Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷ್​ ಕೌನ್ಸಿಲ್​ನ ಕೆಲಸ ತೊರೆದು ಕನಸಿನ ಟೀ ಸ್ಟಾಲ್ ತೆರೆದ ದೆಹಲಿಯ ಮಹಿಳೆ

Tea Stall : ಎಂ ಎ ಇಂಗ್ಲಿಷ್​ ಓದಿ ಇಂಥಾ ಕೆಲಸ ಯಾಕೆ ಮಾಡಬೇಕು? ಇಂಥವರಿಗೆ ಪ್ರಚಾರ ಕೊಟ್ಟು ಅಸಂಘಟಿತ ವ್ಯವಹಾರ ವಲಯವನ್ನು ಪ್ರೋತ್ಸಾಹಿಸುತ್ತಿದ್ದೀರಿ. ಇದು ದೇಶದ ಆರ್ಥಿಕತೆಗೆ ನಷ್ಟ ತರುತ್ತದೆ ಎಂದಿದ್ದಾರೆ ನೆಟ್ಟಿಗರೊಬ್ಬರು.

ಬ್ರಿಟಿಷ್​ ಕೌನ್ಸಿಲ್​ನ ಕೆಲಸ ತೊರೆದು ಕನಸಿನ ಟೀ ಸ್ಟಾಲ್ ತೆರೆದ ದೆಹಲಿಯ ಮಹಿಳೆ
ದೆಹಲಿಯ ಶರ್ಮಿಷ್ಠಾ ಘೋಷ್​ ತನ್ನ ಚಹಾದ ಅಂಗಡಿಯ ಜೊತೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 16, 2023 | 6:30 PM

Viral News : ಎಂಬಿಎ, ಎಂಜಿನಿಯರಿಂಗ್, ಬಿಬಿಎ ಓದಿದ ಅನೇಕರು ಟೀ ಸ್ಟಾಲ್​ ತೆರೆದ ಸುದ್ದಿಗಳನ್ನು ಇದೇ ತಾಣದಲ್ಲಿ ಓದಿದ್ದೀರಿ. ಈಗ ಇವರ ಸಾಲಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಇಂಗ್ಲಿಷ್​ನಲ್ಲಿ ಎಂ.ಎ ಮಾಡಿ ಬ್ರಿಟಿಷ್ ಕೌನ್ಸಿಲ್​ನಲ್ಲಿ ಉದ್ಯೋಗಿಯಾಗಿದ್ದ ಇವರು ತಮ್ಮ ಕನಸಿನ ಟೀ ಸ್ಟಾಲ್​ ತೆರೆಯಲೆಂದೇ ಈ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಚಹಾ ಅಂಗಡಿ ನಡೆಸುವಲ್ಲಿ ಬಿಝಿಯಾಗಿದ್ಧಾರೆ. ಲಿಂಕ್ಡ್​ಇನ್​ನಲ್ಲಿ ಈ ಪೋಸ್ಟ್​ ವೈರಲ್ ಆಗುತ್ತಿದೆ.

Viral News MA Graduated woman quits job at British council to run a tea stall in Delhi

ಶರ್ಮಿಷ್ಠಾ ಘೋಷ್,​ ದೆಹಲಿಯ ಕಾಂಟ್ಸ್​ ಗೋಪಿನಾಥ್ ಬಜಾರ್​ನಲ್ಲಿ (Delhi Cantt’s Gopinath Bazar) ಟೀ ಸ್ಟಾಲ್​ ನಡೆಸುತ್ತಿದ್ಧಾರೆ. ನಿವೃತ್ತ ಬ್ರಿಗೇಡಿಯರ್​, ಇಂಡಿಯನ್ ಆರ್ಮಿ ಸಂಜಯ್​ ಖನ್ನಾ ಇವರ ಕುರಿತು ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಂಜೆ ಚಹಾ ಕುಡಿಯಲೆಂದು ಈ ರಸ್ತೆಗೆ ಬಂದಾಗ ಇಂಗ್ಲಿಷ್​ನಲ್ಲಿ ಮಾತನಾಡುತ್ತಾ ಚುರುಕಾಗಿ ಅಂಗಡಿ ನಡೆಸುತ್ತಿದ್ದ ಈ ಯುವತಿ ಕಣ್ಣಿಗೆ ಬಿದ್ದಳು. ಮಾತನಾಡಿಸುತ್ತಾ ಆಕೆಯ ಬಗ್ಗೆ ವಿಚಾರಿಸಿದೆ. ತನ್ನ ಹೆಸರು ಶರ್ಮಿಷ್ಠಾ ಘೋಷ್​ ಎಂದಳು. ತನ್ನ ಸ್ನೇಹಿತೆ ಭಾವನಾ ರಾವ್​ ಜೊತೆ ಸೇರಿ ಈ ಚಹಾ ಅಂಗಡಿ ನಡೆಸುತ್ತಿರುವುದಾಗಿ ಹೇಳಿದಳು. ಭಾವನಾ ಲುಫ್ತಾನ್ಸಾದ ಉದ್ಯೋಗಿಯಾಗಿದ್ದು ಈಕೆಯದು ಈ ಸಣ್ಣ ಹೂಡಿಕೆಯಲ್ಲಿ ಪಾಲಿದೆ. ಸಂಜೆಹೊತ್ತಿಗೆ ಇಬ್ಬರೂ ಸೇರಿ ಈ ಅಂಗಡಿಯನ್ನು ನಡೆಸುತ್ತಾರೆ ಎಂದಿದ್ದಾರೆ ಸಂಜಯ್ ಖನ್ನಾ.

ಇದನ್ನೂ ಓದಿ : ಬಾಬಾ ನೀಮ್ ಕರೋಲಿ; ವಿರಾಟ್​, ಅನುಷ್ಕಾ, ಜುಕರ್​ಬರ್ಕ್​, ಸ್ಟೀವ್​ ಜಾಬ್ಸ್​ಗೆ ಸ್ಫೂರ್ತಿ ನೀಡಿದ ಅತೀಂದ್ರಿಯ ಸಂತನ ಹಿನ್ನೆಲೆ ಏನು?

ಕನಸನ್ನು ನನಸಾಗಿಸಿಕೊಳ್ಳುವವರು ಎಂದೂ ಉನ್ನತ ಹುದ್ದೆ, ಉನ್ನತ ಮಟ್ಟದ ಉದ್ಯೋಗದ ಬಗ್ಗೆ ಯೋಚಿಸಬಾರದು ಎನ್ನುವುದನ್ನು ನಾನು ಬಲವಾಗಿ ನಂಬುತ್ತೇನೆ. ಗುರಿಯನ್ನು ತಲುಪಲು ಸಣ್ಣ ಮಾರ್ಗಗಳನ್ನೇ ಅನುಸರಿಸಬೇಕು ಎಂದೂ ಖನ್ನಾ ಹೇಳಿದ್ದಾರೆ. ಯಾವ ಕೆಲಸವೂ ಚಿಕ್ಕದು ದೊಡ್ಡದೂ ಅಂತಿಲ್ಲ. ಎಲ್ಲವೂ ನಮ್ಮ ಭಾವನೆಗೆ ಸಂಬಂಧಿಸಿದ್ದು ಮತ್ತು ಕನಸಿಗೂ. ಆದರೆ ಗುರಿ ಮುಟ್ಟುವಲ್ಲಿ ಉತ್ಸಾಹ ಹೊಂದುವುದು ಮುಖ್ಯ. ಶರ್ಮಿಷ್ಠಾ ಘೋಷ್​ ಮತ್ತು ಭಾವನಾ ಅವರ ಈ ಪ್ರಯತ್ನವು ನಿಜಕ್ಕೂ ಶ್ಲಾಘನೀಯ ಎಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ : ರಸ್ತೆಯಲ್ಲಿ ಬಸ್ ನಿಲ್ಲಿಸಿ ಚಿಕನ್ ತರಲು ಅಂಗಡಿಗೆ ಹೋದ ಲಂಡನ್ ಡ್ರೈವರ್ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಎಲ್ಲವೂ ಸಾಧ್ಯ. ಸ್ವಂತ ಕನಸನ್ನು ಅನುಸರಿಸುವುದರೊಂದಿಗೆ ಸ್ವಂತ ಉದ್ಯೋಗದಿಂದ ಇತರರಿಗೂ ಅವಕಾಶ ಕಲ್ಪಿಸಿಕೊಡುವುದು ಹೆಚ್ಚು ಪ್ರಶಂಸನೀಯ ಎಂದಿದ್ಧಾರೆ ಅನೇಕರು. ಆದರೆ ಕೆಲವರು ಶರ್ಮಿಷ್ಠಾಳ ನಡೆಯನ್ನು ವಿರೋಧಿಸಿದ್ದಾರೆ. ಶರ್ಮಿಷ್ಠಾಳ ತೀರ್ಮಾನ ನನಗೆ ಇಷ್ಟವಾಗುತ್ತಿಲ್ಲ. ಇಂಗ್ಲಿಷ್​ನಲ್ಲಿ ಎಂ. ಎ. ಓದಿ ಚಹಾ ಅಂಗಡಿ ಯಾಕೆ ನಡೆಸುವುದು? ಕಚೇರಿ ಕೆಲಸ ಬೇಡವೆಂದರೆ ಬೋಧನೆಯಲ್ಲಿ ತೊಡಗಿಕೊಳ್ಳಬಹುದಿತ್ತು. ಚಹಾದ ಅಂಗಡಿಯನ್ನೇ ಮಾಡುವುದಾದಲ್ಲಿ ಎಂ.ಎ. ಮುಗಿಯುವ ತನಕ ಯಾಕೆ ಕಾಯಬೇಕಿತ್ತು? ಎಂದಿದ್ಧಾರೆ ಒಬ್ಬರು. ಅಸಂಘಟಿತ ವ್ಯವಹಾರವು ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ. ಇಂಥವರಿಗೆ ಅನ್ಯಥಾ ಪ್ರಚಾರ ನೀಡುತ್ತಿದ್ದೀರಿ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್

ಇಂಗ್ಲಿಷ್​ ಮಾತನಾಡದ ಚಹಾ ಅಂಗಡಿಯವರೂ ಇಂಥ ಕನಸುಗಳನ್ನು ಹೊಂದಿದ್ಧಾರೆ. ಕಷ್ಟಪಟ್ಟು ಕೆಲಸವನ್ನೂ ಮಾಡುತ್ತಾರೆ. ಈಕೆಗೆ ಇಂಗ್ಲಿಷ್​ ಗೊತ್ತಿದೆ ಮತ್ತು ಮಾತನಾಡುತ್ತಾರೆ ಅಷ್ಟೇ ವ್ಯತ್ಯಾಸ. ಇಲ್ಲಿ ಬೇಕಾಗಿರುವುದು ಕನಸು ಮತ್ತು ಅದನ್ನು ಸಾಧ್ಯವಾಗಿಸಿಕೊಳ್ಳಲು ಶ್ರಮ, ಶ್ರದ್ಧೆ. ಇವಳಿಗೆ ಶುಭವಾಗಲಿ ಎಂದಿದ್ದಾರೆ ಮಗದೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:26 pm, Mon, 16 January 23

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!