ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇದು ಶವದ ಪಾದವೇ?
Dead man's finger : ಥ್ಯಾಂಕ್ಸ್ ಬ್ರೋ ಯುಪಿಎಸ್ಸಿ ಪರೀಕ್ಷೆಯಲ್ಲಿ ಈ ಪ್ರಶ್ನೆ ಕೇಳುವುದು ಗ್ಯಾರಂಟಿ ಎಂದಿದ್ದಾರೆ ಒಬ್ಬರು. ಇನ್ನೊಬ್ಬರು, ಹನುಮಾನ್ ಚಾಲೀಸಾ ಪಠಿಸಿದರೆ ದೆವ್ವ ಹತ್ತಿರ ಬಾರದು ಎಂದಿದ್ದಾರೆ. ನಿಜವಾಗಲೂ ಇದು ಏನು?
Viral News : ಈ ಕಟ್ಟಿಗೆಯ ಕೆಳಗೆ ಕಾಣುತ್ತಿರುವ ಪಾದ ಶವದ್ದೇ? ನೋಡಿದ ಯಾರಿಗೂ ಈ ಅನುಮಾನ ಬಾರದೇ ಇರದು. ಈ ತೆಳುಪಾದವನ್ನು ಮತ್ತೆ ನೋಡಿದಾಗ ಇದೊಂದು ಹೆಣ್ಣುಶವದ ಪಾದವಿದ್ದಿರಬೇಕು ಎನ್ನಿಸುತ್ತದೆ. ಮತ್ತೂ ನೋಡಿದಾಗ ನಾಜೂಕಾದ ಉಗುರುಗಳಿಗೆ ನೇಲ್ಪಾಲಿಶ್ ಹಚ್ಚಿದಂತೆ ಕಂಡು, ಇದು ಪಕ್ಕಾ ಹೆಣ್ಣುಶವದ ಪಾದವೇ ಎಂಬ ತೀರ್ಮಾನಕ್ಕೆ ಬರಬೇಕು ಎನ್ನಿಸುತ್ತದೆ.
Here is more information about ithttps://t.co/tJl8ztRyzz
ಇದನ್ನೂ ಓದಿ— Akash Pande (@akashpande31) January 10, 2023
ಐಎಫ್‌ಎಸ್ ಅಧಿಕಾರಿ ಸಾಮ್ರಾಟ್ ಗೌಡ ಈ ಫೋಟೋ ಟ್ವೀಟ್ ಮಾಡಿದ್ದಾರೆ. ಇದು ಶವದ ಬೆರಳುಗಳಂತೆ ಕಾಣುವ ಶಿಲೀಂಧ್ರ (Dead man’s finger). ಇದನ್ನು ಕ್ಸೈಲೇರಿಯಾ ಪಾಲಿಮಾರ್ಫಾ (Xylaria polymorpha) ಎಂದು ಕರೆಯಲಾಗುತ್ತದೆ. ಇದನ್ನು ನೋಡಿದ ನೆಟ್ಟಿಗರು, ಸದ್ಯ! ಇದೊಂದು ಶಿಲೀಂಧ್ರ. ಈಗಲೂ ಈ ಫೋಟೋ ನೋಡಿ ಭಯವಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್
ಈ ಶಿಲೀಂಧ್ರವು ಬೀಚ್ವುಡ್ ಮರಗಳ ಬೊಡ್ಡೆಗಳಡಿ ಬೆಳೆಯುತ್ತದೆ. ವರ್ಷವಿಡೀ ಇದು ಹೀಗೇ ಇರುತ್ತದೆ. ಆದ್ದರಿಂದ ಡೆಡ್ ಮ್ಯಾನ್ಸ್ ಫಿಂಗರ್ಸ್ ಎಂದೇ ಇದನ್ನು ಕರೆಯುತ್ತಾರೆ. ಬ್ರಿಟನ್ ಮತ್ತು ಐರ್ಲೆಂಡ್ನಲ್ಲಿ ಇದು ಸಾಮಾನ್ಯವಾಗಿ ಬೆಳೆಯುತ್ತದೆ. ಉತ್ತರ ಅಮೆರಿಕಾ, ಯುರೋಪ್ನ ಅನೇಕ ಪ್ರದೇಶಗಳಲ್ಲಿ ಕೂಡ ಇದು ಬೆಳೆಯುತ್ತದೆ.
ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್
ಪ್ರಕೃತಿಗಿಂತ ಸೃಜನಶೀಲ ಯಾವುದೂ ಇಲ್ಲ ಎಂದಿದ್ದಾರೆ ನೆಟ್ಟಿಗರೊಬ್ಬರು. ದೆವ್ವ ಇದು! ಎಂದು ನಕ್ಕಿದ್ದಾರೆ ಕೆಲವರು. ಖಂಡಿತ ಈ ಕುರಿತು ಯುಪಿಎಸ್ಸಿ ಪರೀಕ್ಷೆಯಲ್ಲಿ ಕೇಳುತ್ತಾರೆ, ಮಾಹಿತಿಗಾಗಿ ಥ್ಯಾಂಕ್ಸ್ ಅಣ್ಣಾ ಎಂದಿದ್ದಾರೆ ಇನ್ನೊಬ್ಬರು. ಹನುಮಾನ್ ಚಾಲೀಸಾ ಪಠಿಸಿ, ಆಗ ಇದು ನಿಮ್ಮ ಹತ್ತಿರ ಬರಲಾರದು ಎಂದಿದ್ದಾರೆ ಮತ್ತೊಬ್ಬರು.
ಅನೇಕ ನೆಟ್ಟಿಗರು, ಇದು ಕನಸಲ್ಲೂ ಕಾಡುವಂತಿದೆ ಎಂದಿದ್ದಾರೆ. ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:18 pm, Tue, 17 January 23