ಸೀರೆ ಉಟ್ಟುಕೊಂಡು ಪ್ಯಾರಾಗ್ಲೈಡಿಂಗ್ ಮಾಡಿದ 80ರ ಅಜ್ಜಿಯ ವಿಡಿಯೋ ವೈರಲ್

TV9kannada Web Team

TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad

Updated on: Jan 21, 2023 | 4:35 PM

Paragliding : ‘ಏಳು ವರ್ಷಗಳ ಹಿಂದೆ ನನ್ನ ಈ ಅಜ್ಜಿ ತೀರಿಹೋದರು. ಆದರೆ, ನನ್ನ ಮೊಬೈಲ್​ ಗ್ಯಾಲರಿಯಲ್ಲಿ ಅಜ್ಜಿಯ ಈ ವಿಡಿಯೋ ಹಾಗೇ ಇದೆ. ನಾನಿವಳನ್ನೂ ಎಂದೆಂದಿಗೂ ಪ್ರೀತಿಸುತ್ತೇನೆ. ನನ್ನ ಸ್ಫೂರ್ತಿಚೈತನ್ಯ ಈಕೆ’

ಸೀರೆ ಉಟ್ಟುಕೊಂಡು ಪ್ಯಾರಾಗ್ಲೈಡಿಂಗ್ ಮಾಡಿದ 80ರ ಅಜ್ಜಿಯ ವಿಡಿಯೋ ವೈರಲ್
80 ವರ್ಷದ ಅಜ್ಜಿ ಪ್ಯಾರಾಗ್ಲೈಡಿಂಗ್ ಮಾಡುತ್ತಿರುವುದು

Viral Video : ಸಾಹಸ ಎನ್ನುವುದು ಮನೋಭಾವಕ್ಕೆ ಸಂಬಂಧಿಸಿದ್ದು. ಇದಕ್ಕೆ ವಯಸ್ಸಿನ ಹಂಗಿಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ಇದಕ್ಕೆ ಸಾಕ್ಷಿ. 80 ವರ್ಷದ ಅಜ್ಜಿಯು ಪ್ಯಾರಾಗ್ಲೈಡಿಂಗ್ ಮಾಡಿದ ವಿಡಿಯೋ ಅನ್ನು ಆಕೆಯ ಮೊಮ್ಮಗಳು ಇದೀಗ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ಧಾರೆ. ಆದರೆ ಬೇಸರದ ವಿಷಯವೆಂದರೆ ಈ ಅಜ್ಜಿ ಏಳು ವರ್ಷಗಳ ಹಿಂದೆ ತೀರಿಹೋಗಿದ್ದಾರೆ. ಆದರೂ ಅವರ ನೆನಪು ಮಾತ್ರ ಹೀಗೆ ಈ ವಿಡಿಯೋದ ಮೂಲಕ ಚಿರಾಯುವಾಗಿದೆ ಎಂದಿದ್ದಾರೆ ಇವರ ಮೊಮ್ಮಗಳು.

View this post on Instagram

A post shared by Celina Moses (@celinamoses)

ಧೈರ್ಯಂ ಸರ್ವತ್ರ ಸಾಧನಂ. 80ರ ವಯೋಮಾನದಲ್ಲಿ ಹೀಗೆ ಪ್ಯಾರಾಗ್ಲೈಡಿಂಗ್ ಮಾಡುವುದೆಂದರೆ ನಿಜಕ್ಕೂ ಇದು ಸಾಹಸದ ವಿಷಯವೇ. ಆದರೆ ಆ ವಯಸ್ಸಿನಲ್ಲಿಯೇ ಅಷ್ಟೊಂದು ಧೈರ್ಯ ಹೊಂದಿದ್ದರು ಎಂದರೆ ಅವರ ಇಡೀ ಬದುಕು ಹೇಗಿದ್ದಿರಬಹುದು ಎಂದು ಊಹಿಸಿ.

ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್

‘ಏಳು ವರ್ಷಗಳ ಹಿಂದೆ ನನ್ನ ಅಜ್ಜಿ ತೀರಿದರು. ನನ್ನ ಫೋನ್​ ಗ್ಯಾಲರಿಯಲ್ಲಿ ಈ ವಿಡಿಯೋ ಹಾಗೇ ಇತ್ತು. ಇದನ್ನು ನೋಡಿ ನಾನು ಭಾವುಕಳಾಗುತ್ತಿದ್ದೇನೆ. ನಾನು ನನ್ನ ಅಜ್ಜಿಯನ್ನು ಬಹಳ ಪ್ರೀತಿಸುತ್ತೇನೆ. ಈಗ ಅವಳಿಲ್ಲದಿದ್ದರೂ ಅವಳ ನೆನಪು ನನಗೆ ಸ್ಫೂರ್ತಿಯಾಗಿದೆ. ಪ್ಯಾರಾಗ್ಲೈಡಿಂಗ್ ಮಾಡುವಾಗ ಅಜ್ಜಿ ಸೀರೆ ಉಟ್ಟಿದ್ದರು! ಮತ್ತವರಿಗೆ ಚೂರೂ ಭಯವಿರಲಿಲ್ಲ’ ಎಂದಿದ್ದಾರೆ ಮೊಮ್ಮಗಳು ಸೆಲೀನಾ ಮೋಸಸ್.

ಇದನ್ನೂ ಓದಿ : ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್​ಟಾಕ್​ ಮಾಡಿದ ಗಗನಸಖಿಯ ವಿಡಿಯೋ ವೈರಲ್

ಈ ವಿಡಿಯೋ ನೋಡಿದ ಅನೇಕರು ಅಜ್ಜಿಯ ಬಗ್ಗೆ ಹೆಮ್ಮೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ಧಾರೆ. ಇದು ನಿಜಕ್ಕೂ ಅದ್ಭುತವಾಗಿದೆ. ಆದರೆ ಇಂಥ ಸಾಹಸಕ್ರೀಡೆಗಳಲ್ಲಿ ಭಾಗವಹಿಸುವಾಗ ಅದರಲ್ಲೂ ಇಂಥ ವಯಸ್ಸಿನಲ್ಲಿ ಮೊದಲು ಮತ್ತು ನಂತರ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಸಲಹೆ ಕೊಟ್ಟಿದ್ದಾರೆ ಒಬ್ಬರು.

ಇದನ್ನೂ ಓದಿ : ಪಾಕಿಸ್ತಾನದ ಸ್ಕರ್ದೂ ಕಣಿವೆಯಲ್ಲಿ ಕಟ್ಟಿಗೆ ಆಯಲು ಬಂದ ಪುಟ್ಟಿಯ ವಿಡಿಯೋ ವೈರಲ್

ನಿಜಕ್ಕೂ ಇದು ಸ್ಫೂರ್ತಿಕರವಾಗಿದೆ. ಇದನ್ನು ನೋಡಿದ ಮೇಲೆ ಯಾರೂ ತಮ್ಮ ಕನಸನ್ನು ಬೆನ್ನಟ್ಟುವ ಮನಸ್ಸು ಮಾಡುತ್ತಾರೆ ಎಂದಿದ್ದಾರೆ ಮತ್ತೊಬ್ಬರು. ಇಂಥ ಅಜ್ಜಅಜ್ಜಿಯರು ನಮ್ಮೊಂದಿಗಿರುವುದು ನಮ್ಮ ಅದೃಷ್ಟವೇ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada