‘ನಿಮ್ಮಂಥ ಕರುಣಾಮಯಿಗಳು ಈ ಜಗತ್ತಿಗೆ ಬೇಕು’ ; ಈ ವೈರಲ್ ವಿಡಿಯೋ ನೋಡಿ
Bird : ಈ ಹಕ್ಕಿ ಗಾಜಿನ ಬಾಗಿಲಿಗೆ ಬಡಿದು ಗಾಯಗೊಂಡಿದೆ. ಈ ಬೆಕ್ಕಿನ ಪೋಷಕ ಅದನ್ನು ಮನೆಯೊಳಗಿಟ್ಟುಕೊಂಡು ಆರೈಕೆ ಮಾಡಿ ಹಾರಿಬಿಟ್ಟಿದ್ದಾರೆ. ಬೆಕ್ಕು-ಪಕ್ಷಿ ಬದ್ಧ ವೈರಿಗಳಾದರೂ ಬೆಕ್ಕು ಸಂಯಮದಿಂದ ಅದನ್ನು ನೋಡಿಕೊಂಡಿದೆ.
Viral Video : ಒಳಗೆ ಬೆಕ್ಕು, ಹೊರಗೆ ಹಕ್ಕಿ ನಡುವೆ ಗಾಜು. ಪಾಪ ಹಕ್ಕಿಗೇನು ಗೊತ್ತು ನಡುವೆ ಇರುವುದು ಗಾಜು ಎಂದು. ರಭಸದಿಂದ ಮನೆಯೊಳಗೆ ಹಾರಿಬರಲು ನೋಡಿದೆ, ಗಾಜಿಗೆ ಬಡಿದು ಗಾಯಗೊಂಡಿದೆ. ಪಕ್ಷಿ ಮತ್ತು ಬೆಕ್ಕು ಗಾಜಿನಗೋಡೆಯಾಚೆ ಈಚೆ ಒಂದನ್ನೊಂದು ನೋಡುತ್ತ ಕುಳಿತಿವೆ. ಎಷ್ಟೋ ಹೊತ್ತಿನ ತನಕ ಬೆಕ್ಕು ಹೀಗೆ ಕುಳಿತಿರುವುದನ್ನು ನೋಡಿದ ಅದರ ಪೋಷಕ ಒಮ್ಮೆ ಬಾಗಿಲಾಚೆ ನೋಡಿದ್ಧಾರೆ. ಸ್ವಲ್ಪ ಸದ್ದಾದರೂ, ತನ್ನತ್ತ ಯಾರಾದರೂ ಚಲಿಸುತ್ತಾರೆಂದರೂ ಕ್ಷಣದಲ್ಲಿ ಹಾರಿಹೋಗುವುದು ಪಕ್ಷಿಯ ಜಾಯಮಾನ. ಇದು ಕುಳಿತಲ್ಲಿಯೇ ಕುಳಿತಿರುವುದನ್ನು ನೋಡಿ ಅನುಮಾನ ಬಂದಿದೆ. ಮುಂದೆನಾಯಿತು ಎಂದು ಈ ವಿಡಿಯೋ ನೋಡಿ.
ಹಾಗೆ ನೋಡಿದರೆ ಕ್ಷಣಾರ್ಧದಲ್ಲಿಯೇ ಬೆಕ್ಕುಗಳು ಪಕ್ಷಿಯನ್ನು ಗುಳುಂ ಎನ್ನಿಸಿಬಿಡುತ್ತವೆ. ಆದರೆ ಈ ಬೆಕ್ಕು? ಗಾಯಗೊಂಡ ಹಕ್ಕಿಯನ್ನು ಆರೈಕೆ ಮಾಡಲು ಸಹಕರಿಸಿದೆ. ಅಂದರೆ ಅದು ತನ್ನ ಆಹಾರ ಎಂಬುದನ್ನೇ ಮರೆತು ಅದನ್ನು ಕಾಯ್ದಿದೆ. ಬೆಕ್ಕು ಕೂಡ ಯಾವ ಕ್ಷಣದಲ್ಲಿಯೂ ಪಕ್ಷಿಯ ಮೇಲೆ ದಾಳಿ ಮಾಡಬಾರದೆಂದು ಈ ವ್ಯಕ್ತಿ ಅತ್ಯಂತ ನಿಗಾ ವಹಿಸಿದ್ಧಾನೆ. ಒಂದು ದಿನ ಪಕ್ಷಿಗೆ ನಿರ್ಮಿಸಿದ ಗಾಜಿನ ಪೆಟ್ಟಿಗೆಯನ್ನು ಗಮನಿಸುತ್ತಾನೆ. ಅದಕ್ಕೆ ಹೊದಿಸಿದ ಟವೆಲ್ ಚೂರು ಅಸ್ತವ್ಯಸ್ತವಾಗಿರುತ್ತದೆ. ತಕ್ಷಣವೇ ಬೆಕ್ಕಿಗೆ ಆಹಾರವಾಯಿತಾ ಎಂಬ ಅನುಮಾನವೂ ಬರುತ್ತದೆ. ಸುತ್ತಲೂ ಹುಡುಕಾಡುತ್ತಾನೆ. ಆದರೆ ಚೇತರಿಸಿಕೊಂಡ ಹಕ್ಕಿ ಮನೆಯೊಳಗೇ ಹಾರಲು ಕಲಿತಿರುತ್ತದೆ. ಇನ್ನು ಇದು ತನ್ನ ಬಳಗವನ್ನು ಸೇರಲಿ ಎಂದು ಆ ವ್ಯಕ್ತಿ ಆ ಹಕ್ಕಿಯನ್ನು ಹಾರಿಬಿಡುತ್ತಾನೆ.
ಇದನ್ನೂ ನೋಡಿ: ‘ಇಲಿ ನುಂಗಿ ನುಂಗಿ ಮಲಗಿದ್ದು ಸಾಕು ಟ್ರೆಡ್ಮಿಲ್ ಮಾಡು ಬಾ’ ಅಕ್ಕನ ಮಾತು ಕೇಳಿದ ಬೆಕ್ಕು
ಈ ವಿಡಿಯೋ ಅನೇಕ ನೆಟ್ಟಿರ ಹೃದಯವನ್ನು ತಟ್ಟಿದೆ. ಗಾಯಗೊಂಡ ಪಕ್ಷಿಯನ್ನು ಆರೈಕೆ ಮಾಡುವುದು ಸುಲಭವಲ್ಲ ಅದರಲ್ಲಿಯೂ ಅದರ ಶತ್ರುವನ್ನು ಮನೆಯಲ್ಲಿ ಸಾಕಿಕೊಂಡು! ಆದರೆ ಜಾಣ ಬೆಕ್ಕು ಹಕ್ಕಿಯ ಮನಸ್ಸನ್ನು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದೆ ಸದ್ಯ.
ನಿಮ್ಮಂಥ ಕರುಣಾಮಯಿಗಳು ಈ ಜಗತ್ತಿಗೆ ಬೇಕು ಎಂದಿದ್ದಾರೆ ನೆಟ್ಟಿಗರು. ಈ ಜಗತ್ತಿನಲ್ಲಿ ಇನ್ನೂ ಒಳ್ಳೆಯ ಜೀವಗಳು, ಪ್ರಾಮಾಣಿಕ ಹೃದಯಗಳು ಇವೆ ಎನ್ನುವುದನ್ನು ಈ ವಿಡಿಯೋ ತೋರಿಸಿದೆ ಎಂದಿದ್ದಾರೆ ಮತ್ತೊಬ್ಬರು. ಇದು ಬಹಳ ಒಳ್ಳೆಯ ಕೆಲಸ ಗೆಳೆಯ ಎಂದಿದ್ದಾರೆ ಮಗದೊಬ್ಬರು. ಎಂಥ ಮುದ್ಧಾದ ಹಕ್ಕಿಮರಿ ಅದು, ನಿಮ್ಮ ಈ ಪ್ರೀತಿ, ಆರೈಕೆ ಶ್ಲಾಘನೀಯ ಎಂದಿದ್ದಾರೆ ಹಲವರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ