ಇಂಥ ಮೋಹಕ ಪ್ರಾಣಿಯ ಬಂಧನಕ್ಕೆ ಇಷ್ಟೊಂದು ನಾಟಕದ ಅಗತ್ಯವಿತ್ತೇ? ನೋಡಿ ವಿಡಿಯೋ

Madhya Pradesh : ಕಾಡಿನ ಪ್ರಾಣಿಗಳೆಲ್ಲ ಮಧ್ಯಪ್ರದೇಶದ ಈ ಊರಿಗೆ ನುಗ್ಗಿವೆಯೆ ಎಂಬಂತೆ ಜನಜನ ಜಾತ್ರೆ. ಪಾಪದ್ದು ಇದು, ಫೋಟೋ ನೋಡಿದರೆ ಗೊತ್ತಾಗುವುದಿಲ್ಲವೆ ಇದು ಎಷ್ಟೊಂದು ಸಾಧು ಪ್ರಾಣಿಯೆಂದು.

ಇಂಥ ಮೋಹಕ ಪ್ರಾಣಿಯ ಬಂಧನಕ್ಕೆ ಇಷ್ಟೊಂದು ನಾಟಕದ ಅಗತ್ಯವಿತ್ತೇ? ನೋಡಿ ವಿಡಿಯೋ
ಮಧ್ಯಪ್ರದೇಶದ ಮನೆಯೊಳಗೆ ಬಂದ ಸಾಂಬಾರ್ ಜಿಂಕೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 25, 2023 | 10:47 AM

Viral News : ಯಾಕೆ ಬಂದೆ ನೀನು ನಮ್ಮ ಮನೆಗೆ, ಏನಾದರೂ ತಿಂಡಿ ಬೇಕಿತ್ತಾ? ಕಾಡು ಬೇಸರವಾಗಿತ್ತಾ, ಸ್ವಲ್ಪ ದಿನ ಇಲ್ಲೇ ಇದ್ದು ಹೋಗಲು ಬಂದಿದ್ದೀಯಾ? ಯಾರಾದರೂ ಬೇಸರ ಉಂಟು ಮಾಡಿದರಾ? ಇನ್ನು ಮೇಲೆ ನಮ್ಮೊಂದಿಗೇ ಇರುತ್ತೀಯಾ? ಈಗ ಈ ಫೋಟೋದಲ್ಲಿ ಈ ಸಾಂಬಾರ್ ಜಿಂಕೆ ಹೀಗೆ ಮನೆಯೊಳಗೆ ಬಂದು ನಿಂತಿರುವುದನ್ನು ನೋಡಿದರೆ ಹೀಗೆಯೇ ಮೈದಡವುತ್ತ ಮಾತನಾಡಿಸಬೇಕು ಅನ್ನಿಸುತ್ತದೆ ಅಲ್ಲವಾ? ಮಧ್ಯಪ್ರದೇಶದ ಕಟ್ನಿಯಲ್ಲಿರುವ ಮನೆಯೊಂದಕ್ಕೆ ಬಂದ ಇದು ಹೀಗೆ ಫೋಟೋ ತೆಗೆಯುವ ತನಕವಂತೂ ಸುಮ್ಮನೇ ನಿಂತಿದೆ. ಆಮೇಲೆ?

ಆಮೇಲೆ ಗದ್ದಲ ಮಾಡಿದ್ದು ಖಂಡಿತ ಇದಲ್ಲ. ಈ ಊರಿನ ಜನರು. ಈ ಪಾಪದ ಪ್ರಾಣಿಯ ಬಂಧನಕ್ಕೆ ಈ ಊರಿನ ಸುಮಾರು 1000 ಜನರು ಸಾಕ್ಷಿಯಾಗಿದ್ದಾರೆ. ಐಎಫ್​ಎಸ್​ ಆಫೀಸರ್ ಗೌರವ ಶರ್ಮಾ ಟ್ವೀಟ್ ಮಾಡಿದ ಈ ಫೋಟೋ, ವಿಡಿಯೋ ಗಮನಿಸಿ. ಜನಜನ ಜಾತ್ರೆ. ಅದನ್ನು ಬಲೆಯಲ್ಲಿ ಬಿಗಿದು ಕಟ್ಟಿರುವ ರೀತಿ ನೋಡಿ. ಪಾಪ ಪುಣ್ಯ ಎಲ್ಲವೂ ಸೇರಬೇಕಿರುವುದು ಅರಣ್ಯ ಇಲಾಖೆಯ ವಿವೇಕ ಜೈನ್​ ಮತ್ತು ತಂಡದವರಿಗೆ.

ಜನವರಿ 21 ರಂದು ವಿಡಿಯೋ ಟ್ವೀಟ್​ ಮಾಡಲಾಗಿದೆ. ಈತನಕ 21,000 ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 200ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಗೀಚಿ ಮಕ್ಕಳೇ ಗೀಚಿ; ಆಮೇಲೆ ಅಪ್ಪ ಮಾಡಿದ್ದೇನು? ನೋಡಿ ವೈರಲ್ ಆಗುತ್ತಿರುವ ವಿಡಿಯೋ

ತನ್ನ ಅಜ್ಜ, ಮುತ್ತಜ್ಜಂದಿರನ್ನು ಇದು ಹುಡುಕಿಕೊಂಡು ಇಲ್ಲಿಗೆ ಬಂದಿರಬಹುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಸಾಂಬಾರ್​ ಇದು ಅತ್ಯಂತ ಸಾಧು ಪ್ರಾಣಿ. ಅದಕ್ಕಿಷ್ಟವಾದ ಆಹಾರದ ಆಸೆ ತೋರಿಸಿ ಮೆಲ್ಲನೆ ಕಾಡಿನತ್ತ ಕರೆದೊಯ್ಯಬಹುದಿತ್ತು. ನಾನು ಐಐಟಿಯಲ್ಲಿ ಸಾಕಷ್ಟು ಇಂಥ ಸಾಂಬಾರ್​ಗಳನ್ನು ಕಂಡಿದ್ದೇನೆ. ಆದರೆ ಒಂದು ಸಾಂಬಾರ್​ ಕೂಡ ಆಕ್ರಮಣಕಾರಿ ಎನ್ನಿಸಿಲ್ಲ ಎಂದು ಹೇಳಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:47 am, Wed, 25 January 23