ಅಪ್ಪ ಅಮ್ಮ ಇಲ್ಲದಿದ್ರೆ ಸತ್ತೇ ಹೋಗ್ತಿದ್ವಿ; ಚಿರತೆಯಿಂದ ಕಾಪಾಡಿದ ಮುಳ್ಳುಹಂದಿಗಳ ವಿಡಿಯೋ ವೈರಲ್

TV9kannada Web Team

TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad

Updated on: Jan 21, 2023 | 4:03 PM

Porcupine : ಮುಳ್ಳುಹಂದಿಗಳ ಕುಟುಂಬವೊಂದು ರಸ್ತೆ ದಾಟುವುದಕ್ಕೂ ಚಿರತೆ ಬೇಟೆಗಾಗಿ ಹೊಂಚು ಹಾಕುವುದಕ್ಕೂ ತಾಳೆಯಾಗಿದೆ. ಆದರೂ ತಮ್ಮ ಮರಿಗಳನ್ನು ಕಾಪಾಡಿಕೊಳ್ಳಲು ಮುಳ್ಳುಹಂದಿಗಳು ಸಾಕಷ್ಟು ಹೋರಾಡಿವೆ.

ಅಪ್ಪ ಅಮ್ಮ ಇಲ್ಲದಿದ್ರೆ ಸತ್ತೇ ಹೋಗ್ತಿದ್ವಿ; ಚಿರತೆಯಿಂದ ಕಾಪಾಡಿದ ಮುಳ್ಳುಹಂದಿಗಳ ವಿಡಿಯೋ ವೈರಲ್
ಚಿರತೆಯಿಂದ ತಮ್ಮ ಮರಿಗಳನ್ನು ರಕ್ಷಿಸುತ್ತಿರುವ ಮುಳ್ಳುಹಂದಿಗಳು

Viral Video : ಅಪ್ಪ ಅಮ್ಮನೊಂದಿಗೆ ಈ ಇಬ್ಬರೂ ಮರಿಮುಳ್ಳುಹಂದಿಗಳು ರಸ್ತೆ ದಾಟುತ್ತಿದ್ದರು. ಎಷ್ಟೊತ್ತಿನಿಂದ ಹಸಿದುಕೊಂಡು ಬೇಟೆಗಾಗಿ ಹೊಂಚು ಹಾಕುತ್ತಿತ್ತೋ ಈ ಚಿರತೆ ಮರಿಗಳ ಮೇಲೆ ಕಣ್ಣು ನೆಟ್ಟೇಬಿಟ್ಟಿತು. ಮರಿಗಳು ಕಂಗಾಲಾಗಿ ಕೂಗಾಡಲಾರಂಭಿಸಿದವು. ಅವುಗಳ ಅಪ್ಪ ಅಮ್ಮ ತನ್ನ ಚೂಪಾದ ಮುಳ್ಳುಗಳನ್ನು ಮತ್ತಷ್ಟು ನಿಗುರಿಸಿಕೊಂಡು ಚಿರತೆಯೊಂದಿಗೆ ಕಾದಾಡಲು ಶುರು ಮಾಡಿದವು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ಈ ಮುಳ್ಳುಹಂದಿಗಳನ್ನು ನೆಟ್ಟಿಗರು ಭಲೇ ಎನ್ನುತ್ತಿದ್ಧಾರೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ವನ್ಯಜೀವಿಗಳಿಗೆ ಸಂಬಂಧಿಸಿದ ಇಂಥ ಆಸಕ್ತಿಕರ ವಿಡಿಯೋ ಅನ್ನು ಆಗಾಗ ಟ್ವೀಟ್ ಮಾಡುತ್ತಿರುತ್ತಾರೆ. ಇದೀಗ ಅವರು ಟ್ವೀಟ್ ಮಾಡಿರುವ ಈ ವಿಡಿಯೋ, ಮಕ್ಕಳನ್ನು ಪೋಷಿಸುವುದು ಎಂಥ ಜವಾಬ್ದಾರಿಯುತ ಎನ್ನುವುದನ್ನು ತೋರಿಸುತ್ತದೆ. ಈ ವಿಡಿಯೋ ಅನ್ನು ಈತನಕ 2.80 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ಧಾರೆ. 5,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 900 ಜನರು ರೀಟ್ವೀಟ್ ಮಾಡಿದ್ಧಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಪಾಕಿಸ್ತಾನದ ಸ್ಕರ್ದೂ ಕಣಿವೆಯಲ್ಲಿ ಕಟ್ಟಿಗೆ ಆಯಲು ಬಂದ ಪುಟ್ಟಿಯ ವಿಡಿಯೋ ವೈರಲ್

ಪ್ರಾಣಿಗಳಲ್ಲಿಯೂ ಪೋಷಕತ್ವ ಎಷ್ಟೊಂದು ತೀವ್ರತರವಾಗಿ ಜಾಗೃತವಾಗಿರುತ್ತದೆಯಲ್ಲ! ಸಲಾಂ ಎಂದಿದ್ದಾರೆ ಒಬ್ಬರು. ವಾಹ್​ ಝೆಡ್​ ಪ್ಲಸ್​ ಸೆಕ್ಯೂರಿಟಿ ಎಂದಿದ್ದಾರೆ ಅನೇಕರು. ಕೊನೆಯಲ್ಲಿ ಏನಾಯಿತು, ಮರಿಗಳು ಸುರಕ್ಷಿತವಾಗಿವೆ ತಾನೆ? ಎಂದು ಅನೇಕರು ಕೇಳಿದ್ದಾರೆ. ಸದ್ಯ ಎಲ್ಲರೂ ಸುರಕ್ಷಿತವಾಗಿದ್ದರೆ ಸಾಕು ಎಂದಿದ್ದಾರೆ ಹಲವರು.

ಇದನ್ನೂ ಓದಿ : ಹೆಂಡತಿ ತವರಿಗೆ; ಕೋಪದಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಬಿಹಾರದ ವ್ಯಕ್ತಿ

ಪೋಷಕರು ಎಂದರೆ ಯಾವಾಗಲೂ ಹೀಗೇ ಇರುತ್ತಾರೆ ಎಂದಿದ್ಧಾರೆ ಮತ್ತೊಬ್ಬರು. ತಾಯಿ ಇಲ್ಲಿ ಬಹಳ ಧೈರ್ಯದಿಂದ ಮಕ್ಕಳನ್ನು ರಕ್ಷಿಸಿದ್ದಾರೆ ಮಗದೊಬ್ಬರು. ಪ್ರಕೃತಿಯ ಕಲೆ ಇದು, ಅತ್ಯದ್ಭುತ ಎಂದಿದ್ದಾರೆ ಇನ್ನೂ ಒಬ್ಬರು. ಈ ವಿಡಿಯೋ ನೋಡಿದ ನಿಮ್ಮಅಭಿಪ್ರಾಯವೇನು?

ಇದನ್ನೂ ಓದಿ

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada