ಕೃತಜ್ಞತಾ ಭಾವ ಮೂಡಿದೆ; ಮೈಕ್ರೋಸಾಫ್ಟ್​ನಿಂದ ವಜಾಗೊಂಡ ಉದ್ಯೋಗಿಯ ಪತ್ರ

TV9kannada Web Team

TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad

Updated on: Jan 21, 2023 | 10:38 AM

Microsoft : ಕಾಲೇಜು ಮುಗಿದೊಡನೆ ಸೇರಿದ ಈ ಮೊದಲ ಕಂಪೆನಿಯಲ್ಲಿ 21 ವರ್ಷಗಳ ಕಾಲ ಕೆಲಸ ಮಾಡಿದೆ. ವೃತ್ತಿ ಬೆಳವಣಿಗೆಗೆ ಮಾತ್ರವಲ್ಲ, ಸಹೋದ್ಯೋಗಿಗಳೊಂದಿಗೆ ವೈಯಕ್ತಿಕ ಸಂಬಂಧ ಬೆಸೆಯಲೂ ಈ ಕಂಪೆನಿ ಕಾರಣವಾಗಿತ್ತು.

ಕೃತಜ್ಞತಾ ಭಾವ ಮೂಡಿದೆ; ಮೈಕ್ರೋಸಾಫ್ಟ್​ನಿಂದ ವಜಾಗೊಂಡ ಉದ್ಯೋಗಿಯ ಪತ್ರ
ಪ್ರಶಾಂತ ಕಮಾನಿ

Viral News : ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಅನೇಕ ಕಂಪೆನಿಗಳಲ್ಲಿ ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಜಗತ್ತಿನ ನಂಬರ್​ ಒನ್​ ಕಂಪೆನಿ ಮೈಕ್ರೋಸಾಫ್ಟ್​ನಲ್ಲಿ ಈತನಕ ಸುಮಾರು 11,000 ಉದ್ಯೋಗಗಿಳನ್ನು ವಜಾಗೊಳಿಸಲಾಗಿದೆ. ಇದರಿಂದಾಗಿ ಅನೇಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೆಲವರು ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ಧಾರೆ. ಈ ಪೈಕಿ ಲಿಂಕ್ಡ್​ಇನ್​ನಲ್ಲಿ ಪ್ರಶಾಂತ ಕಮಾನಿ ಎನ್ನುವವರ ಪೋಸ್ಟ್​ ವೈರಲ್ ಆಗುತ್ತಿದೆ.

ತಾಜಾ ಸುದ್ದಿ

ನಾನು 21 ವರ್ಷಗಳ ಕಾಲ ಮೈಕ್ರೋಸಾಫ್ಟ್​ ಕಂಪೆನಿಯಲ್ಲಿ ಕೆಲಸ ಮಾಡಿ ಇದೀಗ ವಜಾಗೊಂಡಿದ್ದೇನೆ. ಈ ಕಂಪೆನಿ  ವೃತ್ತಿ ಸಂಬಂಧದ ಬೆಳವಣಿಗೆಗೆ ಮಾತ್ರವಲ್ಲ, ಸಹೋದ್ಯೋಗಿಗಳೊಂದಿಗೆ ವೈಯಕ್ತಿಕ ಸಂಬಂಧ ಬೆಸೆಯಲೂ ಕಾರಣವಾಗಿದೆ. ಈ ಕಂಪೆನಿಯಿಂದ ನನ್ನನ್ನು ವಜಾಗೊಳಿಸಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ನನ್ನಲ್ಲಿ ಕೃತಜ್ಞತಾ ಭಾವ ಮೂಡಿತು.

ಇದನ್ನೂ ಓದಿ : Microsoft: ಉದ್ಯೋಗಿಗಳ ರಾಜೀನಾಮೆ ತಡೆಯಲು ದುಪ್ಪಟ್ಟು ವೇತನ ನೀಡುವುದಕ್ಕೆ ಮುಂದಾದ ಮೈಕ್ರೋಸಾಫ್ಟ್

ಏಕೆಂದರೆ ಕಾಲೇಜು ಶಿಕ್ಷಣ ಮುಗಿಸಿ ಸೇರಿದ ಮೊದಲ ಕೆಲಸ ಇದಾಗಿತ್ತು. ಮೊದಲ ಕೆಲಸವೆಂದಮೇಲೆ ಆತಂಕ, ಉತ್ಸಾಹ ಎರಡೂ ಇದ್ದದ್ದೇ. ಆದರೆ ಈ ಕಂಪೆನಿಯ ಅನೇಕ ಪ್ರತಿಭಾವಂತ, ಸ್ಮಾರ್ಟ್​  ಜನರೊಂದಿಗಿನ ಒಡನಾಟ ನನ್ನನ್ನು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುವಂತೆ ಮಾಡಿತು. ಈ ಪ್ರಯಾಣದಲ್ಲಿ ಅನೇಕರೊಂದಿಗೆ ವೈಯಕ್ತಿಕ ಒಡನಾಟ ಬೆಳೆಯಿತು. ಒಳ್ಳೆಯ ಮತ್ತು ಸವಾಲಿನ ಸಂದರ್ಭಗಳು ಬಂದಾಗೆಲ್ಲ ಅವರು ಜೊತೆಯಾದರು. ಒಂದು ದೊಡ್ಡ ಕುಟುಂಬವೇ ನಿರ್ಮಾಣವಾಯಿತು. ಅವರೆಲ್ಲರಿಗೂ ನನ್ನ ಧನ್ಯವಾದಗಳು.

ಇದನ್ನೂ ಓದಿ : Layoffs: 3,000 ಉದ್ಯೋಗಿಗಳ ವಜಾಗೊಳಿಸಲಿದೆ ಗೋಲ್ಡ್​ಮನ್ ಸ್ಯಾಕ್ಸ್; ವರದಿ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್​ ಅನ್ನು ಈತನ 26,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ‘ನೀವು ವಿಶಾಲ ಹೃದಯಿಗಳು. ನಿಮ್ಮೊಳಗಿನ ವೈಶಾಲ್ಯವನ್ನು ಯಾರೂ ಕಡಿಮೆಗೊಳಿಸಲು ಸಾಧ್ಯವಿಲ್ಲ. 20 ವರ್ಷಗಳ ನಂತರ ನಿಮ್ಮನ್ನು ಕಂಪೆನಿಯಿಂದ ವಜಾಗೊಳಿಸಿದರೂ ಕಂಪೆನಿಯ ಬಗ್ಗೆ ಇನ್ನೂ ವಿನಮ್ರತೆ ಹೊಂದಿದ್ದೀರಿ. ನಮಗೆ ನೀವೇ ಸ್ಫೂರ್ತಿ ಸರ್. ನಿಮಗೆ ಒಳ್ಳೆಯದಾಗಿಲಿ ಎಂದಿದ್ಧಾರೆ ಕೆಲವರು.

ಇದನ್ನೂ ಓದಿ : Layoffs: ಟೆಕ್ ಉದ್ಯೋಗಿಗಳಿಗೆ ಕಹಿ ತಂದ ಹೊಸ ವರ್ಷ; ದಿನಕ್ಕೆ ಸರಾಸರಿ 1,600 ಮಂದಿ ಕೆಲಸದಿಂದ ವಜಾ

ದಯವಿಟ್ಟು ನಿಮ್ಮ ಪ್ರೊಫೈಲ್​ ಅನ್ನು ನನಗೆ ಕಳಿಸಿ, ಸರಿಯಾದ ಅವಕಾಶವಿದ್ದಾಗ ನಿಮ್ಮನ್ನು ಸಂಪರ್ಕಿಸುತ್ತೇನೆ ಎಂದು ಮತ್ತೊಬ್ಬರು ಹೇಳಿದ್ಧಾರೆ. ಅನೇಕರು ಇವರ ಶಾಂತ ಮತ್ತು ವಿನಮ್ರ ಸ್ವಭಾವವನ್ನು ಶ್ಲಾಘಿಸಿದ್ದಾರೆ. ಮುಂದಿನ ಪ್ರಯಾಣಕ್ಕೆ ಶುಭಹಾರೈಸಿದ್ಧಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada