ಯಾರಿಗೆ ಬೇಕು ರುಚಿರುಚಿ ಗರಿಗರಿಯಾದ ಮಿನಿಯೇಚರ್ ಜಿಲೇಬಿ
Jalebi : 7 ವರ್ಷದ ಈ ಪೋರ ಜಿಲೇಬಿ ಮಾಡುವ ಈ ವಿಡಿಯೋ ಅನ್ನು ಈತನಕ 70,000 ಜನರು ನೋಡಿದ್ದಾರೆ. ಯಾರಿಗೆ ಬೇಕು ನೋಡಿ ಈ ದೊಡ್ಡ ದೊಡ್ಡ ಜಿಲೇಬಿ!
Viral Video : ಅಂಗಳದಲ್ಲಿಯೋ ಹಿತ್ತಲಿನಲ್ಲಿಯೋ ಕಲ್ಲು ಮಣ್ಣು ಎಲೆ ಹೂ ಕಟ್ಟಿಗೆ ಉಪಯೋಗಿಸಿ ಆಟ ಆಡುತ್ತಿದ್ದ ದಿನಗಳು ನೆನಪಿರಬೇಕಲ್ಲ? ಹಾಗೆ ಆಡುತ್ತಲೇ ಈ ಆಟದಲ್ಲಿ ನಿಜವಾಗಲೂ ಅಡುಗೆ ಮಾಡಲೇಬೇಕು ಎನ್ನುವ ಆ ಆಸೆ ದಿನದಿಂದ ದಿನಕ್ಕೆ ಮೊಳೆಯುತ್ತಿದ್ದದ್ದು? ಕೊನೆಗೊಮ್ಮೆ ಮನೆಯವರನ್ನೆಲ್ಲ ಕಾಡಿಬೇಡಿ ಒಂದಿಷ್ಟು ಅಡುಗೆ ಸಾಮಗ್ರಿ ಸಂಗ್ರಹಿಸಿಯೋ, ಕದ್ದೋ ಪುಟ್ಟಪುಟ್ಟ ಕಲ್ಲಿಟ್ಟು ಬೆಂಕಿ ಹೊತ್ತಿಸಿ ಅನ್ನ ಬೇಯಿಸಿದ, ಚಹಾ ಮಾಡಿದ ನೆನಪುಗಳೆಲ್ಲ ನಿಮ್ಮ ಬಳಿ ಬೆಚ್ಚಗೆ ಹಾಗೇ ಇರಬಹುದು. ತಲೆಮಾರುಗಳು ಬದಲಾದರೂ ಈ ಅಡುಗೆ ಆಟ ಮಾತ್ರ ಚಾಲ್ತಿಯಲ್ಲಿದೆ. ಆದರೆ ವೇದಿಕೆ ಮಾತ್ರ ಬದಲಾಗಿದೆ!
ಇದನ್ನೂ ಓದಿView this post on Instagram
ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ ಏಳು ವರ್ಷದ ಈ ಪೋರ ರಾಜಸ್ತಾನಿ ಪೊಷಾಕು ಧರಿಸಿ ಮಿನಿಯೆಚರ್ ಜಿಲೇಬಿ ಮಾಡಿದ್ಧಾನೆ. ಬೇಬಿ ಚೆಫ್ ಸಭ್ಯನ ಈ ಇನ್ಸ್ಟಾಗ್ರಾಂ ಪುಟದಲ್ಲಿ ಅನೇಕ ಮಿನಿಯೇಚರ್ ಕುಕ್ಕಿಂಗ್ ವಿಡಿಯೋಗಳು ಇವೆ.
ಇದನ್ನೂ ಓದಿ : ಇಂಗ್ಲಿಷ್ ಅಕ್ಷರಗಳಲ್ಲಿ ತಾಜ್ಮಹಲ್ ರಚಿಸಿದ ಯುವಕನ ವಿಡಿಯೋ ವೈರಲ್
ಈತನಕ ಸುಮಾರು 70,000 ಜನರು ಈ ವಿಡಿಯೋ ನೋಡಿದ್ಧಾರೆ. 3,000 ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೂರಾರು ಜನರು ಇವನ ಪಾಕ ಆಸಕ್ತಿಯನ್ನು ಶ್ಲಾಘಿಸಿದ್ದಾರೆ. ಈಗಲೇ ಜಿಲೇಬಿ ರುಚಿ ನೋಡಬೇಕು ಎನ್ನಿಸುತ್ತಿದೆ ಎಂದಿದ್ದಾರೆ. ಶಭಾಷ್ ಅಡುಗೆಯೂ ಕಲೆ. ಈ ಅಭಿರುಚಿಯನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗು ಎಂದು ಬೆನ್ನು ತಟ್ಟುತ್ತಿದ್ದಾರೆ.
ಇದನ್ನೂ ಓದಿ : ಬೇಟೆಯಾಡಲು ಪ್ರಯತ್ನಿಸಿದ ಮೊಸಳೆಯನ್ನು ದಡಕ್ಕೆ ಎಳೆದು ತಂದ ಎಮ್ಮೆಯ ವಿಡಿಯೋ ವೈರಲ್
ವಿಪರ್ಯಾಸವೆಂದರೆ ಇಂದು ಆನ್ಲೈನ್ನಲ್ಲಿ ಅಸ್ತಿತ್ವ ಕಂಡುಕೊಂಡರೆ ಮಾತ್ರ ನಾವು ಉಸಿರಾಡುತ್ತಿದ್ದೇವೆ ಎನ್ನುವಂಥ ಪರಿಸ್ಥಿತಿ ತಂದುಕೊಂಡಿದ್ದೇವೆ. ಕೊರೊನಾ ಅವಧಿಯಲ್ಲಿ ಇದಕ್ಕೆ ಹೆಚ್ಚು ಒತ್ತು ಸಿಕ್ಕಿತು. ಬದುಕೇ ಆನ್ಲೈನ್ ಆದಾಗ ನಿಮ್ಮ ಆಸಕ್ತಿ, ಪ್ರತಿಭಾ ಪ್ರದರ್ಶನ ಎಲ್ಲದಕ್ಕೂ ಆ ಪರದೆಯೇ ಆಧಾರ ಎಂಬಂತಾದಾಗ ಮಕ್ಕಳಿಂದ ಹಿಡಿದು ಮುದುಕರವರೆಗೂ ಅದೇ ಆಡುಂಬೊಲವಾಯಿತು. ಏನೇ ಆಗಲಿ ಪರದೆಯ ಹೊರತಾಗಿಯೂ ಮಕ್ಕಳು ಇಂಥ ಆಸಕ್ತಿ ಅಭಿರುಚಿ ಬೆಳೆಸಿಕೊಳ್ಳಲಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:42 am, Fri, 27 January 23