ಕೇರಳದಲ್ಲಿ ಬೀಗಲ್ ತಳಿಯ ನಾಯಿಗಳಿಗೆ ಸಾಂಪ್ರದಾಯಿಕ ಮದುವೆ; ವಿವಾಹದಲ್ಲಿ ಭರ್ಜರಿ ಊಟ, ಫೋಟೋ ಶೂಟ್ ವ್ಯವಸ್ಥೆ!
Viral News: ಮದುವೆ ಸಮಾರಂಭಕ್ಕೆ ಬಿರಿಯಾನಿ, ಚಿಕನ್ ಫ್ರೈ ಹೀಗೆ ನೆಚ್ಚಿನ ಖಾದ್ಯಗಳ ಸಿದ್ದತೆ ಮಾಡಲಾಗಿತ್ತು. ವರನಾದ ಕುಟ್ಟನ್ ಎಂಬ ನಾಯಿ ರೇಷ್ಮೆ ಬಟ್ಟೆ ತೊಟ್ಟಿದ್ದರೆ, ವಧುವಾಗಿದ್ದ ಜಾನ್ವಿ ಎಂಬ ನಾಯಿ ಮರಿಗೆ ರೇಷ್ಮೆ ಫ್ರಾಕ್ ತೊಡಿಸಲಾಗಿತ್ತು.
ಸಾಮಾನ್ಯವಾಗಿ ಕುತೂಹಲ ಕೆರಳಿಸುವ ಸುದ್ದಿಗಳು ಕೆಲವು ಬಾರಿ ಆಶ್ಚರ್ಯವನ್ನುಂಟು ಮಾಡುತ್ತವೆ. ಅಂತಹುದೇ ಒಂದು ಸುದ್ದಿ ಇದೀಗ ಫುಲ್ ವೈರಲ್ ಆಗಿದೆ. ಕೇರಳದಲ್ಲಿ ನಾಯಿ ಮರಿಗಳಿಗೆ ಸಾಂಪ್ರದಾಯಿಕವಾಗಿ ವಿವಾಹ ಮಾಡಿಸಲಾಗಿದೆ. ಒಂದೂವರೆ ವರ್ಷದ ಹೆಣ್ಣು ನಾಯಿ ಮರಿ ಮತ್ತು ಎರಡು ವರ್ಷದ ಗಂಡು ನಾಯಿ ಮರಿಗೆ ಸೋಮವಾರ ಮದುವೆ ನಡೆದಿದೆ. ಎರಡೂ ನಾಯಿಗಳು ಬೀಗಲ್ ತಳಿಗೆ ಸೇರಿದವು ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ವಾಡಾನಪಳ್ಳಿ ಪೊಯ್ಯರದ ಶೆಲ್ಲಿ ಮತ್ತು ನಿಶಾ ದಂಪತಿ ಮನೆಯಲ್ಲಿ ವಾಸವಿದ್ದ ಕುಟ್ಟನ್ ಹೆಸರಿನ ನಾಯಿಗೆ ಮದುವೆ ಮಾಡಲಾಗಿದೆ. ಶೆಲ್ಲಿ ಮತ್ತು ನಿಶಾ ಮನೆಯಲ್ಲಿ ಸಾಕಿದ್ದ ಕುಟ್ಟನ್ ಎಂಬ ಹೆಸರಿನ ನಾಯಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ. ಪುನ್ನಯೂರ್ ಕುಳಂನ ಶ್ವಾನ ತರಬೇತುದಾರ ಕನಕಚ್ಚೇರಿ ಸುಬೀಶ್ ಭಾಸ್ಕರ್ ಅವರ ಮನೆಯಿಂದ ಜಾನ್ವಿ ಎಂಬ ಹೆಣ್ಣು ನಾಯಿ ಮರಿಯನ್ನು ಮನೆಗೆ ತಂದಿದ್ದಾರೆ.
ಒಂದು ವರ್ಷದ ಸುದೀರ್ಘ ಹುಡುಕಾಟದ ನಂತರ ಕುಟ್ಟನ್ಗೆ ಸೂಕ್ತವಾಗಿ ಹೊಂದಾಣಿಕೆಯಾಗುವ ಹೆಣ್ಣು ನಾಯಿ ಮರಿಯನ್ನು ಹುಡುಕಿ ಮದುವೆ ಮಾಡಿಸಲಾಗಿದೆ. ಈ ನಾಯಿ ಮರಿಗಳು ಒಂದೇ ಥರಹದ ಆಕಾರ ಮತ್ತು ಸಾಮ್ಯತೆಗಳನ್ನು ಹೊಂದಿವೆ.
ಮದುವೆ ತಯಾರಿಗಾಗಿ ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಫೋಟೋ ಶೂಟ್ಗಾಗಿ ಸ್ಟುಡಿಯೋಕ್ಕೆ ಕರೆ ನೀಡಿದ್ದೆ. ಹೊಸದಾಗಿ ಮದುವೆಯಾದ ಕುಟ್ಟನ್ ಮತ್ತು ಜಾನ್ವಿ ನಾಯಿ ಮರಿಗಳಿಗೆ ಬೆಡ್ ರೂಮ್ ವ್ಯವಸ್ಥೆ ಮಾಡಲಾಗಿತ್ತು ಎಂದು ಮನೆಯ ಮಾಲೀಕ ಶೆಲ್ಲಿ ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮದುವೆ ಸಮಾರಂಭಕ್ಕೆ ಬಿರಿಯಾನಿ, ಚಿಕನ್ ಫ್ರೈ ಹೀಗೆ ನೆಚ್ಚಿನ ಖಾದ್ಯಗಳನ್ನು ಸಿದ್ದತೆ ಮಾಡಲಾಗಿತ್ತು. ವರನಾದ ಕುಟ್ಟನ್ ಎಂಬ ನಾಯಿ ರೇಷ್ಮೆ ಬಟ್ಟೆ ತೊಟ್ಟಿದ್ದರೆ, ಮದು ಮಗಳಾಗಿದ್ದ ಜಾನ್ವಿ ಎಂಬ ನಾಯಿ ಮರಿಗೆ ರೇಷ್ಮೆ ಫ್ರಾಕ್ ತೊಡಿಸಲಾಗಿತ್ತು. ಹಲವಾರು ವಿದೇಶಿ ತಳಿಯ ನಾಯಿ ಮರಿಗಳು ಅತಿಥಿಗಳಾಗಿ ಆಗಮಿಸಿದ್ದವು. ಇದೊಂದು ಸಣ್ಣ ಕಾರ್ಯಕ್ರಮವನ್ನಾಗಿ ಮಾಡಲು ಬಯಸಿದ್ದೆವು ಎಂದು ಮನೆಯ ಯಜಮಾನ ಶೆಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral News: ಈ ಮುಖ ಮೂತಿಗಾಗಿ ಈಕೆ ಖರ್ಚು ಮಾಡಿದ್ದು ಬರೋಬ್ಬರಿ 24 ಲಕ್ಷ ರೂ..!
(Traditional wedding for dogs in kerala viral news)
Published On - 1:31 pm, Tue, 21 September 21