ಅಪರಾಧಿ ನಾಯಿ? ಸಾಕುನಾಯಿಯೊಂದು ಮನುಷ್ಯನಿಗೆ ಗುಂಡು ಹಾರಿಸಿ ಕೊಂದಿದೆ

Dog : ಅಮೆರಿಕದಲ್ಲಿ ಬೇಟೆ ವಿಹಾರಕ್ಕೆ ಹೊರಟಾಗ ಈ ಆಕಸ್ಮಿಕ ದುರ್ಘಟನೆ ನಡೆದಿದೆ. ಬೇಟೆ ಟ್ರಕ್​ ಅನ್ನು ಹಿಂದಿನಿಂದ ನಾಯಿ ಏರುವಾಗ ಅಕಸ್ಮಾತ್ ಆಗಿ ಬಂದೂಕಿನ ಮೇಲೆ ಕಾಲಿಟ್ಟಿದೆ. ಮುಂದೆ ಕುಳಿತಿದ್ದ ವ್ಯಕ್ತಿಗೆ ಗುಂಡು ತಗುಲಿದೆ.

ಅಪರಾಧಿ ನಾಯಿ? ಸಾಕುನಾಯಿಯೊಂದು ಮನುಷ್ಯನಿಗೆ ಗುಂಡು ಹಾರಿಸಿ ಕೊಂದಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jan 25, 2023 | 12:31 PM

Viral News : ನಾಯಿಯು ಬಂದೂಕಿನಿಂದ ಮನುಷ್ಯನಿಗೆ ಗುಂಡುಹಾರಿಸಿತೆ? ಹೌದು. ಇದು ಅಮೆರಿಕದಲ್ಲಿ ನಡೆದಿದೆ. ವಿಚಿತ್ರವಾದರೂ ಇದು ಸತ್ಯ. ಇಲ್ಲಿಯ ಕಾಡಿನಲ್ಲಿ ಪ್ರವಾಸಿಗರನ್ನು ಬೇಟೆವಿಹಾರಕ್ಕೆಂದು ಕರೆದೊಯ್ಯುವ ಟ್ರಕ್​ನಲ್ಲಿ ಈ ಅಚಾತುರ್ಯ ನಡೆದಿದೆ. ನಾಯಿಯು ಹಿಂದಿನಿಂದ ವಿಹಾರದ ಟ್ರಕ್​ ಹತ್ತಿದಾಗ ಅಲ್ಲಿಟ್ಟಿದ್ದ ಬಂದೂಕಿನ ಮೇಲೆ ಕಾಲಿಟ್ಟಿದೆ. ಆಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರ ಮೇಲೆ ಅಕಸ್ಮಾತ್ ಆಗಿ ಗುಂಡು ಹಾರಿದೆ. 30 ವರ್ಷದ ಆ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ ಮೃತಪಟ್ಟ ವ್ಯಕ್ತಿ ನಾಯಿಯ ಪೋಷಕನೇ ಎನ್ನುವುದು ತಿಳಿದು ಬಂದಿಲ್ಲ.

ಇದನ್ನೂ ಓದಿ : ಪುಷಪ್ಸ್​ ಎಂಥಾ ಸುಲಭ ಅಜ್ಜನ ಬೆನ್ನ ಮೇಲೆ ಹೀಗೆ ಮಲಗಿದರೆ

ಯುಎಸ್​ ಸೆಂಟರ್ಸ್​ ಫಾರ್ ಡಿಸೀಸ್ ಕಂಟ್ರೋಲ್​ ಅಂಡ್​ ಪ್ರಿವೆನ್ಷನ್​ ಮಾಹಿತಿ ಪ್ರಕಾರ 2021ರಲ್ಲಿ ಬಂದೂಕು ಅಪಘಾತಗಳಿಂದಾಗಿ 500ಕ್ಕೂ ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ. ಅಂದರೆ ಅಮೆರಿಕದಲ್ಲಿ ಅಲ್ಲಿಯ ಜನಸಂಖ್ಯೆಗಿಂತ ಹೆಚ್ಚು ಬಂದೂಕುಗಳಿವೆ ಎನ್ನುವುದು ಗಮನಿಸಬೇಕಾದ ಅಂಶ. ಆಗಾಗ ಬಂದೂಕು ದಾಳಿಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ದೊಡ್ಡವರಿಂದ ಹಿಡಿದು ಮಕ್ಕಳೂ ಇದಕ್ಕೆ ಹೊರತಾಗಿಲ್ಲ. ಆದರೆ ಇದೀಗ ಪ್ರಾಣಿಗಳು! ಅದರಲ್ಲೂ ವಿಶ್ವಾಸಕ್ಕೆ ಅರ್ಹವಾದ ನಾಯಿ. ಇದೀಗ ನಾಯಿ ಕೊಲೆಪಟ್ಟವನ್ನು ಹೊತ್ತುಕೊಳ್ಳಬೇಕಾಯಿತೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಇಂಥ ಮೋಹಕ ಪ್ರಾಣಿಯ ಬಂಧನಕ್ಕೆ ಇಷ್ಟೊಂದು ನಾಟಕದ ಅಗತ್ಯವಿತ್ತೇ? ನೋಡಿ ವಿಡಿಯೋ

ಈ ಘಟನೆಯ ಕುರಿತು ಸಮ್ಮರ್​ ಕೌಂಟಿ ಶೆರಿಫ್​ ಕಚೇರಿ ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಬೇಟೆಗೆ ಸಂಬಂಧಿಸಿದ ಅಪಘಾತ ಎಂದು ತಿಳಿದು ಬಂದಿದೆ.

ಎಷ್ಟೋ ಸಂದರ್ಭಗಳಲ್ಲಿ ನಾಯಿಗಳು ತಮ್ಮ ಪೋಷಕರನ್ನು ರಕ್ಷಿಸಿದ ಉದಾಹರಣೆಗಳಿವೆ. ಮನೆಯ ಮಕ್ಕಳನ್ನು ಕಾಪಾಡಿದ ಸನ್ನಿವೇಶಗಳಿವೆ. ಆದರೆ ಇಲ್ಲಿ ಹೀಗೆ ಆಗಿರುವುದು ತುಂಬಾ ಬೇಸರದ ಸಂಗತಿ. ಆ ಕ್ಷಣಕ್ಕೆ ನಾಯಿ ಮನಸ್ಸಿಗೆ ಹೇಗನ್ನಿಸಿತೋ?

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ