350 ಜನರನ್ನು ಆಹ್ವಾನಿಸಿ ನಾಯಿಯ ಹುಟ್ಟುಹಬ್ಬ ಮಾಡಿದ ಧನಬಾದ್ನ ದಂಪತಿ
Viral Video : ಈ ನಾಯಿಯ ಹುಟ್ಟುಹಬ್ಬಕ್ಕೆ ಆಮಂತ್ರಣ ಪತ್ರಿಕೆ ಮುದ್ರಿಸಲಾಯಿತು. ರೂ. 4,500 ವೆಚ್ಚದಲ್ಲಿ ಸೂಟ್ ಖರೀದಿಸಲಾಯಿತು. ಬಂಧುಗಳು ಚಿನ್ನದ ಲಾಕೆಟ್ ಉಡುಗೊರೆ ಕೊಟ್ಟರು.
Viral Video : ಈಗೀಗ ಸಾಕುಪ್ರಾಣಿಗಳೆಂದರೆ ಸ್ವಂತ ಮಕ್ಕಳಂತೆಯೇ ನೋಡಿಕೊಳ್ಳುತ್ತಿರುವವರ ಟ್ರೆಂಡ್ ಜಾಸ್ತಿಯಾಗುತ್ತಿದೆ. ಇದು ಪೋಷಣೆಗೆ ಮಾತ್ರ ಸೀಮಿತವಾಗದೆ ಸಂಭ್ರಮ, ಆಚರಣೆಗೂ ವಿಸ್ತರಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಾಕುಪ್ರಾಣಿಗಳಿಗೆಂದೇ ಪ್ರತ್ಯೇಕ ಅಕೌಂಟ್ ಮಾಡಿ ಅವುಗಳ ಜೀವನಶೈಲಿಯ ಬಗ್ಗೆ ಅಪ್ಡೇಟ್ ಮಾಡುವಲ್ಲಿ ಜನ ನಿರತರಾಗಿರುತ್ತಾರೆ. ಇತ್ತೀಚೆಗೆ ಗುರಗ್ರಾಂನಲ್ಲಿ ನಾಯಿಗಳ ಮದುವೆ ಮಾಡಿದ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದಿರಿ. ಇದೀಗ ಈ ದಂಪತಿ ತಮ್ಮ ಸಾಕುನಾಯಿಯ ಹುಟ್ಟುಹಬ್ಬಕ್ಕೆ 350 ಜನರನ್ನು ಆಹ್ವಾನಿಸಿ ದೊಡ್ಡದಾದ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
धनबाद में एक पालतू कुत्ते की जन्मदिन पार्टी को देख लोग बोले ‘क़िस्मत सहो तो ऐसी’ pic.twitter.com/yRc9iqgQFo
ಇದನ್ನೂ ಓದಿ— Shubhankar Mishra (@shubhankrmishra) December 1, 2022
ಲೋಯಾಬಾದ್ನಲ್ಲಿ ವಾಸವಾಗಿರುವ ಈ ಕುಟುಂಬಕ್ಕೆ ಸಾಕುನಾಯಿ ಅಕ್ಸರ್ ಎಂದರೆ ಪ್ರಾಣ. ಇದರ ಹುಟ್ಟುಹಬ್ಬವನ್ನು ವೈಭದಿಂದ ಆಚರಿಸಬೇಕೆಂದು ಇವರು ಯೋಚಿಸಿ ಹುಟ್ಟುಹಬ್ಬಕ್ಕಾಗಿ ಆಮಂತ್ರಣ ಪತ್ರಿಕೆಯನ್ನೂ ಪ್ರಿಂಟ್ ಮಾಡಿಸಿದರು. ರೂ. 4,500 ಕೊಟ್ಟು ನಾಯಿಗೆ ಸೂಟ್ ಅನ್ನೂ ಖರೀದಿಸಿದರು. ದೊಡ್ಡದಾದ ಕೇಕ್ ಮತ್ತು 350 ಅತಿಥಿಗಳೊಂದಿಗೆ ಅಕ್ಸರ್ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಬಂಗಾಳದ ಶ್ರೀಪುರದಿಂದ ಬಂಧು ಬಳಗದವರು ಆಗಮನಿಸಿದ್ದರು. ನಾಯಿಗೆ ಚಿನ್ನದ ಪದಕವನ್ನು ಉಡುಗೊರೆಯಾಗಿ ಕೊಟ್ಟರು. ಬಂದವರೆಲ್ಲ ಒಂದಿಲ್ಲಾ ಒಂದು ಉಡುಗೊರೆ ನೀಡಿ ಸಂತೋಷಪಟ್ಟರು.
ಇದನ್ನೂ ಓದಿ : ನಾಯಿಯ ಹುಟ್ಟುಹಬ್ಬ ಆಚರಿಸಿದ ಮಕ್ಕಳು; ವೈರಲ್ ವಿಡಿಯೋ
ಈ ನಾಯಿಯ ಪೋಷಕರು ಸುಮಿತ್ರಾ ಕುಮಾರಿ ಮತ್ತು ಸಂದೀಪ್ ಕುಮಾರಿ. ಇವು ನಾಯಿಯನ್ನು ಮಗುವಿನಂತೆಯೇ ಪ್ರೀತಿಸುತ್ತಾರೆ. ಅದರೊಂದಿಗೆ ಊಟ ಮಾಡುತ್ತಾರೆ ಮತ್ತು ಮಲಗುತ್ತಾರೆ ಕೂಡ. ‘ನಾನು ಪಂಜಾಬ್ನಲ್ಲಿ ವಾಸವಾಗಿದ್ದಾಗ ಅಲ್ಲಿಯ ಜನರು ನಾಯಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ಸ್ವತಃ ಗಮನಿಸುತ್ತಿದ್ದೆ. ಅವರು ನಡೆಸಿಕೊಳ್ಳುವ ರೀತಿ ಬೇಸರ ತರಿಸುವಂತಿತ್ತು. ಈ ಊರಿಗೆ ಬಂದ ಮೇಲೆ ಬೀದಿಬದಿಯಲ್ಲಿದ್ದ 20 ದಿನದ ನಾಯಿಮರಿಯನ್ನು ತಂದು ಸಾಕಿದೆವು. ಈಗ ಇದರ ಹುಟ್ಟುಹಬ್ಬವನ್ನು ಆಚರಿಸಿ ಖುಷಿಪಟ್ಟೆವು ಎಂದಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 8:59 am, Sat, 3 December 22