ಎಂಥ ಕ್ರೂರ! ಮರಿಮೊಸಳೆಯನ್ನೇ ನುಂಗಿದ ಹಿರಿಮೊಸಳೆಯ ವಿಡಿಯೋ ವೈರಲ್

Crocodile : ಮಾಂಸಾಹಾರಿಗಳಾದ ಮೊಸಳೆಗಳು ಮೀನು, ಪಕ್ಷಿ, ಸಣ್ಣಪುಟ್ಟ ಜಲಚರವಾಸಿಗಳನ್ನು ತಿನ್ನುತ್ತವೆ. ಆದರೆ ಮೊಸಳೆಯು ಮೊಸಳೆಯ ಮರಿಯನ್ನೇ ತಿಂದಿದ್ದನ್ನು ನೋಡಿದ್ದೀರಾ, ಯಾಕೆ ಹೀಗೆ? ಓದಿ, ನೋಡಿ ವಿಡಿಯೋ.

ಎಂಥ ಕ್ರೂರ! ಮರಿಮೊಸಳೆಯನ್ನೇ ನುಂಗಿದ ಹಿರಿಮೊಸಳೆಯ ವಿಡಿಯೋ ವೈರಲ್
ಮರಿಯನ್ನೇ ತಿಂದ ಮೊಸಳೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 26, 2022 | 5:52 PM

Viral Video : ಮೊಸಳೆಗಳು ಮೂಲತಃ ಮಾಂಸಾಹಾರಿಗಳು. ಮೀನು, ಪಕ್ಷಿ, ಕಪ್ಪೆಗಳನ್ನು ತಿಂದುಕೊಂಡು ಜೀವಿಸುತ್ತವೆ. ಏನೂ ಸಿಗದೇ ಇದ್ದಾಗ ಅಥವಾ ಬೇಟೆಯ ಮೂಡಿನಲ್ಲಿದ್ದರೆ ಅವರು ಹೇಗೆ ವರ್ತಿಸಬಹುದು ಎಂದು ಊಹಿಸುವುದು ಅಸಾಧ್ಯ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದರೆ ಮೊಸಳೆಗಳ ಹಸಿವಿನ ಭೀಕರತೆ ನಿಮಗರ್ಥವಾಗುತ್ತದೆ. ನದಿದಂಡೆಯ ಮೇಲೆ ಮರಿಮೊಸಳೆಯೊಂದಿಗೆ ಕಾದಾಟಕ್ಕಿಳಿದಿದೆ ಈ ಹಿರಿಮೊಸಳೆ. ನಂತರ ಏನಾಗುತ್ತದೆ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೌದು, ಮೊಸಳೆಯ ಮರಿಯನ್ನೇ ಈ ಮೊಸಳೆ ತಿಂದಿದೆ. ಹಸಿವಾದಾಗ ಹೀಗೆ ಸುಲಭವಾಗಿ ಸಿಗುವ ಮರಿಗಳನ್ನೇ ಮೊಸಳೆಗಳು ತಿನ್ನುವುದುಂಟು. ಈ ದೃಶ್ಯವನ್ನು ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿಯಲಾಗಿದೆ.  ಮಾರ್ಸ್​ ಜಾಕೋಬ್ಸ್​ ಮತ್ತು ಸ್ಟೀಫನ್​ ಕಾಂಗಿಸ್ಸರ್​ ಎನ್ನುವವರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈತನಕ 26.5 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ.

ಭಯದಿಂದ ತಪ್ಪಿಸಿಕೊಳ್ಳಲು ನೋಡುತ್ತದೆ ಮರಿಮೊಸಳೆ. ಆದರೆ ದೊಡ್ಡಮೊಸಳೆ ಶಪಥ ಮಾಡಿದಂತೆ ಅದನ್ನು ಬೆನ್ನುಬೀಳುತ್ತದೆ. ತನ್ನ ಬಲವಾದ ಹಲ್ಲುಗಳಿಂದ ಅದನ್ನು ಕಚ್ಚಲು ನೋಡುತ್ತ ಕೊನೆಗೆ ಅರ್ಧದೇಹವನ್ನೇ ಬಾಯೊಳಗೆ ಎಳೆದುಕೊಂಡುಬಿಡುತ್ತದೆ.

ನೆಟ್ಟಿಗರು ಈ ದೃಶ್ಯ ನೋಡಿ ಕೋಪಗೊಂಡಿದ್ದಾರೆ. ಎಂಥ ಹೃದಯವಿದ್ರಾವಕ ದೃಶ್ಯವಿದು ಎಂದು ಬೇಸರಿಸಿಕೊಳ್ಳುತ್ತಿದ್ದಾರೆ.

ಈ ದೃಶ್ಯ ನೋಡಿದ ನಿಮಗೂ ಅಷ್ಟೇ ಬೇಸರವಾಗಿರಬೇಕಲ್ಲ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ