AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ಮದುವೆಯಾಗಿದೆಯಾ?’ ಬೆಂಗಳೂರಿನಲ್ಲಿಯೂ ಪ್ರತೀ ಬ್ರೋಕರ್ ಕೇಳುವುದು ಇದನ್ನೇ; ಆಕ್ರೋಶಗೊಂಡ ಮಹಿಳೆ

Brokers : ಮನೆ ಬಾಡಿಗೆಗೆ ಕೊಡಿಸುತ್ತಾರೆ ಅಥವಾ ಕೊಡುತ್ತಾರೆ ಎಂದ ಮಾತ್ರಕ್ಕೆ, ಅವರು ತಮ್ಮ ಜೀವನಶೈಲಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಜೀವನಶೈಲಿಯೂ ಅದೇ ರೀತಿ ಇರಬೇಕೆಂದು ನಿರೀಕ್ಷಿಸಿ ನಿಯಂತ್ರಿಸುವುದು ಎಷ್ಟು ಸರಿ?

‘ನಿಮಗೆ ಮದುವೆಯಾಗಿದೆಯಾ?’ ಬೆಂಗಳೂರಿನಲ್ಲಿಯೂ ಪ್ರತೀ ಬ್ರೋಕರ್ ಕೇಳುವುದು ಇದನ್ನೇ; ಆಕ್ರೋಶಗೊಂಡ ಮಹಿಳೆ
House hunting experience of a woman in Bangalore
TV9 Web
| Edited By: |

Updated on:Nov 28, 2022 | 4:50 PM

Share

Viral Post : ಮನೆ ಹುಡುಕಿ ಕೊಡುವ ನೆಪದಲ್ಲಿ ಈ ಬ್ರೋಕರ್​ಗಳು ಕೇಳುವ ಪ್ರಶ್ನೆಗಳಂತೂ ಹುಚ್ಚುಹಿಡಿಸುವ ಹಾಗಿರುತ್ತವೆ. ಜೊತೆಗೆ ಮನೆ ಬಾಡಿಗೆಗೆ ಕೊಡುವ ನೆಪದಲ್ಲಿ ಮಾಲೀಕರು ಹಾಕುವ ನಿಯಮಗಳಂತೂ ಮತ್ತೂ ದಿಕ್ಕೆಡಿಸುವಂತಿರುತ್ತವೆ. ಅದರಲ್ಲೂ ಒಂಟಿಮಹಿಳೆಯರು ಮನೆ ಹುಡುಕುತ್ತಿದ್ದರಂತೂ ಮುಗಿದೇ ಹೋಯಿತು. ಬೆಂಗಳೂರಿನಂಥ ಮುಂದುವರಿದ ಮಹಾನಗರಗಳಲ್ಲೇ ಮಹಿಳೆಯರ ಪರಿಸ್ಥಿತಿ ಹೀಗಾದರೆ ಇನ್ನು ಸಣ್ಣಪುಟ್ಟ ಊರು, ಹಳ್ಳಿಗಳಲ್ಲಿ ಹೇಗಿರಬೇಡ? ಈಗ ವೈರಲ್ ಆಗುತ್ತಿರುವ ಈ ಟ್ವೀಟ್​ನಲ್ಲಿರುವ ಚಾಟ್​ ಗಮನಿಸಿದರೆ ವಿಷಯವೇನೆಂದು ಅರ್ಥವಾಗುತ್ತದೆ.

‘ಮನೆ ಹುಡುಕಲು ಹೊರಟರೆ, ನೀವು ಮದುವೆಯಾಗಿದ್ದೀರಾ, ನೀವು ಪಾರ್ಟಿ ಮಾಡುತ್ತೀರಾ? ನಿಮಗೆ ಬಾಯ್​ಫ್ರೆಂಡ್​ ಇದ್ದಾರಾ? ಅವರು ಮನೆಗೆ ಬರುತ್ತಾರಾ? ಇಂಥ ವೈಯಕ್ತಿಕ ಪ್ರಶ್ನೆಗಳನ್ನು ಬ್ರೋಕರ್​ಗಳು ಕೇಳುತ್ತಾರೆ. ಆದ್ದರಿಂದ ನಾಳೆಯಿಂದ ಮದುವೆಯಾದ ಮಹಿಳೆಯಂತೆ ವೇಷಧರಿಸಿ ಮನೆ ಹುಡುಕಲು ಹೋಗಬೇಕೆಂದುಕೊಂಡಿದ್ದೇನೆ. ಆಗ ನನ್ನ ಗಂಡ ದೆವ್ವದಂತೆ ನನ್ನನ್ನು ಹಿಂಬಾಲಿಸಿ ಇವಳಿಗೆ ಬಾಯ್​ಫ್ರೆಂಡ್​ ಇಲ್ಲ, ಪಾರ್ಟಿ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸುತ್ತಾ ನನ್ನೊಂದಿಗೆ ಸುತ್ತಾಡುತ್ತಿರುತ್ತಾನೆ ಎಂದು ರುಚಿತಾ ಎನ್ನುವವರು ಅತ್ಯಂತ ಬೇಸರದಿಂದ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಅನ್ನದ ಪಾಂಡಾ, ಮೊಟ್ಟೆಯ ಚಾದರ್, ಶಾವಿಗೆ ನಾಯಿ ಬೇಕಾ ನಿಮಗೂ?

ಇದೊಂದು ಮುಗಿಯದ ಕಥೆ, ಒಮ್ಮೊಮ್ಮೆ ಈ ಬ್ರೋಕರ್​ಗಳು, ಮಾಲೀಕರು ಜೀವ ಹಿಂಡಿಬಿಡುತ್ತಾರೆ ಎಂದು ಈ ಟ್ವೀಟ್​ಗೆ ಪ್ರತಿಯಾಗಿ ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ನೆಟ್ಟಿಗರು.

ಇಷ್ಟು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಈತನಕ ಇಂಥ ಕೆಟ್ಟ ಅನುಭವಗಳು ನನಗೆ ಆಗಿಲ್ಲ ಸದ್ಯ! ಅಷ್ಟಕ್ಕೂ ಭಾರತೀಯರು ಸದಾ ಪಾರ್ಟಿ ಮೂಡ್​ನಲ್ಲಿರುವುದಿಲ್ಲ. ಮನೆಗಳಲ್ಲಿ ಮಾಡಿದರೂ ಅಪರೂಪ. ಪುಣ್ಯಕ್ಕೆ ನನ್ನ ಓನರ್ ಸಮಾನ ಮನಸ್ಕರಿದ್ದಾರೆ ಎಂದಿದ್ದಾರೆ ಒಬ್ಬರು. ಎಲ್ಲ ಕಡೆಯೂ ಇದೇ ಕಥೆ. ನಿಮ್ಮ ಮನೆಗೆ ಯಾರಾದರೂ ಬಂಧುಬಳಗದವರು, ಸ್ನೇಹಿತರು ಬರುತ್ತಾರೆಂದರೆ ಮೊದಲೇ ಓನರ್​ಗೆ ತಿಳಿಸಬೇಕು ಎಂದು ಹಿಂದಿನ ಮಾಲೀಕರು ಹೇಳುತ್ತಿದ್ದರು ಎಂದಿದ್ದಾರೆ ಇನ್ನೂ ಒಬ್ಬರು. ನಾನಂತೂ ಹೀಗೆ ಕೇಳುವ ಮಾಲೀಕರು ಅಥವಾ ಬ್ರೋಕರ್​ಗೆ, ಅಣ್ಣಾ ನನಗೆ ಬೇಕಿರುವುದು ಮನೆ ಜೈಲಲ್ಲ ಎಂದಿದ್ದೇನೆ ಎಂದಿದ್ದಾರೆ ಮಗದೊಬ್ಬರು.

ಯಾರೋ ಏನೋ ಎಂತೋ. ಮನೆಯನ್ನು ಬಾಡಿಗೆಗೆ ಕೊಡಿಸುತ್ತಾರೆ ಅಥವಾ ಕೊಡುತ್ತಾರೆ ಎಂದ ಮಾತ್ರಕ್ಕೆ, ಅವರು ತಮ್ಮ ಜೀವನಶೈಲಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಜೀವನಶೈಲಿಯೂ ಅದೇ ರೀತಿ ಇರಬೇಕೆಂದು ನಿರೀಕ್ಷಿಸಿ ನಿಯಂತ್ರಿಸಲು ಇಚ್ಛಿಸುವುದು ಎಷ್ಟು ಸರಿ? ಇದು ಅತ್ಯಂತ ಅಸಹ್ಯಕರ ಸಂಗತಿ ಎಂದಿದ್ದಾರೆ ಇನ್ನೂ ಒಬ್ಬರು. ಇದು ಪ್ರತೀ ನಗರಗಳಲ್ಲಿ ಪ್ರತೀ ಹೆಣ್ಣುಮಕ್ಕಳ ಕಥೆ ಎಂದಿದ್ದಾರೆ ಹಲವಾರು ಜನ.

ಇದನ್ನು ಓದಿದ ನಿಮ್ಮಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:44 pm, Mon, 28 November 22

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್