ಇನ್ನು ನೆಗೆದಾಟ ಬಂದ್, ಎಲ್ಲಾ ಆನ್ಲೈನ್ ಆರ್ಡರ್ ಮಾಡೋಣ; ಮಂಗಗಳ ಡಿಜಿಟಲ್ ಸಾಕ್ಷರತೆ
Monkey : ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗಿದೆ ಎಂದು ಮೊಬೈಲ್ನಲ್ಲಿ ಮುಳುಗಿದ್ದ ಮನುಷ್ಯರನ್ನು ಇನ್ನೂ ಬಯ್ಯುತ್ತಲೇ ಇರುತ್ತಾರೆ. ಆದರೆ ಈಗ ಈ ಮಂಗಗಳಿಗೆ ಏನೆಂದು ಹೇಳುವುದು?
Viral Video : ಓಹ್ ಇದರಲ್ಲಿ ಹೀಗೆಲ್ಲ ಇದೆಯಾ? ಇನ್ ಮೇಲೆ ನಾವು ಮರದಿಂದ ಮರಕ್ಕೆ, ಕಾಂಪೌಂಡಿಂದ ಕಾಂಪೌಂಡಿಗೆ ನೆಗೆಯೋದೆಲ್ಲ ಸಾಕು ಮಾಡೋಣಲ್ಲವಾ. ಅಮೇಝಾನ್ನಲ್ಲಿ ಬಾಳೆಹಣ್ಣು ಸಿಗತ್ತಾ, ಪೇರಲೆ ಹಣ್ಣು? ಈ ಸ್ವಿಗ್ಗಿ ಅಂದ್ರೆ ಏನು? ಅದರಲ್ಲಿ ಏನೇನು ಸಿಗತ್ತೆ. ಮಿಂತ್ರಾ ಅಂತೊಂದಿದೆಯಲ್ಲ ಒಂದು ಶರ್ಟ್ ತರಿಸಿ ನೋಡೋಣ್ವಾ ತುಂಬಾ ಚಳಿ ಇದೆ. ಈ ಕೋತಿಯಮ್ಮ, ಮಕ್ಕಳು, ಕಸಿನ್ಸ್ ಎಲ್ಲ ಸೇರಿ ಮೊಬೈಲ್ನಲ್ಲಿ ಆ್ಯಪ್ಗಳನ್ನು ತಡಕಾಡ್ತಿರೋ ಗಂಭೀರತೆ ನೋಡಿದರೆ ಹೀಗೇ ತಾನೇ ಅನ್ನಿಸೋದು?
Look at the success of digital literacy awareness reaching an unbelievable level! pic.twitter.com/VEpjxsOZa3
ಇದನ್ನೂ ಓದಿ— Kiren Rijiju (@KirenRijiju) January 19, 2023
ಮಂಗನ ಕೈಗೆ ಮೊಬೈಲ್ ಕೊಟ್ಟರೆ ಇನ್ನೇನಾಗಬೇಡ. ನಮ್ಮ ಪೂರ್ವಜರೇ ಅವರು. ಮರದ ಮೇಲೆ ಇರ್ತಾರೆ ಅಂತ ಪ್ರಾಣಿಗಳು. ಮನೆಯೊಳಗಿಟ್ಟುಕೊಂಡರೆ ಮನುಷ್ಯರೇ. ಈಗಾಗಲೇ ಆನ್ಲೈನ್ನಲ್ಲಿ ಸಾಕಷ್ಟು ವಿಡಿಯೋಗಳನ್ನು ನೋಡಿರುತ್ತೀರಿ. ಸಾಕಿದ ಮಂಗಗಳು ತರಕಾರಿ ಕತ್ತರಿಸುವಲ್ಲಿ ಸಹಾಯ ಮಾಡುವುದು, ಶಾಲೆಗೆ ಹೋಗುವುದು, ಬಟ್ಟೆ ಒಗೆಯುವುದು, ಮಗುವನ್ನು ಆಡಿಸುವುದು, ಅಂಗಡಿಗೆ ಹೋಗುವುದು ಹೀಗೆ…
ಇದನ್ನೂ ಓದಿ : ಎದುರುಬದುರಾದ ಕಾರ್ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್
ಕೇಂದ್ರ ಸಚಿವ ಕಿರಣ ರಿಜಿಜು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಡಿಜಿಟಲ್ ಕ್ರಾಂತಿಯ ಅಭೂತಪೂರ್ವ ಯಶಸ್ಸನ್ನು ನೋಡಿ ಎಂಬ ನೋಟ್ ಬರೆದಿದ್ದಾರೆ. ಈ ವಿಡಿಯೋ ಅನ್ನು ಈತನಕ 1.23 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.
ಇದನ್ನೂ ಓದಿ : ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ
ಅಬ್ಬಾ! ಎಂಥ ಅದ್ಭುತವಾದ ವಿಡಿಯೋ ಇದು ಎಂದಿದ್ಧಾರೆ ಒಬ್ಬರು. ಇವರೆಲ್ಲರ ಕುತೂಹಲ ಮತ್ತು ಚಕಚಕನೆ ಸ್ಕ್ರಾಲ್ ಮಾಡುವುದನ್ನು ನೋಡಿ ಎಂದಿದ್ಧಾರೆ ಮತ್ತೊಬ್ಬರು. ಎಷ್ಟು ಆಸ್ಥೆ, ಸಮಾಧಾನದಿಂದ ಒಬ್ಬೊಬ್ಬರೇ ನೋಡುತ್ತಿದ್ದಾರೆ ನೋಡಿ ಎಂದಿದ್ದಾರೆ ಮಗದೊಬ್ಬರು.
ಕಲ್ಪಿಸಿಕೊಳ್ಳಿ ಮಂಗಗಳ ಮೊಬೈಲ್ ಇಟ್ಟುಕೊಂಡು ಓಡಾಡಲು ಶುರು ಮಾಡಿದರೆ ಹೇಗೆ ಎಂದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:15 pm, Fri, 20 January 23