ಸುಭಾನಲ್ಲಾಹ್; ಪಾಕಿಸ್ತಾನಿ ವರ ತನ್ನ ಹುಡುಗಿಗಾಗಿ ಫನಾ ಸಿನೆಮಾದ ಹಾಡು ಹಾಡಿದಾಗ
Pakistani : ಪಾಕಿಸ್ತಾನಿ ಗಾಯಕ ಸಾಮಿ ರಶೀದ್ ತಮ್ಮ ಮದುವೆಯಂದು ಈ ರೊಮ್ಯಾಂಟಿಕ್ ಹಾಡನ್ನು ಹಾಡಿದ್ದಾರೆ. ಸುಮಾರು 2 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 3.5 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
Viral Video : ಪಾಕಿಸ್ತಾನದ ಸಾಮಾಜಿಕ ಮಾಧ್ಯಮದ ಪ್ರಭಾವಿ ವ್ಯಕ್ತಿಗಳು ಆಗಾಗ ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕುವುದನ್ನು ನೋಡಿದ್ದೀರಿ. ಮೇರಾ ದಿಲ್ ಏ ಪುಕಾರೆ ಆಜಾ ಮದುವೆಯೊಂದರಲ್ಲಿ ಪಾಕಿಸ್ತಾನಿ ಯುವತಿ ಈ ಹಾಡಿಗೆ ಹೆಜ್ಜೆ ಹಾಕಿದಾಗ ಅವಳ ನೃತ್ಯದ ಬಗ್ಗೆ ಸಾಕಷ್ಟು ಪರವಿರೋಧಗಳ ಹೊಳೆ ಹರಿದು ಆ ರೀಲ್ ವೈರಲ್ ಆಗಿ ಹೋಯಿತು. ಸುಮಾರು ಎರಡು ತಿಂಗಳುಗಳ ಕಾಲ ಇದೇ ಹಾಡಿಗೆ ಜಗತ್ತಿನ ವಿವಿಧ ಭಾಷೆಯ ಸಾಮಾಜಿಕ ಜಾಲತಾಣಗಳ ಪ್ರಭಾವಿ ವ್ಯಕ್ತಿಗಳು ಹೆಜ್ಜೆ ಹಾಕಿದರು. ಅಂತೂ ನಮ್ಮ ಲತಾದೀ ಹೀಗೆ ಮತ್ತೆ ಮತ್ತೆ ಎಲ್ಲರಲ್ಲಿಯೂ ಚೈತನ್ಯ ತುಂಬಿದರು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಪಾಕಿಸ್ತಾನಿ ವರನೊಬ್ಬ ವಧುವಿನೆದುರು ಚಾಂದ್ ಸಿಫಾರಿಷ್ ಹಾಡನ್ನು ಗಿಟಾರ್ ನುಡಿಸಿಕೊಂಡು ಹಾಡಿದ್ದಾನೆ.
View this post on Instagram
2006ರಲ್ಲಿ ಬಿಡುಗಡೆಯಾದ ಅಮೀರ್ಖಾನ್ ಕಾಜೋಲ್ ಅಭಿನಯದ ಫನಾ ಸಿನೆಮಾದ ಹಾಡಿದು. ಶಾನ್ ಮತ್ತು ಕೈಲಾಶ್ ಖೇರ್ ಈ ಹಾಡನ್ನು ಹಾಡಿದ್ದಾರೆ. ಇದೀಗ ಗಾಯಕ ಸಾಮಿ ರಶೀದ್ ತಮ್ಮ ಮದುವೆಯ ದಿನ ಹೆಂಡತಿಯನ್ನು ಎದುರಿಗೆ ಕೂರಿಸಿಕೊಂಡು ಈ ರೊಮ್ಯಾಂಟಿಕ್ ಹಾಡನ್ನು ಹಾಡಿದ್ದಾರೆ. ಸುಮಾರು 2 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 3.5 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ : ‘ತಾಯಿ, ಸಿನೆಮಾಗಾಗಿ ಹಾಡುವಿರೆ? ನಿಮ್ಮ ಫೋನ್ ನಂಬರ್ ಕಳುಹಿಸಿ’ ಸೋನು ಸೂದ್ ಟ್ವೀಟ್
ನೀವು ನಿಮ್ಮ ಹೆಂಡತಿಯನ್ನು ಪ್ರೀತಿಸುವ ಬಗೆ ಅತ್ಯಂತ ಮಧುರವಾಗಿದೆ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ನಿಮ್ಮ ಹೆಂಡತಿಯನ್ನು ನೀವು ಕೊನೆಯವರೆಗೂ ಚೆನ್ನಾಗಿ ನೋಡಿಕೊಳ್ಳುತ್ತೀರೆಂಬ ಭರವಸೆ ನಮಗಿದೆ. ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:04 pm, Sat, 28 January 23