ಕ್ಯಾಟ್​ವಾಕ್​! ಇಸ್ತಾನ್​ಬುಲ್​ ಫ್ಯಾಷನ್​ ಷೋ ಹಳೆಯ ವಿಡಿಯೋ ವೈರಲ್

Catwalk : ನನ್ನ ಹೆಸರಲ್ಲಿ ಇವರೆಂಥ ಕ್ಯಾಟ್​ವಾಕ್ ಮಾಡುವುದು, ಇವರಷ್ಟೇ ಏಕೆ ಕಿರೀಟ ಧರಿಸುವುದು? ಇಷ್ಟು ವರ್ಷಗಳ ಕಾಲ ನೋಡಿ ನೋಡಿ ಸಾಕಾಗಿ ನಾನೇ ಈಗ ರ್ಯಾಂಪ್​ವಾಕ್ ಮಾಡಿಬಿಟ್ಟೆ! ನೀವಾದರೂ ನನಗೆ ಕಿರೀಟ ತೊಡಿಸುತ್ತೀರಾ?

ಕ್ಯಾಟ್​ವಾಕ್​! ಇಸ್ತಾನ್​ಬುಲ್​ ಫ್ಯಾಷನ್​ ಷೋ ಹಳೆಯ ವಿಡಿಯೋ ವೈರಲ್
ನೀವಷ್ಟೇನಾ? ನಾನೂ...
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 03, 2022 | 9:49 AM

Viral Video : ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಅದರದೇ ಆದ ಸವಾಲು, ಶ್ರಮ ಇದ್ದೇ ಇರುತ್ತದೆ. ಅದರ ಹಿಂದಿನ ಕಷ್ಟಸುಖ ಅವರವರಿಗೇ ಗೊತ್ತು. ಕ್ಯಾಟ್​ವಾಕ್​ ಅನ್ನು ಪರಿಪೂರ್ಣವಾಗಿ ಸಾಧಿಸಿಕೊಳ್ಳಲು ಮಾಡೆಲ್​ಗಳು ಅನೇಕ ವರ್ಷಗಳನ್ನೇ ತೆಗೆದುಕೊಳ್ಳುತ್ತಾರೆ. ಸಾಕಷ್ಟು ಪ್ರಯತ್ನಗಳು ನಡೆದ ನಂತರ ಅವರಿಗೆ ಅವಕಾಶಗಳು ಸಿಗುತ್ತಾ ಹೋಗುತ್ತವೆ. ಇದು 2018ರಲ್ಲಿ ಇಸ್ತಾನ್​ಬುಲ್​ನಲ್ಲಿ ನಡೆದ ಫ್ಯಾಷನ್​ ಷೋ ಒಂದರ ಹಳೆಯ ವಿಡಿಯೋ. ಇದೀಗ ಮತ್ತೆ ವೈರಲ್ ಆಗುತ್ತಿದೆ. ಷೋ ನಡೆಯುತ್ತಿರುವಾಗ ಬೆಕ್ಕೊಂದು ರ್ಯಾಂಪ್​ವಾಕ್ ಮಾಡಿಬಿಟ್ಟಿದೆ! ಎಷ್ಟೊಂದು ಕಷ್ಟಪಡುತ್ತಾರಪ್ಪ ಈ ಜನ ನನ್ನಂತೆ ನಡೆಯಲು ಎಂದು…

ಜಾಣ ಬೆಕ್ಕು ಇದು. ರ್ಯಾಂಪ್​ ಮೇಲೆ ಯಾರಿಗೂ ತೊಂದರೆ ಮಾಡದೆ ಸಹಜವಾಗಿ ನಡೆದಿದೆ. ಎಲ್ಲ ಮಾಡೆಲ್​ಗಳ ಬೆಕ್ಕಿನ ನಡಿಗೆಗಿಂತ ನಿಜವಾದ ಬೆಕ್ಕಿನ ನಡಿಗೆಯನ್ನೇ ಜನ ಕುತೂಹಲದಿಂದ ನೋಡಿದ್ದಾರೆ. ಕ್ಯಾಟ್ಸ್​ ವಿತ್ ಜಾಬ್ಸ್​ ಎಂಬ ಟ್ವಿಟರ್ ಖಾತೆಯು ಈ ವಿಡಿಯೋ ಅನ್ನು ಮರುಹಂಚಿಕೊಂಡಿದೆ.

ಹಳೆಯ ವಿಡಿಯೋ 5 ಮಿಲಿಯನ್​ ವೀಕ್ಷಕರನ್ನು ಸೆಳೆದಿತ್ತು. ಎರಡು ಲಕ್ಷ ಜನರು ಇದನ್ನು ಇಷ್ಟಪಟ್ಟಿದ್ದರು. ಈ ವಿಡಿಯೋ ಅನ್ನು 7.9 ಮಿಲಿಯನ್ ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ಓಹ್ ದೇವರೇ, ಕ್ಯಾಟ್​ ಆನ್​ ದಿ ಕ್ಯಾಟ್​ವಾಕ್​ ಎಂದಿದ್ದಾರೆ.

ಇದನ್ನೂ ನೋಡಿ : ಮೇಆಂವೂ? ಲಗೇಜಿನೊಳಗೆ ಬೆಕ್ಕು; ನ್ಯೂಯಾರ್ಕ್​ ಏರ್​ಪೋರ್ಟ್​ನಲ್ಲಿ ನಡೆದ ಅಚ್ಚರಿಯ ಘಟನೆ

ಸೂಪರ್​! ಇದು ನಿಜಕ್ಕೂ ಬಹಳ ತಮಾಷೆಯಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಮಾಡೆಲ್​ಗಳು ಇನ್ನೂ ಸರಿಯಾಗಿ ಕ್ಯಾಟ್​ವಾಕ್ ಮಾಡಲು ಕಲಿತಿಲ್ಲ ಅದಕ್ಕೇ ರ್ಯಾಂಪ್​ ಮೇಲೆ ಬಂದು ಕಲಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನೋಡಿ ರಾಜಕುಮಾರಿಯಂತೆ ಬಳಕುವುದು ಹೀಗೆ ಎನ್ನುತ್ತಿದೆ ಈ ಬೆಕ್ಕು ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅನಿಸಿಕೆ ಏನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ