10 ಸೆಕೆಂಡಿನಲ್ಲಿ ಹಿಮಕರಡಿಯನ್ನು ಹುಡುಕಿರಿ
IQ Test : ಸರೋವರವೊಂದು ಇಲ್ಲಿ ಹೆಪ್ಪುಗಟ್ಟಿದೆ. ಮರಗಳ ಮೇಲೆಲ್ಲ ಹಿಮ ಆವರಿಸಿದೆ. ಬಂಡೆಯ ಮೇಲೂ. ಆದರೆ ಹಿಮಕರಡಿಯೊಂದು ಇಲ್ಲಿ ಅಡಗಿದೆ. ಹುಡುಕಬಲ್ಲಿರಾ?
Viral Optical Illusion : ಮೊನ್ನೆಯಷ್ಟೇ ಪಾರ್ಕ್ನಲ್ಲಿ ಕಳೆದುಹೋದ ನಾಯಿಮರಿಯನ್ನು ಹುಡುಕಿದಿರಿ. ಅದಕ್ಕಿಂತ ಮೊದಲು ಸರೋವರದಲ್ಲಿ ಚಿಟ್ಟೆಯನ್ನು ಹುಡುಕಿದಿರಿ. ಕ್ಲಾಸ್ರೂಮಿನಲ್ಲಿ ತರಲೆ ಮಕ್ಕಳು ಕಳೆದು ಹಾಕಿದ ಮೇಷ್ಟ್ರ ಕನ್ನಡಕ ಹುಡುಕಿದಿರಿ. ಎಲ್ಲವೂ ತುಸು ಕಷ್ಟದ ಸವಾಲುಗಳೇ ಆಗಿದ್ದರೂ ನೀವು ಯಶಸ್ವಿಯಾಗಿ ಹುಡುಕುವಲ್ಲಿ ತಾಳ್ಮೆ ತಂದುಕೊಂಡಿರಿ. ಇದೀಗ ಮತ್ತೊಂದು ಸವಾಲಿನೊಂದಿಗೆ ಬಂದಿದ್ದೇವೆ. ಇದೂ ಕೂಡ ಅಷ್ಟೇ ಕಷ್ಟಕರವಾಗಿದೆ. ನೋಡೋಣ ಈ ಭ್ರಮಾತ್ಮಕ ಚಿತ್ರಕ್ಕೆ ಅದೆಷ್ಟು ಬೇಗ ಉತ್ತರ ಹುಡುಕುತ್ತೀರೆಂದು.
ಇಲ್ಲಿ ಸರೋವರವೇ ಇಡಿಯಾಗಿ ಹೆಪ್ಪುಗಟ್ಟಿದೆ. ಎಲ್ಲೆಡೆ ಹಿಮ ಆವರಿಸಿದೆ. ಗಿಡಗಳೂ ಹಿಮದಿಂದ ಆಚ್ಛಾದಿತಗೊಂಡಿವೆ. ಆದರೆ ಈ ಎಲ್ಲದರ ಮಧ್ಯೆಯೇ ಹಿಮಕರಡಿಯೊಂದು ಅವಿತುಕೊಂಡಿದೆ. ಹಿಮಕರಡಿ ಎಂದಮೇಲೆ ಕೇಳಬೇಕಾ? ಅದೂ ಕೂಡ ಬೆಳ್ಳಗಿರುತ್ತದೆ. ಹಿಮವೂ ಬೆಳ್ಳಗೆ. ನೋಡಿ ಪ್ರಯತ್ನಿಸಿ ಎಲ್ಲಿ ಸಿಗಬಹುದು ಹಿಮಕರಡಿ ಇಲ್ಲಿ.
ಕಷ್ಟವೆನ್ನಿಸುತ್ತಿದೆಯಾ? ಹಾಗಿದ್ದರೆ ಈ ಸುಳಿವಿನ ಪ್ರಕಾರ ಗಮನಿಸಿ. ಚಿತ್ರದ ಎಡಬದಿಗೆ ಹಿಮಕರಡಿ ಅಡಗಿದೆ. ಗಿಡ ಮತ್ತು ಬಂಡೆಯ ಮಧ್ಯದಲ್ಲಿ ಅಡಗಿದೆ. ಕಂಡಿತಾ? ಕೆಳಗಿನ ಚಿತ್ರ ನೋಡಿಬಿಡಿ ಹಾಗಿದ್ದರೆ.
ತುಂಬಾ ಕಷ್ಟವಾಯ್ತಲ್ಲ ಉತ್ತರ ಹುಡುಕುವುದು? ಹೀಗೆ ಹುಡುಕುವಷ್ಟು ಹೊತ್ತು ನಿಮ್ಮ ಕಣ್ಣು ಮತ್ತು ಮೆದುಳು ತೊಡಗಿಕೊಂಡಿರುವಷ್ಟು ಹೊತ್ತು ಜಗತ್ತನ್ನೇ ಮರೆತಿದ್ದಿರಿ ತಾನೆ? ಉತ್ತರ ಸಿಗುವುದು ದೊಡ್ಡ ವಿಷಯವಲ್ಲ. ಆದರೆ ಅದಕ್ಕಾಗಿ ಪ್ರಯತ್ನಿಸಿದಿರಲ್ಲ ಅದು ಒಳ್ಳೆಯದು.
ಆಗಾಗ ಕೆಲಸದ ಮಧ್ಯೆ ಇಂಥ ಸಣ್ಣ ಆಟಗಳನ್ನು ಆಡುವುದರಿಂದ ಮೆದುಳು ಇನ್ನಷ್ಟು ಕ್ರಿಯಾಶೀಲವಾಗಿರಲು ಹೆಚ್ಚಿನ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ.
ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:30 pm, Mon, 28 November 22