ಉದ್ಯಮಿಯ ಮನೆಯೆದುರು ಬಂದು ಹೆಡೆ ಎತ್ತಿ ನಿಂತ 12 ಅಡಿ ಉದ್ದದ ಕಾಳಿಂಗ ಸರ್ಪ; ಶುಭದಿನವಂತೆ !

TV9 Digital Desk

| Edited By: Lakshmi Hegde

Updated on: Sep 21, 2021 | 6:23 PM

ಶ್ರೀಧರ್​ ವೆಂಬು ಫೋಟೋಕ್ಕೆ 6 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಬಂದಿದ್ದರೆ, 609 ಬಾರಿ ರೀಟ್ವೀಟ್ ಆಗಿದೆ. ನೆಟ್ಟಿಗರಂತೂ ವಿಧವಿಧದ ಕಾಮೆಂಟ್​ಗಳನ್ನು ಹಾಕಿದ್ದಾರೆ. ಅನೇಕರು ಹಾವನ್ನು ನೋಡಿ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ.

ಉದ್ಯಮಿಯ ಮನೆಯೆದುರು ಬಂದು ಹೆಡೆ ಎತ್ತಿ ನಿಂತ 12 ಅಡಿ ಉದ್ದದ ಕಾಳಿಂಗ ಸರ್ಪ; ಶುಭದಿನವಂತೆ !
ಕಾಳಿಂಗಸರ್ಪ

ಕಾಳಿಂಗ ಸರ್ಪವನ್ನು ನೋಡಿದರೆ ಎಂಥವರಿಗಾದರೂ ಭಯವಾಗುತ್ತದೆ.  ಅಂಥದ್ದರಲ್ಲಿ ಬರೋಬ್ಬರಿ 12 ಅಡಿ ಉದ್ದದ ಕಾಳಿಂಗಸರ್ಪ ಮನೆಯಂಗಳಕ್ಕೆ ಬಂದು ಹೆಡೆ ಬಿಚ್ಚಿ ನಿಂತರೆ ಏನಾಗಬೇಡ? ಇಂಥದ್ದೊಂದು ಎದೆನಡುಗುವ ಕ್ಷಣವನ್ನು ಎದುರಿಸಿದವರು ಜೋಹೋ ಕಾರ್ಪೋರೇಶನ್​​ನ ಸಿಇಒ, ಉದ್ಯಮಿ ಶ್ರೀಧರ್​ ವೆಂಬು. ಅವರು ಈ ಬಗ್ಗೆ ಟ್ವಿಟರ್​ನಲ್ಲಿ ಎರಡು ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಹಾಗೇ, ತಾವು ಇಷ್ಟು ದೊಡ್ಡ ಹಾವನ್ನು ಭೇಟಿ ಮಾಡಿದ ದಿನವನ್ನು ಮಂಗಳಕರವಾದ ದಿನ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ.  

ಶ್ರೀಧರ್​ ವೆಂಬು ಅವರು ಸದ್ಯ ತಮಿಳುನಾಡಿನ ದಕ್ಷಿಣದಲ್ಲಿರುವ ತೆಂಕಸಿ ಸಮೀಪದ ಮತ್ತಾಲಂಪರೈ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಾರೆ. ಇಲ್ಲಿನ ಮನೆಯ ಬಳಿ 12 ಅಡಿ ಉದ್ದದ, ಕಪ್ಪಾದ ಕಾಳಿಂಗಸರ್ಪ ಬಂದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಕಾಳಿಂಗ ಸರ್ಪದ ಫೋಟೋ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಹಿಡಿದುಕೊಂಡಿರುವ ಫೋಟೋವನ್ನು ಶೇರ್​ ಮಾಡಿರುವ ಶ್ರೀಧರ್​, ಅಪರೂಪದ, 12 ಅಡಿ ಉದ್ದದ ಕಾಳಿಂಗಸರ್ಪ ಇಂದು ನಮ್ಮನ್ನು ಭೇಟಿಯಾಗಿತ್ತು. ಬಳಿಕ ಸ್ಥಳೀಯ ಅರಣ್ಯ ಇಲಾಖೆ ರೇಂಜರ್​ಗಳು ಬಂದು ಅದನ್ನು ಹಿಡಿದಿದ್ದಾರೆ. ಹಾಗೇ, ಹತ್ತಿರದ ಗುಡ್ಡಪ್ರದೇಶಕ್ಕೆ ಬಿಟ್ಟಿದ್ದಾರೆ. ನಾನೂ ಧೈರ್ಯದಿಂದ ಅದನ್ನು ಮುಟ್ಟಿದ್ದೇನೆ. ನಿಜಕ್ಕೂ ಹಾವು ಬಂದ ದಿನ ಒಂದು ಮಂಗಳಕರ ದಿನ ಎಂದು ಹೇಳಿದ್ದಾರೆ.

ಶ್ರೀಧರ್​ ವೆಂಬು ಫೋಟೋಕ್ಕೆ 6 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಬಂದಿದ್ದರೆ, 609 ಬಾರಿ ರೀಟ್ವೀಟ್ ಆಗಿದೆ. ನೆಟ್ಟಿಗರಂತೂ ವಿಧವಿಧದ ಕಾಮೆಂಟ್​ಗಳನ್ನು ಹಾಕಿದ್ದಾರೆ. ಅನೇಕರು ಹಾವನ್ನು ನೋಡಿ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ. ಅದೆಂತಾ ಅದ್ಭುತ ಹಾವು ಎಂದು ಉದ್ಘಾರರೂಪಕವಾಗಿ ಕಾಮೆಂಟ್​ಗಳನ್ನು ಬರೆದಿದ್ದಲ್ಲದೆ, ಪೋಥಿಗೈ ಗುಡ್ಡಗಳಲ್ಲಿ ಕಾಳಿಂಗ ಸರ್ಪವೂ ಇದೆ ಎಂಬುದು ಗೊತ್ತಿರಲಿಲ್ಲ ಎಂದಿದ್ದಾರೆ. ಈ ಹಾವು ಭಯಂಕರ ರೂಪದಲ್ಲಿದೆ ಎಂದಿದ್ದಲ್ಲೆ, ಹೀಗೆ ಏಕಾಏಕಿ ಎದುರಾದರೆ ಯಾರಿಗಾದರೂ ಗಾಬರಿಯಾಗದೆ ಇರದು ಎಂದೂ ಬರೆದಿದ್ದಾರೆ. ಇದನ್ನೂ ಓದಿ: ಜಾಹೀರಾತಿಗೆ ಮೂರು ಕೋಟಿ ರೂ. ಮಾಸ್ಕ್ ಧರಿಸಿದ್ದ ಊರ್ವಶಿ ರೌಟೆಲಾ ತಮಿಳು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾಳೆ!

ದೆಹಲಿಯಲ್ಲಿ ಹೊಸ ಮದ್ಯ ನೀತಿ ಅನುಷ್ಠಾನಕ್ಕೆ ಸಿದ್ಧತೆ; ನಗರದಾದ್ಯಂತ ಮದ್ಯದಂಗಡಿಗಳ ಕಪಾಟುಗಳು ಖಾಲಿ ಖಾಲಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada