ಆನ್ಲೈನ್ ಆರ್ಡರ್; ಸ್ಯಾನಿಟರಿ ಪ್ಯಾಡ್ ಜೊತೆ ಚಾಕೊಲೇಟ್ ಕುಕೀಸ್ ಪಡೆದ ಮಹಿಳೆ
Swiggy : ಏನೋ ಆರ್ಡರ್ ಮಾಡಿದರೆ ಇನ್ನೇನೋ ತಲುಪುವುದು ಮಾಮೂಲಿ. ಆದರೆ ನೀವು ಆರ್ಡರ್ ಮಾಡಿದ್ದರ ಜೊತೆ ನಿಮಗಿಷ್ಟವಾದ ಗಿಫ್ಟ್ ಸರ್ಪ್ರೈಝ್ ಆಗಿ ದೊರೆತರೆ? ಓದಿ ಸ್ವಿಗ್ಗಿ ಇನ್ಸ್ಟಾಮಾರ್ಟ್ನ ಈ ಚಾಕೊಲೇಟ್ ಕುಕೀಸ್ ಕಥೆ.
Viral Video : ಮೊಬೈಲ್, ಜೀನ್ಸ್ ಪ್ಯಾಂಟ್ ಇನ್ನೊಂದೇನೋ ಆರ್ಡರ್ ಮಾಡಿದರೆ ಆಲೂಗಡ್ಡೆ, ಈರುಳ್ಳಿ, ಸಾಬೂನು ಹೀಗೆ ಏನೇನೋ ಸಾಮಾನುಗಳನ್ನು ಗ್ರಾಹಕರು ಪಡೆದ ವರದಿಯನ್ನು ಈ ಹಿಂದೆ ಓದಿದ್ದೀರಿ. ಇದೀಗ ಸ್ವಿಗ್ಗಿ ಇನ್ಸ್ಟಾಮಾರ್ಟ್ನಿಂದ ಮಹಿಳೆಯೊಬ್ಬರು ಸ್ಯಾನಿಟರಿ ಪ್ಯಾಡ್ಗಾಗಿ ಆರ್ಡರ್ ಮಾಡಿದಾಗ ಅವರಿಗೆ ಪ್ಯಾಡ್ ಜೊತೆ ಚಾಕೊಲೇಟ್ ಕುಕೀಸ್ ಕೂಡ ದೊರೆತಿದೆ. ನೆಟ್ಟಿಗರೆಲ್ಲ ಆಫರ್ ಬಹಳ ಚೆನ್ನಾಗಿದೆ ಎನ್ನುತ್ತಿದ್ದಾರೆ.
I ordered sanitary pads from @SwiggyInstamart and found a bunch of chocolate cookies at the bottom of the bag.
ಇದನ್ನೂ ಓದಿPretty thoughtful!
But not sure who did it, swiggy or the shopkeeper?
— Sameera (@sameeracan) January 25, 2023
ಆರ್ಡರ್ ಮಾಡಿದ 15 ನಿಮಿಷದಲ್ಲಿ ಗ್ರಾಹಕರನ್ನು ತಲುಪುತ್ತದೆ ಸ್ವಿಗ್ಗಿ ಇನ್ಸ್ಟಾಮಾರ್ಟ್. ಹಾಗಾಗಿ ದೇಶದಾದ್ಯಂತ ಇದು ಇಂದು ಜನಪ್ರಿಯ ಡೆಲಿವರಿ ಕಂಪೆನಿಗಳಲ್ಲಿ ಒಂದಾಗಿದೆ. ಸಮೀರಾ ಎನ್ನುವವರು ಈ ಕಂಪೆನಿಯ ಮೂಲಕ ಸ್ಯಾನಿಟರಿ ಪ್ಯಾಡ್ ಆರ್ಡರ್ ಮಾಡಿದಾಗ ಅವರಿಗೆ ಪ್ಯಾಡ್ ಜೊತೆ ಚಾಕೋಲೇಟ್ ಕುಕೀಸ್ ಕೂಡ ಸಿಕ್ಕಿದೆ. ಆ ವಿಷಯವನ್ನು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದು ಜೀನ್ಸ್ ಪ್ಯಾಂಟ್, ಮಹಿಳೆಯ ಕೈಗೆ ಸಿಕ್ಕಿದ್ದು ಈರುಳ್ಳಿ
‘ನಾನು ಸ್ಯಾನಿಟರಿ ಪ್ಯಾಡ್ ಮಾಡಿದೆ. ಆದರೆ ಚೀಲದಡಿ ಕುಕೀಸ್ ಕೂಡ ಇತ್ತು. ಇದು ಅಂಗಡಿಯವರಿಂದ ಆದ ಸಿಹಿಪ್ರಮಾದವೋ ಅಥವಾ ಸ್ವಿಗ್ಗಿಯವರದೋ?’ ಎಂದಿದ್ದಾರೆ ಸಮೀರಾ. ಈ ಟ್ವೀಟ್ ಅನ್ನು ಸ್ವಿಗ್ಗಿ ಇನ್ಸ್ಟಾಮಾರ್ಟ್ನವರಿಗೆ ಟ್ಯಾಗ್ ಮಾಡಿದ ಹಿನ್ನೆಲೆಯಲ್ಲಿ ಸ್ವಿಗ್ಗಿ ಕೇರ್, ‘ನೀವ ಆಹ್ಲಾದಕರವಾದ ದಿನವನ್ನು ಕಳೆಯಬೇಕೆಂದು ನಾವು ಇಚ್ಛಿಸುತ್ತೇವೆ ಸಮೀರಾ’ ಎಂದು ಪ್ರತಿಕ್ರಿಯಿಸಿದೆ.
ಇದನ್ನೂ ಓದಿ : ಯಾರಿಗೆ ಬೇಕು ರುಚಿರುಚಿ ಗರಿಗರಿಯಾದ ಮಿನಿಯೇಚರ್ ಜಿಲೇಬಿ
ನಿಮಗೆ ಕುಕೀಸ್ ಸಿಕ್ಕಿದ್ದು ಒಳ್ಳೆಯದೇ, ಸ್ವಿಗ್ಗಿ ತನ್ನ ಪ್ರಚಾರಕ್ಕಾಗಿ ಮತ್ತು ಗ್ರಾಹಕರನ್ನು ಖುಷಿಪಡಿಸಲು ಹೀಗೆ ಉಚಿತ ಉಡುಗೊರೆಗಳನ್ನು ಕೊಡುತ್ತಿರುತ್ತದೆ ಎಂದಿದ್ದಾರೆ ನೆಟ್ಟಿಗರು. ನಾನು ಹಿಂದೆ ಆರ್ಡರ್ ಮಾಡಿದಾಗೆಲ್ಲ ಬಿಸ್ಕೆಟ್, ಚಾಕೊಲೇಟ್, ವೇಫರ್ಗಳನ್ನು ಸ್ವಿಗ್ಗಿ ಕಳಿಸಿದೆ ಎಂದಿದ್ದಾರೆ ಕೆಲವರು. ಇದು ಒಳ್ಳೆಯ ನಡೆ ಎಂದಿದ್ದಾರೆ ಹಲವರು.
ಯಾವುದೇ ಕಂಪೆನಿಯು ತನ್ನ ಗುರಿಯನ್ನು ತಲುಪಲು ಹೀಗೆ ಗ್ರಾಹಕಸ್ನೇಹಿಯಾಗಿ ವರ್ತಿಸಲು ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿರುತ್ತದೆ.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:46 am, Fri, 27 January 23