Tejasvi surya: ವಿಮಾನದ ಎಮೆರ್ಜೆನ್ಸಿ ಎಕ್ಸಿಟ್ ಓಪನ್ ಮಾಡಿದ ಸಂಸದ ತೇಜಸ್ವಿ ಸೂರ್ಯ, ಇಂಡಿಗೋ ವಿಮಾನ 2 ತಾಸು ತಡ
ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರು ಡಿಸೆಂಬರ್ 10, 2022ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಯಾವುದೇ ಅನುಮತಿಯಿಲ್ಲದೆ ವಿಮಾನದ ತುರ್ತು ನಿರ್ಗಮನವನ್ನು ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ (Tejasvi surya) ಅವರು ಡಿಸೆಂಬರ್ 10, 2022ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಯಾವುದೇ ಅನುಮತಿಯಿಲ್ಲದೆ ವಿಮಾನದ ತುರ್ತು ನಿರ್ಗಮನವನ್ನು ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಈ ಪ್ರಕರಣ ತಡವಾಗಿ ಬೆಳಿಕಿಗೆ ಬಂದಿದೆ. ಇದರಿಂದ ವಿಮಾನಯಾನ 2 ತಾಸು ತಡವಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಬಗ್ಗೆ ವಿಮಾನಯಾನ ಸಂಸ್ಥೆ ಇಂಡಿಗೋ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಲು ನಿರಾಕರಿಸಿದೆ.
ತಿರುವನಂತಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ತುರ್ತು ದ್ವಾರ ತೆರೆದು ಆತಂಕ ಸೃಷ್ಟಿಸಿದ್ದಾರೆ. ಇದು ಪ್ರಯಾಣಿಕರಲ್ಲಿ ತೀವ್ರ ಭಯ ಮತ್ತು ಆತಂಕ ಉಂಟುಮಾಡಿತು. ಈ ಘಟನೆಯು ಕಳೆದ ವರ್ಷ ಡಿಸೆಂಬರ್ 10ರಂದೇ ಸಂಭವಿಸಿದೆ ಎಂದು ವರದಿಯಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈಗ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್ಟಾಕ್ ಮಾಡಿದ ಗಗನಸಖಿಯ ವಿಡಿಯೋ ವೈರಲ್
ಪ್ರಯಾಣಿಕರು ಇಂಡಿಗೋ 6E ವಿಮಾನದಲ್ಲಿ (6E-7339) ಪ್ರಯಾಣಿಸುತ್ತಿದ್ದರು. ಅದು ಚೆನ್ನೈನಿಂದ ಟೇಕ್ ಆಫ್ ಆಗಿತ್ತು. ತಿರುವನಂತಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ತೇಜಸ್ವಿ ಸೂರ್ಯ ತುರ್ತು ಬಾಗಿಲು ತೆರೆದು ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಭಯ ಮೂಡಿಸಿದ್ದರು. ಅದಾದ ಒಂದು ತಿಂಗಳ ನಂತರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಜಿಡಿಸಿಎ) ಈ ಬಗ್ಗೆ ತನಿಖೆಗೆ ಆದೇಶಿಸಿದೆ.
“ಡಿಸೆಂಬರ್ 10 ರಂದು, ಇಂಡಿಗೋ 6E ಫ್ಲೈಟ್ 6E-7339 ಚೆನ್ನೈನಿಂದ ತಿರುವನಂತಪುರಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಲ್ಲಿ ಭಯವನ್ನುಂಟುಮಾಡುವ ಮೂಲಕ ಪ್ರಯಾಣಿಕರೊಬ್ಬರು ತುರ್ತು ಬಾಗಿಲು ತೆರೆದಿದ್ದರು. DGCA ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದೆ” ಎಂದು DGCA ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Tue, 17 January 23