Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಡೀರಾ ಬಿಳಿನವಿಲ ಸೊಬಗ; ವೈರಲ್ ಆಗಿರುವ ಈ ವಿಡಿಯೋ ನೋಡಿ

Peacock: ನೆಟ್ಟಿಗರು ಕುತೂಹಲದಿಂದ ಈ ಬಿಳಿನವಿಲು ನೋಡುತ್ತ ಮೈಮರೆಯುತ್ತಿದ್ದಾರೆ. ವಾರಾಂತ್ಯಕ್ಕೆ ಇದಕ್ಕಿಂತ ತಂಪಾದ ದೃಶ್ಯ ಬೇಕೆ ಎಂದು ಕೊಂಡಾಡುತ್ತಿದ್ದಾರೆ.

ಕಂಡೀರಾ ಬಿಳಿನವಿಲ ಸೊಬಗ; ವೈರಲ್ ಆಗಿರುವ ಈ ವಿಡಿಯೋ ನೋಡಿ
ಬಿಳಿನವಿಲು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 27, 2023 | 4:39 PM

Viral News : ನವಿಲಿನ ಮೋಹಕತೆಗೆ ಮರುಳಾಗದವರು ಯಾರಿದ್ದಾರೆ? ಗಂಡುನವಿಲು ಗರಿ ಬಿಚ್ಚಿತೆಂದರೆ ಜಗತ್ತೇ ಮರೆಯುವಷ್ಟು ಸುಂದರ ಅನುಭೂತಿ. ಅಂಥ ಮನಾಕರ್ಷಕ ಬಣ್ಣಗಳು ಅದರ ಮೈತುಂಬಾ, ಕತ್ತಿನಗುಂಟ ಮತ್ತು ಗರಿಗಳ ತುಂಬಾ ಅಡಕವಾಗಿರುತ್ತವೆ. ಆದರೆ ಬಿಳೀ ನವಿಲು ನೋಡಿದ್ದೀರಾ? ಎಲ್ಲಿಯೂ ಯಾವ ಬಣ್ಣದ ಛಾಯೆಯೂ ಅದರ ಗರಿಗಳಲ್ಲಿ ಕಾಣದು. ಬಿಳಿ ಎಂದರೆ ಅಪ್ಪಟ ಬಿಳಿ. ಇದೀಗ ವೈರಲ್ ಆಗಿರುವ ಈ ಅಪರೂಪದ ನವಿಲಿನ ವಿಡಿಯೋ ನೋಡಿ.

ಈತನಕ ಈ ವಿಡಿಯೋ ಅನ್ನು ಸುಮಾರು 75,000 ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ತಮ್ಮ ಅಂಗಳಕ್ಕೆ ಬಂದ ನವಿಲುಗಳ ಫೋಟೋ ಹಾಕಿದ್ದಾರೆ. ಪ್ರವಾಸಕ್ಕೆ ಹೋದಾಗ ನೋಡಿದ ಇಂಥ ಬಿಳಿನವಿಲುಗಳ ವಿಡಿಯೋ ಹಾಕಿದ್ಧಾರೆ.

ಇದನ್ನಝೂ ಓದಿ : ಟಾಮಿ ವೆಡ್ಸ್​ ಜೈಲಿ; ಉತ್ತರ ಪ್ರದೇಶದಲ್ಲಿ ನಾಯಿಗಳ ಮದುವೆ; ವಿಡಿಯೋ ವೈರಲ್

ಪ್ರಕೃತಿಯ ಮುಂದೆ ಮನುಷ್ಯ ಎಷ್ಟು ಸಣ್ಣವ ಎಂದಿದ್ದಾರೆ ಕೆಲವರು. ಎಂಥ ಲಯವಿದೆ ನೋಡಿ ಆ ಗರಿಗಳನ್ನು ಬಿಚ್ಚುವಿಕೆಯಲ್ಲಿ ಮತ್ತು ಅದನ್ನು ಪ್ರದರ್ಶಿಸುವಲ್ಲಿ ಎಂದಿದ್ದಾರೆ ಒಬ್ಬರು. ತಾನೊಬ್ಬ ದೊಡ್ಡ ಕಲಾವಿದೆ. ಅದ್ಭುತವಾದ ವೇದಿಕೆಯ ಮೇಲೆ ನಿಂತಿದ್ದೇನೆ. ಸಾವಿರಾರು ಜನ ನನ್ನ ಪ್ರದರ್ಶನ ನೋಡುತ್ತಿದ್ದಾರೆ ಎಂಬ ಠೀವಿಯಲ್ಲಿ ಅದೆಷ್ಟು ಚೆಂದ ಗರಿಚಾಚುತ್ತದೆಯಲ್ಲ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ಅಪರಾಧಿ ನಾಯಿ? ಸಾಕುನಾಯಿಯೊಂದು ಮನುಷ್ಯನಿಗೆ ಗುಂಡು ಹಾರಿಸಿ ಕೊಂದಿದೆ

ಪ್ರಕೃತಿಯ ಈ ಅನನ್ಯ ಕೊಡುಗೆಯನ್ನು ನಾವು ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು. ಪ್ರಾಣಿ ಪಕ್ಷಿಗಳನ್ನು ದಯೆಯಿಂದ ನೋಡಬೇಕು. ಅವುಗಳಿಗೆ ಬೇಕಾದ ವನ್ಯಸಂಪತ್ತನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಅಂದಾಗಲೇ ಮುಂದಿನ ಪೀಳಿಗೆಗೂ ಇಂಥ ದೃಶ್ಯಗಳನ್ನು ಸವಿಯುವ ಅವಕಾಶವಿರುತ್ತದೆ. ಅಲ್ಲವೆ?

ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 4:34 pm, Fri, 27 January 23