ಒಂಟಿಗಾಲಿನಲ್ಲಿ ಒಂಟಿಗೈಯಲ್ಲಿ ನಿತ್ಯವೂ ಬದುಕಿನ ಬಂಡಿ ಎಳೆಯುವ ಈ ದಿವ್ಯಾಂಗ

Specially Abled : ಭಾರತದ ಶ್ರೀಮಂತರು ಇಂಥ ಕಷ್ಟಜೀವಿಗಳತ್ತ ತಿರುಗಿ ನೋಡಬಾರದೆ? ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಂದು ಏನೆಲ್ಲವೂ ಸಾಧ್ಯವಿದೆ. ಒಮ್ಮೆ ಈ ವಿಡಿಯೋ ನೋಡಿ. ನಿಮ್ಮ ಸುತ್ತಮುತ್ತಲೂ ಇಂಥ ಅನೇಕರು ಇದ್ಧಾರೆ.

ಒಂಟಿಗಾಲಿನಲ್ಲಿ ಒಂಟಿಗೈಯಲ್ಲಿ ನಿತ್ಯವೂ ಬದುಕಿನ ಬಂಡಿ ಎಳೆಯುವ ಈ ದಿವ್ಯಾಂಗ
ಹೊಟ್ಟೆಪಾಡಿಗಾಗಿ ಒಂಟಿಗಾಲು, ಒಂಟಿಕೈಯಲ್ಲಿ ಸೈಕಲ್ ಎಳೆಯುತ್ತಿರುವ ದಿವ್ಯಾಂಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 21, 2023 | 2:12 PM

Viral Video : ನಮ್ಮ ನಡುವಿನ ಅನೇಕ ದಿವ್ಯಾಂಗರು (Specially Ablded) ಸ್ವಾಭಿಮಾನಿಗಳು. ಅವರಿಗೆ ದುಡಿದು ತಿನ್ನುವ ಛಲ. ಆದರೆ ಸಮಾಜ ಅವರನ್ನು ಇನ್ನೂ ಅಸಹಾಯಕರಂತೆಯೇ ನಡೆಸಿಕೊಳ್ಳುತ್ತಿದೆ. ಸ್ವಲ್ಪ ನಮ್ಮನ್ನು ಕೈ ಹಿಡಿದೆತ್ತಿದರೆ ಸಾಕು, ನಮಗೂ ಕನಸುಗಳಿಗೂ ಬಲ ಬರುತ್ತದೆ ಎಂಬ ನಿಲುವು ದಿವ್ಯಾಂಗರದು. ಆದರೆ ಏನು ಮಾಡುವುದು, ಸಮಾಜಕ್ಕೆ ಯೋಚಿಸುವ ಪುರಸೊತ್ತಿಲ್ಲ, ಅತೀಕರುಣೆ ತೋರಿಸಿ ಅವರನ್ನು ಮತ್ತಷ್ಟು ಅಸಹಾಯಕತೆಗೆ ತಳ್ಳಿ ಹೊರಟುಬಿಡುತ್ತದೆ. ಆಗ ಅವರು ಹೀಗೆ ತುಸು ಹೆಚ್ಚಿಗೆಯೇ ಕಷ್ಟಕ್ಕೆ ಬೀಳಬೇಕಾಗುತ್ತದೆ. ಮುಂದುವರಿದ ತಂತ್ರಜ್ಞಾನ ಯುಗದಲ್ಲಿ ಉಳ್ಳವರು ಇಂಥವರ ಸಹಾಯಕ್ಕಾಗಿ ಸ್ವಲ್ಪಾದರೂ ಯೋಚಿಸಬೇಕಲ್ಲವೆ?

ದಿವ್ಯಾಂಗ ವ್ಯಕ್ತಿಯೊಬ್ಬರು ಒಂದು ಕೈಯಿಂದ ಸೈಕಲ್​ ಎಳೆಯುತ್ತ ಇನ್ನೊಂದು ಕೈಯಲ್ಲಿ ಊರುಗೋಲು ಹಿಡಿದುಕೊಂಡು ಒಂಟಿಗಾಲಿನಲ್ಲಿ ಸಾಗುತ್ತಿದ್ಧಾರೆ. 11 ಸೆಕೆಂಡುಗಳ ಈ ವಿಡಿಯೋ ಟ್ವೀಟ್ ನೆಟ್ಟಿಗರಲ್ಲಿ ಸ್ಫೂರ್ತಿ ತುಂಬುತ್ತಿದೆ. ಈ ವಿಡಿಯೋ ಅನ್ನು ಈತನಕ ಸುಮಾರು 16,000 ಜನರು ನೋಡಿದ್ದಾರೆ. 10,300 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಗರ್ಭಿಣಿಯಾಗಲು ಸೊಸೆಗೆ ಮೂಳೆಪುಡಿ ಸೇವಿಸಲು ಒತ್ತಾಯಿಸಿದ ಅತ್ತೆ

ಇವರ ಶ್ರಮದ ಕೆಲಸ ಮೆಚ್ಚುವಂಥದ್ದು ಮತ್ತು ಯೋಚಿಸುವಂಥದ್ದು. ಜಗತ್ತಿನ ಶ್ರೀಮಂತ ವ್ಯಕ್ತಿಗಳು ಈ ದೃಶ್ಯವನ್ನು ನೋಡಿ ಪಶ್ಚಾತ್ತಾಪ ಪಡಬೇಕು ಎಂದಿದ್ದಾರೆ ಒಬ್ಬರು. ನಮ್ಮ ನಡುವೆ ಬಹಳ ಜನ ಬದುಕು ಸಾಗಿಸಲು ಹೀಗೆ ದಿನವೂ ಕಷ್ಟಪಡುತ್ತಾರೆ, ಅಂಥವರಿಗೆ ನನ್ನ ಪ್ರಣಾಮಗಳು ಎಂದಿದ್ದಾರೆ ಮತ್ತೊಬ್ಬರು. ​ನನ್ನ ದೇಶವನ್ನು ಆಳುತ್ತಿರುವ ಸರ್ಕಾರಕ್ಕೆ ಈ ಬಡವರು ಯಾವಾಗ ಕಣ್ಣಿಗೆ ಬೀಳುವರೋ? ಎಂದು ಕೇಳಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:10 pm, Sat, 21 January 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್