ಗಣರಾಜ್ಯೋತ್ಸವ: ಪಿಯಾನೋದಲ್ಲಿ ಜನಗಣಮನ ನುಡಿಸಿ ಗೌರವ ಸಲ್ಲಿಸಿದ ಇಸ್ರೇಲಿ ಕಾನ್ಸುಲ್ ಜನರಲ್
Republic Day : ಸರ್, ‘ಗಾಯೇ ತವ ಜಯ ಗಾಥಾ’ ಈ ಸಾಲನ್ನು ನೀವು ಮರೆತಿದ್ದೀರಿ ಎಂದು ಒಬ್ಬರು ಹೇಳಿದ್ದಕ್ಕೆ, ‘ಕ್ಷಮಿಸಿ ಮುಂದಿನ ಸಲ ಸರಿಯಾಗಿ ನುಡಿಸುವೆ. ಆದರೆ ನಿಮ್ಮ ರಾಷ್ಟ್ರಗೀತೆ ಬಹಳ ಚೆಂದವಿದೆ’ ಎಂದು ಕೊಬ್ಬಿ ಉತ್ತರಿಸಿದ್ದಾರೆ.
Viral Video : ಪ್ರೀತಿಸುವುದು ಎಂದರೆ ನಮ್ಮ ನೆಲ ನಮ್ಮ ಸಂಸ್ಕೃತಿಯನ್ನಷ್ಟೇ ಅಲ್ಲ. ಅನ್ಯ ನೆಲವನ್ನೂ ಸಂಸ್ಕೃತಿಗಳನ್ನೂ ಗೌರವಿಸುವುದು. ಅಂದಾಗ ಮಾತ್ರ ಮಾನವೀಯತೆ ನಮ್ಮಲ್ಲಿ ಜಾಗೃತವಾಗಿದೆ ಎಂದರ್ಥ. ನಿನ್ನೆಯಷ್ಟೇ ಇಡೀ ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿದೆ. ಜಗತ್ತಿನಾದ್ಯಂತ ಅನೇಕರು ಆನ್ಲೈನ್ ಮೂಲಕ ಕೂಡ ಈ ಸಂಭ್ರಮಕ್ಕೆ ಕಾರಣೀಭೂತರಾಗಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಇಸ್ರೆಲ್ನ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ 74ನೇ ಗಣರಾಜ್ಯೋತ್ಸವದ ದಿನದಂದು ಪಿಯಾನೋದಲ್ಲಿ ನಮ್ಮ ರಾಷ್ಟ್ರಗೀತೆ ಜನಗಣಮನ ನುಡಿಸಿ ಗೌರವ ಸಲ್ಲಿಸಿದರು.
In respect to ??, I tried my best to play India’s beautiful anthem, “Jana Gana Mana”.
ಇದನ್ನೂ ಓದಿHappy Republic Day#RepublicDay2023 #RepublicDay pic.twitter.com/f7X78t1koL
— Kobbi Shoshani ?? (@KobbiShoshani) January 25, 2023
‘ಭಾರತದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸುಂದರವಾದ ರಾಷ್ಟ್ರಗೀತೆ ಜನಗಣಮನ ನುಡಿಸಲು ಪ್ರಯತ್ನಿಸಿದ್ದೇನೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಟ್ವೀಟ್ ಮಾಡಿದ್ದಾರೆ. 12 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 1,600 ಜನರು ರೀಟ್ವೀಟ್ ಮಾಡಿದ್ದಾರೆ. 11, 300 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.
ಇದನ್ನೂ ಓದಿ : ಯಾರಿಗೆ ಬೇಕು ರುಚಿರುಚಿ ಗರಿಗರಿಯಾದ ಮಿನಿಯೇಚರ್ ಜಿಲೇಬಿ
ಸರ್, ಗಾಯೇ ತವ ಜಯ ಗಾಥಾ ಈ ಸಾಲನ್ನು ನುಡಿಸುವುದನ್ನು ನೀವು ಮರೆತಿದ್ದೀರಿ ಎಂದು ಒಬ್ಬರು ಹೇಳಿದ್ದಾರೆ. ಕ್ಷಮಿಸಿ ಮುಂದಿನ ಸಲ ಸರಿಯಾಗಿ ನುಡಿಸುವೆ. ಆದರೆ ನಿಮ್ಮ ರಾಷ್ಟ್ರಗೀತೆ ಬಹಳ ಚೆನ್ನಾಗಿದೆ ಎಂದು ಕೊಬ್ಬಿ ಉತ್ತರಿಸಿದ್ದಾರೆ. ತುಂಬಾ ಹೃದಯಸ್ಪರ್ಶಿಯಾಗಿದೆ, ಧನ್ಯವಾದ ಇಸ್ರೇಲ್ ಎಂದಿದ್ದಾರೆ ಒಬ್ಬರು. ಜೈಹಿಂದ್ ಎಂದು ಅನೇಕ ಭಾರತೀಯರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಆನ್ಲೈನ್ ಆರ್ಡರ್; ಸ್ಯಾನಿಟರಿ ಪ್ಯಾಡ್ ಜೊತೆ ಚಾಕೊಲೇಟ್ ಕುಕೀಸ್ ಪಡೆದ ಮಹಿಳೆ
ಪರಸ್ಪರ ಸಂಬಂಧವನ್ನು ಕಾಪಾಡಿಕೊಳ್ಳಲು ಹೀಗೆ ಸಣ್ಣಪುಟ್ಟ ನಡೆಗಳಿಂದ ಗೌರವಿಸುವುದನ್ನು ಕಲಿಯಬೇಕು. ನೀವು ಸರಿಯಾದ ಹಾದಿಯಲ್ಲಿದ್ದೀರಿ ಸರ್ ಎಂದು ಕೆಲವರು ಹೇಳಿದ್ದಾರೆ. ನಿಜಕ್ಕೂ ನಮ್ಮ ರಾಷ್ಟ್ರಗೀತೆ ಬಹಳ ಚೆನ್ನಾಗಿದೆ, ನಿಮ್ಮ ಈ ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:35 pm, Fri, 27 January 23