AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತೀ ಹಿರಿಯ ಮಹಿಳೆ 115ರ ಮಾರಿಯಾ; ಏನಿವರ ದೀರ್ಘಾಯುಷ್ಯದ ಗುಟ್ಟು

Guinness World Record : ಎಂಥ ಕಳೆಕಳೆಯಾಗಿದ್ದೀರಿ ಈಗಲೂ! ನೆಟ್ಟಿಗರು ಇವರನ್ನು ಕೊಂಡಾಡುತ್ತಿದ್ಧಾರೆ. ಇತ್ತೀಚೆಗೆ 118ರ ಸಿಸ್ಟರ್​ ಆ್ಯಂಡ್ರೆ ತೀರಿದ ನಂತರ, ಮಾರಿಯಾ ಅವರೇ ಇದೀಗ ವಿಶ್ವದ ಅತೀ ಹಿರಿಯ ಮಹಿಳೆ ಎನ್ನಿಸಿಕೊಂಡಿದ್ಧಾರೆ.

ವಿಶ್ವದ ಅತೀ ಹಿರಿಯ ಮಹಿಳೆ 115ರ ಮಾರಿಯಾ; ಏನಿವರ ದೀರ್ಘಾಯುಷ್ಯದ ಗುಟ್ಟು
115ರ ಮಾರಿಯಾ ಬ್ರ್ಯಾನ್ಯಾಸ್ ಮೊರೆರಾ
TV9 Web
| Updated By: ಶ್ರೀದೇವಿ ಕಳಸದ|

Updated on: Jan 20, 2023 | 1:38 PM

Share

Viral News : ವಿಶ್ವದ ಅತ್ಯಂತ ಹಿರಿಯ ಮಹಿಳೆ ಸಿಸ್ಟರ್ ಆ್ಯಂಡ್ರೆ (Lucile Randon) ನಿಧನದ ನಂತರ ಇದೀಗ ವಿಶ್ವದ ಹಿರಿಯ ಮಹಿಳೆಯ ಪಟ್ಟಕ್ಕೆ 115 ವಯಸ್ಸಿನ ಮಾರಿಯಾ ಬ್ರ್ಯಾನ್ಯಾಸ್​ ಮೊರೆರಾ (María Branyas Morera) ಎಂಬುವವರು ​ಪಾತ್ರರಾಗಿದ್ದಾರೆ ಎಂದು ಗಿನ್ನೀಸ್​ ವಿಶ್ವ ದಾಖಲೆಯು (Guinness World Records) ಘೋಷಿಸಿದೆ.  ಮಾರಿಯಾ ಮೂಲತಃ ಅಮೆರಿಕದವು, ಆದರೆ ವಾಸವಾಗಿರುವುದು ಸ್ಪೇನ್​ನಲ್ಲಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Guinness World Records (@guinnessworldrecords)

ಕ್ಯಾಲಿಫೋರ್ನಿಯಾದ ಸ್ಯಾನ್​ ಫ್ರಾನ್ಸಿಸ್ಕೋಗೆ ಮಾರಿಯಾ ಪೋಷಕರು ವಲಸೆಗೆ ಬಂದರು. ಒಂದು ವರ್ಷದ ಬಳಿಕ ಅಂದರೆ 1907ರ ಮಾರ್ಚ್​ 4 ರಂದು ಮಾರಿಯಾ ಹುಟ್ಟಿದರು. ಎಂಟು ವರ್ಷದ ನಂತರ ಈ ಕುಟುಂಬ ಸ್ಪೇನ್​ಗೆ ತೆರಳಿತು. ಇವರ ಜೀವನಯಾನವನ್ನು ಬ್ಲಾಗ್​ ಒಂದರಲ್ಲಿ ದಾಖಲಿಸಲಾಗಿದೆ. ಅದರಲ್ಲಿ, ‘ನನ್ನ ಪ್ರಕಾರ ದೀರ್ಘಾಯಸ್ಸು ಅದೃಷ್ಟ. ಇದು ವಂಶವಾಹಿಗೆ ಸಂಬಂಧಿಸಿದ್ದು. ಕುಟುಂಬ, ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ, ಪ್ರಕೃತಿಯೊಂದಿಗೆ ಒಡನಾಟ, ಭಾವನಾತ್ಮಕ ಸ್ಥಿರತೆ, ನಿಶ್ಚಿಂತೆ, ನಕಾರಾತ್ಮಕ ಮನೋಭಾವದವರಿಂದ ದೂರ ಇರುವುದು ಇವೇ ನನ್ನ ದೀರ್ಘಾಯುಷ್ಯದ ಗುಟ್ಟು’ ಎಂದಿದ್ದಾರೆ ಮಾರಿಯಾ.

ಇದನ್ನೂ ಓದಿ : ಜಗತ್ತಿನ ಅತೀ ಎತ್ತರದ ಮನುಷ್ಯನ ಚಿತ್ರಗಳು ಮತ್ತೆ ಹರಿದಾಡಿದಾಗ

26,000ಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್ ಇಷ್ಟಪಟ್ಟಿದ್ದಾರೆ. ಈ ವಯಸ್ಸಿನಲ್ಲಿಯೂ ಇವರು ತುಂಬಾ ಆರೋಗ್ಯವಂತರಂತೆ ಕಾಣುತ್ತಾರೆ ಎಂದಿದ್ದಾರೆ ನೆಟ್ಟಿಗರು. ಇನ್ನೂ ಇವರು 20 ವರ್ಷಕ್ಕಿಂತಲೂ ಹೆಚ್ಚಿಗೆ ಬದುಕಬಹುದು ಎಂದೆನ್ನಿಸುತ್ತಿದೆ ಎಂದಿದ್ಧಾರೆ ಒಬ್ಬರು. ಇವರು 200 ತಲುಪಲಿ ಎಂದಿದ್ದಾರೆ ಮಗದೊಬ್ಬರು. ಇನ್ನೂ ಎಷ್ಟು ಕಳೆಕಳೆಯಾಗಿದ್ದಾರೆ ಈ ಅಜ್ಜಿ ಎಂದು ಇನ್ನೂ ಒಬ್ಬರು ಮುದ್ದಿನಿಂದ ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!