Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೇನುಗೂಡನ್ನು ಕಬಳಿಸುವ ಈ ಹಕ್ಕಿಯ ವಿಡಿಯೋ ವೈರಲ್

Honey Buzzard : ಈ ಹಕ್ಕಿ ಜೇನುಗೂಡಿನ ಮೇಲೆ ದಾಳಿ ಮಾಡಿ ಜೇನುತುಪ್ಪ ತಿನ್ನುತ್ತದೆ ಎನ್ನುವ ಅಂದಾಜು ಇರಲಿಲ್ಲ ಎಂದು ನೆಟ್ಟಿಗರೆಲ್ಲ ಅಚ್ಚರಿಯಿಂದ ಈ ವಿಡಿಯೋ ನೋಡುತ್ತಿದ್ದಾರೆ.

ಜೇನುಗೂಡನ್ನು ಕಬಳಿಸುವ ಈ ಹಕ್ಕಿಯ ವಿಡಿಯೋ ವೈರಲ್
ಹನಿ ಬಝರ್ಡ್ ಜೇನುಗೂಡಿನ ಮೇಲೆ ದಾಳಿ ಮಾಡಿ ತುಪ್ಪ ತಿನ್ನುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 02, 2022 | 6:16 PM

Viral Video : ಈ ಹಕ್ಕಿ ಜೇನುಗೂಡಿನಲ್ಲಿರುವ ತುಪ್ಪವನ್ನು ತಿನ್ನಲು ಹೋಗಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ರೆಗ್​ ಸ್ಯಾಡ್ಲರ್​ ಎಂಬ ಖಾತೆದಾರರು ಟ್ವೀಟ್ ಮಾಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಹೀಗೆ ಹಕ್ಕಿಯೂ ಜೇನುಗೂಡಿನ ಮೇಲೆ ದಾಳಿ ಮಾಡಬಹುದೆಂಬ ಅಂದಾಜೇ ಇರಲಿಲ್ಲ ಎಂದು ನೆಟ್ಟಿಗರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಪಕ್ಷಿಗಳ ಆಹಾರ ಎಲ್ಲರಿಗೂ ಗೊತ್ತಿರುವಂಥದ್ದೇ.

ನೂರಾರು ಜೇನುನೊಣಗಳು ಹನಿ ಬಝರ್ಡ್​ ಎನ್ನುವ ಈ ಹಕ್ಕಿಯ ಸುತ್ತಲೂ ಹಾರಾಡುತ್ತಿದ್ದರೂ ಕಚ್ಚಲು ಪ್ರಯತ್ನಿಸುತ್ತಿದ್ದರೂ ಹಕ್ಕಿ ಮಾತ್ರ ಜೇನು ತಿನ್ನುವ ಧ್ಯಾನದಲ್ಲಿ ಮುಳುಗಿದೆ. ರಾಯಲ್ ಸೊಸೈಟಿ ಫಾರ್ ದಿ ಪ್ರೊಟೆಕ್ಷನ್ ಆಫ್ ಬರ್ಡ್ಸ್ ಪ್ರಕಾರ, ಈ ಹನಿ ಬಝಾರ್ಡ್ ಪಕ್ಷಿಯು ಬೇಟೆಯಾಡುವ ದೊಡ್ಡ ಗಾತ್ರದ ಹಕ್ಕಿ. ಅಗಲವಾದ ರೆಕ್ಕೆಗಳನ್ನು ಮತ್ತು ಉದ್ದವಾದ ಬಾಲವನ್ನು ಬಲಿಷ್ಠ ಕಾಲುಗಳನ್ನು ಇದು ಹೊಂದಿರುತ್ತದೆ. ಜೇನುಗೂಡು ಮತ್ತು ಕಣಜಗಳ ಗೂಡುಗಲ ಮೇಲೆ ಇದು ದಾಳಿ ಮಾಡುತ್ತದೆ.

ಈ ವಿಡಿಯೋ ನೋಡಿದ ನೆಟ್ಟಿಗರು, ಮೊದಲ ಸಲ ಪಕ್ಷಿಯೊಂದು ಹೀಗೆ ಜೇನು ತಿನ್ನುತ್ತಿರುವುದನ್ನು ನೋಡುತ್ತಿದ್ದೇನೆ ಎಂದಿದ್ದಾರೆ. ಹಕ್ಕಿ ಕೂಡ ಜೇನು ತಿನ್ನುತ್ತಿದೆಯೇ? ಹಾಗಿದ್ದರೆ ಇದರ ಊಟ ಜೇನುತುಪ್ಪವೇ ಇಡೀ ದಿನ ಎಂದಿದ್ದಾರೆ ಮತ್ತೊಬ್ಬರು. ಇದು ವಲಸೆ ಹಕ್ಕಿ, ಬೇಸಿಗೆಯಲ್ಲಿ ಸೈಬೀರಿಯಾ ಜಪಾನ್​ಗೆ ಸಂತಾನೋತ್ಪತ್ತಿಗಾಗಿ ಹಾರಿ ಹೋಗುತ್ತದೆ ಎಂದಿದ್ದಾರೆ ಮಗದೊಬ್ಬರು. ನೋಡಲು ಬಹಳ ಕ್ರೂರ ಅನ್ನಿಸುತ್ತದೆ, ಆದರೆ ಪ್ರಕೃತಿಯ ಭಾಗವೇ ಅಲ್ಲವೆ ಇದೂ ಕೂಡ ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:15 pm, Fri, 2 December 22

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ