ಬೇಟೆಯಾಡಲು ಪ್ರಯತ್ನಿಸಿದ ಮೊಸಳೆಯನ್ನು ದಡಕ್ಕೆ ಎಳೆದು ತಂದ ಎಮ್ಮೆಯ ವಿಡಿಯೋ ವೈರಲ್
Crocodile : ಎಮ್ಮೆಗಳ ಹಿಂಡು ನೀರಿನಲ್ಲಿ ವಿಹರಿಸುವಾಗ ದೊಡ್ಡ ಮೊಸಳೆಯೊಂದು ಒಮ್ಮೆ ಎಮ್ಮೆಯ ಬಾಯಿಯನ್ನು ಗಕ್ಕನೆ ಹಿಡಿದು ಬಿಡುತ್ತದೆ. ಮೊಸಳೆಯ ಹಿಡಿತ ಮತ್ತು ಎಮ್ಮೆ ಅದನ್ನೆಳೆಯುತ್ತಲೇ ದಡ ಸೇರುವ ದೃಶ್ಯ ಮಾತ್ರ ಅದ್ಭುತ!
Viral Video : ಬೇಟೆಗೂ ಅದರದೇ ಆದ ನೀತಿಯಿದೆ. ಪ್ರಾಣಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ಲಯ ಅರಿವಿಗೆ ಬರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ಪ್ರಾಣಿಗಳ ನಡುವೆ ಸಾಧಿಸಿದ ಆ ಗಂಭೀರ ಲಯವನ್ನು ಗಮನಿಸಬಹುದಾಗಿದೆ. ಇಲ್ಲಿ ಎಮ್ಮೆಗಳ ಹಿಂಡು ನೀರಲ್ಲಿ ವಿಹರಿಸುತ್ತಿರುವಾಗ ಇದ್ದಕ್ಕಿದ್ದ ಹಾಗೆ ದೊಡ್ಡಗಾತ್ರದ ಮೊಸಳೆಯೊಂದು ಎಮ್ಮೆಯ ಬಾಯಿಯನ್ನು ಹಿಡಿದುಬಿಡುತ್ತದೆ. ಎಷ್ಟೊತ್ತಿನ ತನಕವೂ ಈ ಮೊಸಳೆ ತನ್ನ ಹಿಡಿತದಿಂದ ಎಮ್ಮೆಯನ್ನು ಬಿಡುವುದೇ ಇಲ್ಲ. ಎಮ್ಮೆಗೂ ಆ ಹಿಡಿತದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಹಾಗೆ ನೀರಿನೊಳಗೆ ಹಿಂದಿಂದೆ ಹೆಜ್ಜೆ ಹಾಕುತ್ತ ಆ ಬೃಹತ್ ಮೊಸಳೆಯನ್ನು ದಡಕ್ಕೆ ಕರೆದುಕೊಂಡು ಬರುತ್ತದೆ. ಉಳಿದ ಎಮ್ಮೆಗಳು ಹಿಂಡಿನಲ್ಲಿ ನಿಂತು ಈ ದೃಶ್ಯವನ್ನು ನೋಡುತ್ತಿರುತ್ತವೆ.
ಮೊಸಳೆಯೊಂದು ಎಮ್ಮೆಯೊಂದು ಬೇಟೆಯಾಡಲು ಪ್ರಯತ್ನಿಸಿದ ಈ ದೃಶ್ಯ ನೆಟ್ಟಿಗರನ್ನು ಕುತೂಹಲಕ್ಕೆ ಬೀಳಿಸಿದೆ. ದಕ್ಷಿಣ ಅಫ್ರಿಕಾದ ಗ್ರೇಟರ್ ಕ್ರುಗರ್ದಲ್ಲಿರುವ ಸಬಿ ಸಬಿ ಸಂರಕ್ಷಿತ ಪ್ರದೇಶದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಇದನ್ನು ಚಿತ್ರೀಕರಿಸಿದವರು ಡಾ. ಮಾರ್ಕ್ ಡಿಬೆರಾರ್ದಿನಿ.
ಇದನ್ನೂ ಓದಿ : ಅಪರಾಧಿ ನಾಯಿ? ಸಾಕುನಾಯಿಯೊಂದು ಮನುಷ್ಯನಿಗೆ ಗುಂಡು ಹಾರಿಸಿ ಕೊಂದಿದೆ
ತನ್ನ ಪಾಡಿಗೆ ತಾನು ನೀರು ಕುಡಿಯುತ್ತಿದ್ದ ಎಮ್ಮೆಯ ಬಾಯಿಗೇ ನೇರ ಬಾಯಿ ಹಾಕಿ ಗಕ್ಕನೆ ಹಿಡಿದ ಈ ಮೊಸಳೆಯ ಹಲ್ಲಿನ ಬಲಿಷ್ಠತೆ ಗಮನಿಸಿ. ಆ ಹಲ್ಲುಗಳ ಹಿಡಿತದಿಂದ ತಪ್ಪಿಸಿಕೊಳ್ಳಲಾಗದಿದ್ದರೂ ಎಮ್ಮೆ ಹಾಗೆಯೇ ಅದನ್ನು ದಡಕ್ಕೆ ಕರೆದುಕೊಂಡು ಬಂದ ರೀತಿ ನೋಡಿ.
ಇದನ್ನೂ ಓದಿ : 3 ಬೈಕ್ಗಳಲ್ಲಿ ಪ್ರಯಾಣಿಸಿದ 14 ಯುವಕರು, ಮುಂದೇನಾಯಿತು?
ಈ ವಿಡಿಯೋ ಅನ್ನು ಈತನಕ 7.6 ಮಿಲಿಯನ್ ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಎಷ್ಟು ಸಣ್ಣ ಅಂತರದಲ್ಲಿ ಮೊಸಳೆಯು ಎಮ್ಮೆಯನ್ನು ಹಿಡಿದಿದೆ, ಅದರ ಅಗಾಧ ಶಕ್ತಿಯನ್ನು ಇದು ತೋರಿಸುತ್ತದೆ ಎಂದಿದ್ದಾರೆ ಹಲವಾರು ಜನ. ಪ್ರಕೃತಿಯ ವೈಚಿತ್ರ್ಯ ಎಂದು ಕೆಲವರು ಹೇಳಿದ್ದಾರೆ. ಮೊಸಳೆಯಷ್ಟೇ ಅಲ್ಲ, ಆ ಎಮ್ಮೆ ಕೂಡ ಎಷ್ಟು ಶಕ್ತಿಶಾಲಿಯಾಗಿದೆ ನೋಡಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:56 pm, Wed, 25 January 23