmed, ಗಾಳಿ ತುಂಬಬಹುದಾದ ಸ್ಲೈಡ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದರ್ಥ. “ವಿಮಾನವು ಗೇಟ್ ಅನ್ನು ಸಮೀಪಿಸುತ್ತಿದ್ದಂತೆ, ಕ್ಯಾಬಿನ್ ಸಿಬ್ಬಂದಿ doors to manual ಅಥವಾ disarm doors ಎಂದು ಹೇಳುವುದನ್ನು ನೀವು ಕೆಲವೊಮ್ಮೆ ಕೇಳುತ್ತೀರಿ. ಇದು ಸ್ಲೈಡ್‌ಗಳ ಸ್ವಯಂಚಾಲಿತ ನಿಯೋಜನೆ ಕಾರ್ಯಕ್ಕೆ ಸಂಬಂಧಿಸಿದೆ. ಆ ಸ್ಲೈಡ್‌ಗಳು ವ್ಯಕ್ತಿಗೆ ಬಡಿದರೆ ಸತ್ತೇ ಹೋಗುವಷ್ಟು ಸಾಕಷ್ಟು ಬಲದಿಂದ ಬಿಚ್ಚಿಕೊಳ್ಳಬಹುದು. ಅವುಗಳನ್ನು ಜೆಟ್ ಸೇತುವೆಯ ಮೇಲೆ ಅಥವಾ ಕ್ಯಾಟರಿಂಗ್ ಟ್ರಕ್‌ಗೆ ಬಡಿಯಲು ಬಿಡುವುದಿಲ್ಲ ಎಂದು ಸ್ಮಿತ್ ಹೇಳುತ್ತಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:48 pm, Wed, 18 January 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್