ಗರ್ಭಿಣಿಯಾಗಲು ಸೊಸೆಗೆ ಮೂಳೆಪುಡಿ ಸೇವಿಸಲು ಒತ್ತಾಯಿಸಿದ ಅತ್ತೆ
Viral : ಈಗ ಅಘೋರಿಗಳು ತಮ್ಮ ತಂತ್ರಕ್ಕೆ ತಂತ್ರಜ್ಞಾನವನ್ನೂ ಸುಲಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಪರಿಹಾರವನ್ನು ವಿಡಿಯೋ ಕಾಲ್ ಮೂಲಕವೇ ನೀಡುವಷ್ಟು ಬೆಳೆದಿದ್ದಾರೆ. ಮಹಾರಾಷ್ಟ್ರದ ಈ ಘಟನೆ ಓದಿ.
Viral News : ಮಾಟ ಮಂತ್ರ ಎಂದು ಅಘೋರಿ ಸಾಧುಗಳ ಬೆನ್ನಿಗೆ ಬಿದ್ದ ಮಂದಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುವಷ್ಟರ ಮಟ್ಟಿಗೆ ಭ್ರಮೆಗೆ ಬೀಳುತ್ತಾರೆ. ಹಿಂದೊಮ್ಮೆ ಮಹಾರಾಷ್ಟ್ರದಲ್ಲಿ ಮಹಿಳೆಯೊಬ್ಬಳು ಗರ್ಭಿಣಿಯಾಗಬೇಕೆಂದರೆ ಅಮವಾಸ್ಯೆಗಳ ರಾತ್ರಿ ಜಲಪಾತದ ಕೆಳಗೆ ಹೋಗಿ ನಿಲ್ಲಬೇಕು ಎಂದು ಆಕೆಗೆ ತಾಂತ್ರಿಕ ಸಲಹೆ ನೀಡಿದ್ದ. ಈಗ ಅದೇ ಮಹಿಳೆಗೆ ಇದೇ ಕಾರಣಕ್ಕೆ ಈಕೆಯ ಅತ್ತೆ ಮತ್ತು ಗಂಡ ತಾಂತ್ರಿಕನ ಸಲಹೆಯಂತೆ ಮೂಳೆಪುಡಿ ತಿನ್ನಿಸುವ ಪ್ರಯತ್ನ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತಿದ್ದಾರೆ.
ಈಗ ಅಘೋರಿಗಳು ತಮ್ಮ ತಂತ್ರಕ್ಕೆ ತಂತ್ರಜ್ಞಾನವನ್ನೂ ಸುಲಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಪರಿಹಾರವನ್ನು ವಿಡಿಯೋ ಕಾಲ್ ಮೂಲಕವೇ ನೀಡುವಷ್ಟು ಬೆಳೆದಿದ್ದಾರೆ. ಪುಣೆಯಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು ಗರ್ಭಿಣಿಯಾಗಿಲ್ಲವೆಂದು ಸ್ಥಳೀಯ ತಂತ್ರಿಯೊಬ್ಬರಲ್ಲಿ ಆಕೆಯ ಅತ್ತೆ ಮತ್ತು ಗಂಡ ಪರಿಹಾರ ಕೇಳಿದ್ದಾರೆ. ಆಗ ಅಘೋರಿಯೊಂದಿಗೆ ಆತ ಸಂಪರ್ಕ ಸಾಧಿಸಲು ಸಹಾಯ ಮಾಡಿದ್ದಾನೆ. ಅಘೋರಿಯು ಮಾನವನ ಮೂಳೆಗಳನ್ನು ಪುಡಿ ಮಾಡಿ ಆ ಮಹಿಳೆಗೆ ಸೇವಿಸಲು ಹೇಳಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಭಾಗಿಯಾದ ಏಳು ಜನರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕೃತಜ್ಞತಾ ಭಾವ ಮೂಡಿದೆ; ಮೈಕ್ರೋಸಾಫ್ಟ್ನಿಂದ ವಜಾಗೊಂಡ ಉದ್ಯೋಗಿಯ ಪತ್ರ
ಪುಣೆಯ ಡೆಪ್ಯೂಟಿ ಕಮಿಷನರ್ ಸುಹೇಲ್ ಶರ್ಮಾ, ಈ ಏಳು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498 A, 323, 504, 506 ಮತ್ತು ಮೂಢನಂಬಿಕೆ ವಿರೋಧಿ ಕಾಯ್ದೆಯ ಸೆಕ್ಷನ್ 3 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ (ಅಮಾನವೀಯ ಆಚರಣೆ ಮತ್ತು ಅಘೋರಿಗಳಿಗೆ ಸಂಬಂಧಿಸಿದ ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ, 2013).
ಮಹಿಳೆಯು ನೀಡಿದ ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ಬುಧವಾರ (ಜನವರಿ 18)ರಂದು ಸಿನ್ಹಾಗಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಗಂಡ, ಅತ್ತೆ, ತಂತ್ರಿ ಸೇರಿದಂತೆ ಏಳು ಜನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಈ ಮಹಿಳೆ ಈ ಹಿಂದೆಯೂ ಎರಡು ಬಾರಿ ಈ ಮಹಿಳೆ ತನ್ನ ಅತ್ತೆ ಮತ್ತು ಗಂಡನ ವಿರುದ್ಧ ದೂರು ದಾಖಲಿಸಿದ್ದಳು. ಮೊದಲ ದೂರಿನಲ್ಲಿ ಮದುವೆ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ಆಭರಣ ಮತ್ತು ವರದಕ್ಷಿಣೆಯ ಬೇಡಿಕೆ ಇಟ್ಟ ವಿಷಯವನ್ನು ಆರೋಪಿಸಿದ್ದಳು. ಎರಡನೇ ದೂರಿನಲ್ಲಿ ಮೂಢನಂಬಿಕೆ, ಮಾಟ ಮಂತ್ರ ಪ್ರಯೋಗದ ಕುರಿತಾಗಿ ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ್ದಳು.
ಇದನ್ನೂ ಓದಿ : ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ
‘ಈ ಮಹಿಳೆಯ ಅತ್ತೆ ಮಾವ ಅಘೋರಿ ತಂತ್ರಿಗಳೊಂದಿಗೆ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಸಲಹೆ ತೆಗೆದುಕೊಂಡಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅಮವಾಸ್ಯೆಗಳ ರಾತ್ರಿ ಜಲಪಾತದ ಕೆಳಗೆ ಅಘೋರಿ ಆಚರಣೆಗಳಲ್ಲಿ ಒಳಗೊಳ್ಳುವಂತೆ ಈ ಮಹಿಳೆಗೆ ಒತ್ತಾಯಿಸಲಾಗಿತ್ತು. ನಂತರ ಮನುಷ್ಯನ ಮೂಳೆಪುಡಿಗೆ ನೀರು ಬೆರೆಸಿ ಆಕೆಗೆ ಕುಡಿಯಲು ಒತ್ತಾಯಿಸಲಾಯಿತು. ಈಗ ಈ ಆಚರಣೆಯನ್ನು ಸ್ಮಷಾನವೊಂದಕ್ಕೆ ತೆರಳಿ ನಡೆಸಿದ್ದಾರೆ. ಆ ಸ್ಮಷಾನವನ್ನು ನಾವೀಗ ಹುಡುಕುತ್ತಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ. ಘಟನೆಗೆ ಸಂಬಂಧಿಸಿದ ಮತ್ತಷ್ಟು ವಿವರಗಳನ್ನು ತನಿಖೆಯ ನಂತರ ಬಹಿರಂಪಡಿಸುತ್ತೇವೆ’ ಎಂದು ಡಿಸಿಪಿ ಶರ್ಮಾ ತಿಳಿಸಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:17 pm, Sat, 21 January 23