ಅತಿಥಿ ದೇವೋ ಭವ; ‘ನೀವೂ ಉಂಡು ಹಾಸ್ಟೆಲ್​ ಸ್ನೇಹಿತರಿಗೂ ಊಟ ತೆಗೆದುಕೊಂಡು ಹೋಗಿ ಎಂದ ವರ

Gatecrashing : ಕ್ಷಮಿಸಿ, ಹಸಿವಾಗಿತ್ತು ಉಚಿತವಾಗಿ ಉಣ್ಣಲು ನಿಮ್ಮ ಮದುವೆಗೆ ಬಂದೆ ಎಂದು ಈ ವಿದ್ಯಾರ್ಥಿ ಹೇಳಿದಾಗ ವರನಾದವನು ಅವನೊಂದಿಗೆ ಆಪ್ತವಾಗಿ ಒಡನಾಡಿದ ರೀತಿಯೇ ಅತ್ಯಂತ ಹೃದಯಸ್ಪರ್ಶಿಯಾಗಿದೆ. ನೋಡಿ ವಿಡಿಯೋ.

ಅತಿಥಿ ದೇವೋ ಭವ; ‘ನೀವೂ ಉಂಡು ಹಾಸ್ಟೆಲ್​ ಸ್ನೇಹಿತರಿಗೂ ಊಟ ತೆಗೆದುಕೊಂಡು ಹೋಗಿ ಎಂದ ವರ
ಕ್ಷಮಿಸಿ ಆಹ್ವಾನಿಲ್ಲದೆ ಉಚಿತ ಊಟಕ್ಕಾಗಿ ಬಂದೆ ಎನ್ನುತ್ತಿರುವ ಹಾಸ್ಟೆಲ್ ವಿದ್ಯಾರ್ಥಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 02, 2022 | 4:30 PM

Viral Video : ಆಹ್ವಾನವಿಲ್ಲದೆ ಮದುವೆಯ ಊಟಕ್ಕೆ ಬಂದ ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ ವಿಧಿಸಿದ ವಿಡಿಯೋ ವೈರಲ್ ಆಗಿದ್ದನ್ನು ಈಗಷ್ಟೇ ನೋಡಿದಿರಿ. ಆದರೆ ಇನ್ನೊಂದು ಪ್ರಕರಣದಲ್ಲಿ, ಇದಕ್ಕೆ ವಿರುದ್ಧವಾದ ಅಂದರೆ ಹೃದಯಕ್ಕೆ ಆಪ್ತವಾಗುವಂಥ ಘಟನೆ ಜರುಗಿದೆ. ಹಾಸ್ಟೆಲ್​ನಲ್ಲಿ ವಾಸಿಸುತ್ತಿರುವ ಹುಡುಗನೊಬ್ಬ ಈ ಮದುವೆಗೆ ಬಂದು ವರನೊಂದಿಗೆ ಮಾತನಾಡುತ್ತ, ‘ಕ್ಷಮಿಸಿ ನಿಮ್ಮ ಹೆಸರು ನನಗೆ ಗೊತ್ತಿಲ್ಲ. ನಾನು ಹಾಸ್ಟೆಲ್​ನಲ್ಲಿ ವಾಸಿಸುತ್ತಿದ್ದೇನೆ. ನೀವು ಆಹ್ವಾನಿಸದಿದ್ದರೂ ಉಚಿತವಾಗಿ ಊಟ ಮಾಡಲು ಬಂದಿದ್ದೇನೆ’ ಎನ್ನುತ್ತಾನೆ. ಪ್ರತ್ಯುತ್ತರವಾಗಿ ವರ, ‘ನೀವೂ ಊಟ ಮಾಡಿ, ಹಾಸ್ಟೆಲ್​ನಲ್ಲಿರುವ ನಿಮ್ಮ ಸ್ನೇಹಿತರಿಗೂ ಊಟವನ್ನು ತೆಗೆದುಕೊಂಡು ಹೋಗಿ’ ಎನ್ನುತ್ತಾನೆ. ಐಎಎಸ್​ ಅಧಿಕಾರಿ ಅವನೀಶ್ ಶರಣ್​ ಈ ವಿಡಿಯೋ ಟ್ವೀಟ್ ಮಾಡಿದ್ದು ಇದೀಗ ವೈರಲ್ ಆಗಿದೆ.

This is how it should be.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದು ಯಾವ ರಾಜ್ಯದ ವಿಡಿಯೋ ಎಂದು ತಿಳಿದುಬಂದಿಲ್ಲ. ಆದರೆ ಈ ಹುಡುಗ ಹಿಂದಿಯಲ್ಲಿ ಮಾತನಾಡುತ್ತಾನೆ. ತನಗೆ ಹಸಿವಾಗಿತ್ತು ಹಾಗಾಗಿ ಇಲ್ಲಿಗೆ ಬಂದೆ ಎಂದು ಹೇಳುತ್ತಾನೆ. ನನ್ನ ಈ ನಡೆವಳಿಕೆಗೆ ಕ್ಷಮಿಸಿ ಎಂದೂ ಕೇಳುತ್ತಾನೆ. ಆದರೆ ವರನಾದವನು ಅಷ್ಟೇ ವಿನಯದಿಂದ ನಿಮ್ಮ ಹಾಸ್ಟೆಲ್​ ಸ್ನೇಹಿತರಿಗೂ ಊಟವನ್ನು ಪ್ಯಾಕ್ ಮಾಡಿಕೊಂಡು ಹೋಗಿ, ಅದರಲ್ಲೇನಿದೆ ಎನ್ನುತ್ತಾನೆ. ಈ ವಿಡಿಯೋ ಅತ್ಯಂತ ಹೃದಯಸ್ಪರ್ಶಿಯಾಗಿದೆ ಎನ್ನುತ್ತಿರುವ ನೆಟ್ಟಿಗರು ಹುಡುಗನ ಪ್ರಾಮಾಣಿಕತೆ ಮತ್ತು ವರನ ಆತಿಥ್ಯವನ್ನು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ : ‘ನನ್ನ ಮದುವೆಯಾಗುತ್ತೀಯಾ?’ ಆತ ಆಕೆಯನ್ನು ಕೇಳುವ ಮೊದಲೇ ಉಂಗುರ ನೀರುಪಾಲು!?

ಇದು ನಮ್ಮ ಭಾರತವೆಂದರೆ ಎಂದು ಹೆಮ್ಮೆ ಪಡುತ್ತಿದ್ದಾರೆ ಹಲವರು. ಅದಕ್ಕಾಗಿಯೇ ನಾನು ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ ಎನ್ನುತ್ತಿದ್ದಾರೆ ಅನೇಕರು. ಈತನಕ ಈ ವಿಡಿಯೋ ಅನ್ನು 7 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನ ಮೆಚ್ಚಿದ್ದಾರೆ.

ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ ನೀಡಿದ ವಿಡಿಯೋ ಅನ್ನು ಈ ವಿಡಿಯೋ ಥ್ರೆಡ್​ಗೆ ಟ್ವೀಟ್​ ಮಾಡಿದ ನೆಟ್ಟಿಗರು ಈ ಎರಡೂ ನಡೆವಳಿಕೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ.

ಏನೇ ಆಗಲಿ ಹಸಿವು ಎಂದು ಬಂದವರನ್ನು ಎಂದೂ ಅವಮಾನಿಸಬಾರದು. ಹಾಗೆಯೇ ಅಪರಿಚಿತರಾದರೂ ನಿಮ್ಮನ್ನು ಆದರದಿಂದ ಕಂಡವರನ್ನು ಎಂದೂ ಮರೆಯಬಾರದು.

ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:20 pm, Fri, 2 December 22

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?