ಟಾಮಿ ವೆಡ್ಸ್ ಜೈಲಿ; ಉತ್ತರ ಪ್ರದೇಶದಲ್ಲಿ ನಾಯಿಗಳ ಮದುವೆ; ವಿಡಿಯೋ ವೈರಲ್
Viral Video : ಅಲೀಘರ್ನಲ್ಲಿ ಮಕರ ಸಂಕ್ರಾಂತಿಯಂದು ಭಾರತೀಯ ವಿವಾಹ ಪದ್ಧತಿಯಡಿ ಈ ನಾಯಿಗಳ ಮದುವೆ ನಡೆದಿದೆ. ದಿಬ್ಬಣ, ಶಾಮಿಯಾನ್, ಸಂಗೀತ, ನೃತ್ಯ, ತುಪ್ಪದ ಖಾದ್ಯ ಆದಿಯಾಗಿ 40ರಿಂದ 50 ಸಾವಿರ ಹಣ ಖರ್ಚಾಗಿದೆ.
Viral Video : ಮದುವೆಯಿಂದಲೇ ಮೋಕ್ಷ!? ಎಂದು ನಂಬಿಕೊಂಡಿರುವ ಕೆಲ ಭಾರತೀಯರು ತಮ್ಮ ಸಾಕುನಾಯಿಗಳಿಗೂ ಮದುವೆ ಮಾಡುತ್ತಿರುವ ವಿಡಿಯೋಗಳನ್ನು ನೀವೀಗಾಗಲೇ ನೋಡಿದ್ದೀರಿ. ಮತ್ತೀಗ ಹೊಸದೊಂದು ವಿಡಿಯೋ ವೈರಲ್ ಆಗುತ್ತಿದೆ. ಈ ನಾಯಿಗಳಿಗೆ ಎಂದಾದರೂ ಭಾರತೀಯ ವಿವಾಹ ಪದ್ಧತಿಯ ನಿಯಮಗಳ ಬಗ್ಗೆ ಅರಿವು ಇರೋದಕ್ಕೆ ಸಾಧ್ಯವಾ? ಅಥವಾ ಹೇಳಿಕೊಟ್ಟರೆ ಅರಿವು ಹುಟ್ಟಬಹುದಾ? ಮನುಷ್ಯನಂಥ ಸ್ವಾರ್ಥಜೀವಿಯ ಕೈಗೆ ಸಿಕ್ಕು ಪಾಪ ಈ ನಾಯಿಗಳು…
#WATCH | A male dog, Tommy and a female dog, Jaily were married off to each other in UP’s Aligarh yesterday; attendees danced to the beats of dhol pic.twitter.com/9NXFkzrgpY
ಇದನ್ನೂ ಓದಿ— ANI UP/Uttarakhand (@ANINewsUP) January 15, 2023
ಉತ್ತರ ಪ್ರದೇಶದ ಅಲೀಘರ್ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ತಮ್ಮ ಸಾಕುನಾಯಿಗೆ ನೆರೆಮನೆಯ ನಾಯಿಯೊಂದಿಗೆ ಭಾರತೀಯ ವಿವಾಹ ಪದ್ಧತಿಯಡಿ ಮದುವೆ ಮಾಡಿದ್ಧಾರೆ. ಸುಖ್ರಾವಲಿ ಗ್ರಾಮದ ದಿನೇಶ್ ಚೌಧರಿಯವರ ಸಾಕುನಾಯಿ ಟಾಮಿ ವರನಾದರೆ, ಅತ್ರೌಲಿಯ ಟಿಕ್ರಿ ರಾಯ್ಪುರದ ಡಾ. ರಾಮ್ಪ್ರಕಾಶ್ ಸಿಂಗ್ ಅವರ ಏಳು ತಿಂಗಳ ಹೆಣ್ಣುನಾಯಿ ಜೈಲಿ ವಧು.
ಇದನ್ನೂ ಓದಿ : ಹಗ್ಗದಾಟದಲ್ಲಿ ಗಿನ್ನೀಸ್ ವಿಶ್ವದಾಖಲೆ ಮಾಡಿದ ಬಲು ಎಂಬ ನಾಯಿ
ಮಕರ ಸಂಕ್ರಾಂತಿಯ ದಿನ ಟಾಮಿ ಮತ್ತು ಜೈಲಿಯ ವಿವಾಹ ನೆರವೇರಿದೆ. ಆ ದಿನ ರಾಯಪುರದಿಂದ ವಧು ಜೈಲಿಯೊಂದಿಗೆ ಆಕೆಯ ಪೋಷಕರು, ಸಂಬಂಧಿಕರು, ಆಪ್ತರು ಸುಖ್ರಾವಲಿಗೆ ಬಂದಿಳಿದರು. ಜೈಲಿಯನ್ನು ವರ ಟಾಮಿಯ ಕುಟುಂಬದವರು ತಿಲಕ, ಆರತಿಯೊಂದಿಗೆ ಬರಮಾಡಿಕೊಂಡರು. ನಂತರ ಟಾಮಿ ಮತ್ತು ಜೈಲಿ ಮಂಟಪದಲ್ಲಿ ಕುಳಿತು ಪರಸ್ಪರ ಹಾರವನ್ನು ಬದಲಾಯಿಸಿಕೊಳ್ಳಲು ಪೋಷಕರು ಸಹಾಯ ಮಾಡಿದರು.
ಇದನ್ನೂ ಓದಿ : ಗುರುಗ್ರಾಮ್ನ ‘ಸ್ವೀಟಿ ಮತ್ತು ಶೇರು’ ಭಾರತೀಯ ವಿವಾಹ ಪದ್ಧತಿಯಲ್ಲಿ ದಾಂಪತ್ಯಜೀವನಕ್ಕೆ
ಮದುವೆಗೆ ಸೇರಿದ ಮಂದಿಯೆಲ್ಲ ಸಂಗೀತ, ನೃತ್ಯ, ಮೆರವಣಿಗೆಯಲ್ಲಿ ಖುಷಿಯಿಂದ ಪಾಲ್ಗೊಂಡರು. ಮದುವೆಯಲ್ಲಿ ಪಾಲ್ಗೊಂಡವರಿಗಷ್ಟೇ ಅಲ್ಲ ಅಕ್ಕಪಕ್ಕದ ನಾಯಿಗಳಿಗೂ ತುಪ್ಪದಲ್ಲಿ ತಯಾರಿಸಲಾದ ಖಾದ್ಯಗಳನ್ನು ಬಡಿಸಲಾಯಿತು. ಈ ಮದುವೆಗೆ ಸುಮಾರು 40ರಿಂದ 50 ಸಾವಿರ ಹಣ ಖರ್ಚಾಗಿದೆ ಎಂದು ಟಾಮಿಯ ಪೋಷಕ ದಿನೇಶ್ ತಿಳಸಿದ್ದಾರೆ.
ಇದನ್ನೂ ಓದಿ : 350 ಜನರನ್ನು ಆಹ್ವಾನಿಸಿ ನಾಯಿಯ ಹುಟ್ಟುಹಬ್ಬ ಮಾಡಿದ ಧನಬಾದ್ನ ದಂಪತಿ
ಈ ವಿಡಿಯೋ ಅನ್ನೂ ಈತನಕ 45,7000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 400ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ಧಾರೆ. ಮದುವೆಯಾಗುತ್ತಿರುವುದು ನೀವಲ್ಲ, ನಾಯಿಗಳು ಎನ್ನುವುದು ಗಮನದಲ್ಲಿರಲಿ ಎಂದಿದ್ದಾರೆ ಅನೇಕರು. ಪ್ರಾಣಿಪ್ರಿಯರ ಈ ನಡೆ ಬಹಳ ಚೆನ್ನಾಗಿದೆ ಎಂದು ಮೆಚ್ಚಿದ್ದಾರೆ ಕೆಲವರು.
ಇದನ್ನೂ ಓದಿ : ಕೇರಳದಲ್ಲಿ ಬೀಗಲ್ ತಳಿಯ ನಾಯಿಗಳಿಗೆ ಸಾಂಪ್ರದಾಯಿಕ ಮದುವೆ; ವಿವಾಹದಲ್ಲಿ ಭರ್ಜರಿ ಊಟ, ಫೋಟೋ ಶೂಟ್ ವ್ಯವಸ್ಥೆ!
22 ವರ್ಷದ ಅವಿವಾಹಿತನಾದ ನಾನು ಇದನ್ನು ನೋಡುತ್ತಿದ್ದೇನೆ. ನನಗೆ ಹೇಗನ್ನಿಸಬೇಡ ಎಂದಿದ್ದಾರೆ ಮತ್ತೊಬ್ಬರು. ಟಾಮಿಗೆ ಮನಸ್ಸಿಲ್ಲ ಎಂದು ತೋರುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನವದಂಪತಿಗೆ ಶುಭಾಶಯ ಎಂದಿದ್ಧಾರೆ ಅನೇಕರು. ಕುಂಡಲಿ ಕೂಡಿತೋ ಇಲ್ಲವೋ ಎಂದು ಕೇಳಿದ್ಧಾರೆ ಒಬ್ಬರು.
ಇದನ್ನೂ ಓದಿ : ಮದುಮಗ ತನ್ನ ಪ್ರೀತಿಯ ನಾಯಿಯೊಂದಿಗೆ ಮದುವೆ ಮಂಟಪಕ್ಕೆ ಬಂದಾಗ
ಒಟ್ಟಿನಲ್ಲಿ ಜನರ ಬಹಳ ಸಾಕಷ್ಟು ದುಡ್ಡು ಇದೆ! ಎಂದಿದ್ಧಾರೆ ಮತ್ತೊಬ್ಬರು. ಒಂಟಿಮನುಷ್ಯರೆಲ್ಲ ನೋಡಿ ಇಲ್ಲಿ, ನಾಯಿಗಳೂ ಕೂಡ ಮದುವೆಯಾಗುತ್ತಿವೆ! ಎಂದಿದ್ದಾರೆ ಮಗದೊಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:03 pm, Tue, 17 January 23