Jalebi Baba:100ಕ್ಕಿಂತಲೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದ ಜಲೇಬಿ ಬಾಬಾಗೆ 14 ವರ್ಷ ಜೈಲು ಶಿಕ್ಷೆ

ಹರ್ಯಾಣದ ತೋಹಾನಾ ಮೂಲದ ಈ ವಂಚಕ ಬಾಬಾ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ರಹಸ್ಯವಾಗಿ ಅಶ್ಲೀಲ ಚಿತ್ರಗಳನ್ನು ತಯಾರಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ.

Jalebi Baba:100ಕ್ಕಿಂತಲೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದ ಜಲೇಬಿ ಬಾಬಾಗೆ 14 ವರ್ಷ ಜೈಲು ಶಿಕ್ಷೆ
ಜಲೇಬಿ ಬಾಬಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 17, 2023 | 3:03 PM

ಹರ್ಯಾಣದ (Haryana) ಫತೇಹಾಬಾದ್‌ನಲ್ಲಿ ಆಧ್ಯಾತ್ಮಿಕ ಆಶ್ರಮದ ಹೆಸರಿನಲ್ಲಿ ಪೋರ್ನ್ ಇಂಡಸ್ಟ್ರಿ ನಡೆಸುತ್ತಿದ್ದ ಬಿಲ್ಲುರಾಮ್ ಅಕಾ ಬಾಬಾ ಅಮರಪುರಿ, ಅಕಾ ಜಲೇಬಿ ಬಾಬಾ (Jalebi Baba), 100 ಕ್ಕೂ ಹೆಚ್ಚು ಹುಡುಗಿಯರ ಮೇಲೆ ಅತ್ಯಾಚಾರ ನಡೆಸಿ ನಂತರ ವಿಡಿಯೊ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈತನಿಗೆ ನ್ಯಾಯಾಲಯವು  14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಜಲೇಬಿ ಬಾಬಾ ಎಂದೇ ಖ್ಯಾತರಾಗಿರುವ ಬಿಲ್ಲುರಾಮ್ ಫತೇಹಾಬಾದ್‌ನಲ್ಲಿ ಅಧ್ಯಾತ್ಮ ಆಶ್ರಮದ ಹೆಸರಿನಲ್ಲಿ ಭೂತೋಚ್ಚಾಟನೆ ಮತ್ತು ತಂತ್ರ-ಮಂತ್ರದ ಮಾಡಿ ತನ್ನ ಕಪಿಮುಷ್ಠಿಯಲ್ಲಿ ಸಿಕ್ಕಿಬಿದ್ದ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ.

90 ಹುಡುಗಿಯರ 120 ಪೋರ್ನ್ ಚಿತ್ರಗಳು ಪತ್ತೆ

ಹರ್ಯಾಣದ ತೋಹಾನಾ ಮೂಲದ ಈ ವಂಚಕ ಬಾಬಾ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ರಹಸ್ಯವಾಗಿ ಅಶ್ಲೀಲ ಚಿತ್ರಗಳನ್ನು ತಯಾರಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ಆರೋಪದ ಮೇಲೆ ಫತೇಹಾಬಾದ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಲ್ವಂತ್ ಸಿಂಗ್ ಬಾಬಾಗೆ 14 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 35,000 ರೂ. ದಂಡ ವಿಧಿಸಿದ್ದಾರೆ. ಜಲೇಬಿ ಬಾಬಾ ಹರ್ಯಾಣದ ತೋಹಾನಾದಲ್ಲಿ ಬಾಲಕನಾಥ್ ಆಶ್ರಮದ ಸೋಗಿನಲ್ಲಿ ಈ ದಂಧೆ ನಡೆಸುತ್ತಿದ್ದ.ಅಲ್ಲಿ ಪೊಲೀಸರು ದಾಳಿ ನಡೆಸಿ 90 ಹುಡುಗಿಯರ 120 ಕ್ಕೂ ಹೆಚ್ಚು ಅಶ್ಲೀಲ ಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಡಿಯೊ ಕರೆ ಮಾಡುತ್ತಿದ್ದ ಬಾಬಾ

ದಾಳಿಯಲ್ಲಿ ಸಿಕ್ಕ ಚಿತ್ರಗಳಲ್ಲಿ ಬಾಬಾನ ಆಶ್ರಮದಲ್ಲಿ ನಿರ್ಮಿಸಿದ ನೆಲಮಾಳಿಗೆ, ಅದರಲ್ಲಿ ಇಟ್ಟಿರುವ ವಸ್ತುಗಳು, ಸುತ್ತಮುತ್ತಲಿನ ಪರಿಸರ ಎಲ್ಲವೂ ಒಂದೇ ಆಗಿದೆ., ಆದರೆ ಪ್ರತಿ ವಿಡಿಯೊದಲ್ಲಿ ಹುಡುಗಿ ಪ್ರತಿ ಬಾರಿ ಬೇರೆ ಬೇರೆ ಆಗಿರುತ್ತಿತ್ತು. ಇಷ್ಟೇ ಅಲ್ಲ, ವಿಡಿಯೊದಲ್ಲಿ ಆ ಹುಡುಗಿಯರನ್ನು ಬಾಬಾ ನಿರಂತರವಾಗಿ ಕರೆ ಮಾಡುತ್ತಿದ್ದ. ಅವರು ಏನು ಮಾಡಿದರೂ ಅದನ್ನು ಅವರು ತಮ್ಮ ಸ್ವಂತ ಇಚ್ಛೆ ಮತ್ತು ಸಂತೋಷದಿಂದ ಮಾಡುತ್ತಿದ್ದಾರೆ ಎನ್ನುವಂತೆ ಕಾಣುತ್ತದೆ. ಆದರೆ ಮೊದಲು ಬಾಬಾ ಹುಡುಗಿಯರನ್ನು ನಶೆ ವಸ್ತು ನೀಡುತ್ತಿದ್ದ ಮತ್ತು ಹಿಪ್ನಾಟೈಸ್ ಮಾಡುತ್ತಿದ್ದ ಎನ್ನಲಾಗಿದೆ.

ಈ ಹಿಂದೆ ಜಿಲೇಬಿ ಅಂಗಡಿ ನಡೆಸುತ್ತಿದ್ದ

ಬಿಲ್ಲುರಾಮ್ ಮೊದಲು ಜಿಲೇಬಿ ಅಂಗಡಿ ನಡೆಸುತ್ತಿದ್ದ, ನಂತರ ಆ ಅಂಗಡಿ ಮುಚ್ಚಿ ಆಸ್ತಾನ ಹೆಸರಿನಲ್ಲಿ ಅಂಗಡಿ ತೆರೆದು ಸೆಕ್ಸ್ ಮತ್ತು ಬ್ಲಾಕ್‌ಮೇಲಿಂಗ್ ಕಂಪನಿ ನಡೆಸುತ್ತಿದ್ದ. ಅಕ್ಟೋಬರ್ 13, 2017 ರಂದು, 20 ವರ್ಷಗಳಿಂದ ನಡೆಯುತ್ತಿರುವ ಈ ಅಂಗಡಿಯಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಧೈರ್ಯ ತೋರಿ ತೋಹಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಬಾಬಾನನ್ನು ಬಂಧಿಯಿತು. ಆದರೆ, ತನಿಖೆಯ ವೇಳೆ ಮಹಿಳೆಯ ಮೇಲೆಯೇ ಅನುಮಾನ ಮೂಡುವಂತೆ ಮಾಡಿ ಜೈಲಿನಿಂದ ಹೊರಬಂದಿದ್ದ ಈ ಬಾಬಾ.. ಇದಾದ ನಂತರ ಬೇರೆ ಯಾವ ಮಹಿಳೆಯೂ ಬಾಬಾ ವಿರುದ್ಧ ದೂರು ನೀಡಲು ಧೈರ್ಯ ಮಾಡಲಿಲ್ಲ ಮತ್ತು ಜಲೇಬಿ ಬಾಬಾ ತನ್ನ ವ್ಯವಹಾರವನ್ನು ಮುಂದುವರೆಸಿದ್ದ ಎಂದು ಝೀ ನ್ಯೂಸ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ