‘ನನ್ನ ಮದುವೆಯಾಗುತ್ತೀಯಾ?’ ಆತ ಆಕೆಯನ್ನು ಕೇಳುವ ಮೊದಲೇ ಉಂಗುರ ನೀರುಪಾಲು!?

Marriage Ring : ಸಮುದ್ರದ ಮಧ್ಯೆ ಸೂರ್ಯಾಸ್ತದ ವೇಳೆ ತನ್ನ ಗೆಳತಿಗೆ ಮದುವೆ ಪ್ರಸ್ತಾಪ ಮಾಡಲೆಂದು ಈತ ಹೀಗೆ ಮೊಣಕಾಲೂರಿದ. ಕಿಸೆಯಿಂದ ಉಂಗುರ ತೆಗೆಯಲು ಹೋದ, ಉಂಗುರ ಸಮುದ್ರ ಪಾಲಾಯಿತು. ವಿಡಿಯೋ ನೋಡಿ ಮುಂದೇನಾಯಿತೆಂದು.

‘ನನ್ನ ಮದುವೆಯಾಗುತ್ತೀಯಾ?’ ಆತ ಆಕೆಯನ್ನು ಕೇಳುವ ಮೊದಲೇ ಉಂಗುರ ನೀರುಪಾಲು!?
ಉಂಗುರ ನೀರಿಗೆ ಬಿತ್ತೋ!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 28, 2022 | 5:37 PM

Viral Video : ನನ್ನನ್ನು ಮದುವೆಯಾಗುತ್ತೀಯಾ? ಮದುವೆಯ ನಿವೇದನೆಯನ್ನು ವಿಶೇಷವಾಗಿ ಮಾಡಿಕೊಳ್ಳಬೇಕು ಎಂದು ಪ್ರತೀ ಹುಡುಗನೂ ಕನಸು ಕಾಣುತ್ತಾನೆ. ಹಾಗೆಯೇ ಹುಡುಗಿಯೂ. ಅದಕ್ಕಾಗಿ ವಿಶೇಷ ಜಾಗಗಳ ಆಯ್ಕೆಗಳನ್ನೇ ಜೋಡಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಎಲ್ಲರ ಕನಸುಗಳು ನನಸಾಗುತ್ತವೆಯಾ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಸಾಗರದ ಮಧ್ಯದಲ್ಲಿ ತನ್ನ ಹುಡುಗಿಗೆ ಮದುವೆ ನಿವೇದನೆ ಮಾಡಬೇಕೆಂದು ಈ ಹುಡುಗ ಕನಸು ಕಂಡ. ಆ ಪ್ರಕಾರ ದೋಣಿಯಲ್ಲಿ ಸಾಗರದ ಮಧ್ಯದವರೆಗೂ ಪ್ರಯಾಣಿಸಿದ. ಇನ್ನೇನು ಕಿಸೆಯೊಳಗಿನ ಉಂಗುರವನ್ನು ಆಕೆಗೆ ತೊಡಸಬೇಕು ಅಷ್ಟರಲ್ಲಿ ಕೈಜಾರಿ ನೀರಿನೊಳಗೆ ಬಿದ್ದುಬಿಟ್ಟಿತು ಆ ಉಂಗುರ! ಮುಂದೆ ಅವ ಏನು ಮಾಡಿದ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಘಟನೆ ಫ್ಲೊರೀಡಾದಲ್ಲಿ ನಡೆದಿದೆ. ಮದುವೆ ಪ್ರಸ್ತಾಪ ಮಾಡಿದ ಹುಡುಗನ ಹೆಸರು ಸ್ಕಾಟ್​ ಕ್ಲೈನ್​, ಹುಡುಗಿಯ ಹೆಸರು ಸುಜಿ ಟಕ್ಕರ್. ಸೂರ್ಯಾಸ್ತದ ಹೊತ್ತಿಗಾಗಿ ಕಾಯ್ದು ತನ್ನ ಗೆಳತಿಗೆ ಮದುವೆ ಪ್ರಸ್ತಾಪ ಮಾಡಬೇಕೆಂದು ಬಹುಆಸೆಯಿಂದ ಕಾಯುತ್ತಿದ್ದ. ಪ್ರಣಯಭಂಗಿಯಲ್ಲಿ ಪರಸ್ಪರ ಕೈಗಳನ್ನು ಹಿಡಿದುಕೊಂಡು ನಿಂತರು. ನಂತರ ಆತ ಮೊಣಕಾಲನ್ನೂರಿ ತನ್ನ ಕಿಸೆಯೊಳಗಿನಿಂದ ಉಂಗುರದ ಬಾಕ್ಸ್​ ತೆಗೆಯುವ ಹೊತ್ತಿಗೆ ಬಾಕ್ಸ್​ ನೀರಿಗೆ ಬಿದ್ದುಬಿಟ್ಟಿತು. ತಕ್ಷಣವೇ ಆತ ಸಮುದ್ರಕ್ಕೆ ಹಾರಿಬಿಟ್ಟ. ಅದಕ್ಕೇ ಅವನು ಆ ಉಂಗುರವನ್ನು ಮರಳಿ ಪಡೆಯಲು ಸಾಧ್ಯವಾಯಿತು! ಗೆಳತಿಗಂತೂ ಜೋರಾದ ನಗು.

‘ಇದು ನೂರಕ್ಕೆ ನೂರರಷ್ಟು ನಿಜ. ನನ್ನ ಅದೃಷ್ಟ. ಇದನ್ನು ಎಂದು ಮರೆಯುವುದಿಲ್ಲ. ಅದೃಷ್ಟಕ್ಕೆ ರಿಂಗ್​ ಬಾಕ್ಸ್​ನೊಳಗಿತ್ತು. ಅಕಸ್ಮಾತ್​ ಬಾಕ್ಸ್​ನಿಂದ ರಿಂಗ್​ ಆಚೆ ಇದ್ದಿದ್ದರೆ ಖಂಡಿತ ಸಿಗುತ್ತಿರಲಿಲ್ಲ. ನಾನು ಭಯಂಕರ ಹೆದರಿಬಿಟ್ಟೆ ಬಾಕ್ಸ್​ ನೀರಿಗೆ ಬಿದ್ದಾಗ. ಸದ್ಯ ವಾಪಾಸ್​ ಸಿಕ್ಕಿತು ಎಂದಿದ್ದಾನೆ ಈತ.’

ಅದೃಷ್ಟ ಎಂದರೆ ಇದೇ ಇರಬೇಕು. ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 5:35 pm, Mon, 28 November 22