ಎಲೆಕ್ಟ್ರಿಕ್ ಮಲ್ಟಿ ರೈಡರ್; ಹಳ್ಳಿಹೈದನ ಹೊಸ ಆವಿಷ್ಕಾರಕ್ಕೆ ಭೇಷ್ ಎಂದ ಆನಂದ ಮಹೀಂದ್ರಾ
Anand Mahindra : ಈ ವಾಹನದ ಬೆಲೆ ರೂ. 12,000. ಒಮ್ಮೆ ಚಾರ್ಜ್ ಮಾಡಿದರೆ 150 ಕಿ.ಮೀ. ಓಡುತ್ತದೆ. ಹಳ್ಳಿಗಾಡು, ಕೈಗಾರಿಕೋದ್ಯಮ, ಮೃಗಾಲಯ, ಕ್ಯಾಂಪಸ್ಗಳಿಗೆ ಸೂಕ್ತ. ಆರು ಆಸನಗಳು ಲಭ್ಯ. ಒಬ್ಬರಿಗೆ ಪ್ರಯಾಣ ಶುಲ್ಕ ರೂ. 10.
Viral Video : ಸಾಮಾನ್ಯವಾಗಿ ನಾವೆಲ್ಲರೂ ಹಳ್ಳಿಮೂಲದಿಂದಲೇ ಬಂದವರು. ಇದ್ದುದರಲ್ಲಿಯೇ ಅನುಕೂಲಗಳನ್ನು ರೂಪಿಸಿಕೊಳ್ಳುತ್ತ ಹೋಗುತ್ತಿರುವವರು. ಹಾಗಾಗಿ ಆವಿಷ್ಕಾರಗಳ ಬಗ್ಗೆ ಸದಾ ಯೋಚಿಸುತ್ತಿರುತ್ತೇವೆ. ಪ್ರಯೋಗಗಳಲ್ಲಿ ತೊಗಿಕೊಂಡಿರುತ್ತೇವೆ. ಉದ್ಯಮಿ ಆನಂದ ಮಹೀಂದ್ರಾ ಆಗಾಗ ತಮ್ಮ ಆಲೋಚನೆ, ಅನ್ವೇಷಣೆ, ವಿಚಾರಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳಲು ಬಯಸುತ್ತಿರುತ್ತಾರೆ. ಈ ಬಾರಿ ಅವರು ಟ್ವೀಟ್ ಮಾಡಿರುವ ಈ ವಿಡಿಯೋ ಆಸಕ್ತಿಕರವಾಗಿದೆ. ಕಡಿಮೆ ಖರ್ಚಿನಲ್ಲಿ ಈ ವಾಹನ ಖರೀದಿಸಬಹುದಾಗಿದೆ ಮತ್ತು ಕಡಿಮೆ ಖರ್ಚಿನಲ್ಲಿ ಇದನ್ನು ನಿರ್ವಹಿಸಬಹುದಾಗಿದೆ. ನೋಡಿ ಈ ಮಲ್ಟಿ ರೈಡರ್ ಪ್ಯಾಸೆಂಜರ್ ಗಾಡಿಯ ವಿಡಿಯೋ.
With just small design inputs, (cylindrical sections for the chassis @BosePratap ?) this device could find global application. As a tour ‘bus’ in crowded European tourist centres? I’m always impressed by rural transport innovations, where necessity is the mother of invention. pic.twitter.com/yoibxXa8mx
ಇದನ್ನೂ ಓದಿ— anand mahindra (@anandmahindra) December 1, 2022
ಈ ವಾಹನಕ್ಕೆ ತಗಲುವ ವೆಚ್ಚ ಕೇವಲ ರೂ. 12,000. ಒಮ್ಮೆ ಚಾರ್ಜ್ ಮಾಡಿದರೆ ಸಾಕು 150 ಕಿ.ಮೀ. ಓಡುತ್ತದೆ. ಕೈಗಾರಿಕೋದ್ಯಮ, ಪ್ರಾಣಿಸಂಗ್ರಹಾಲಯ, ಜನನಿಬಿಡ ಸ್ಥಳಗಳಲ್ಲಿ ಓಡಾಡಲು ಈ ವಾಹನ ಹೆಚ್ಚು ಅನುಕೂಲಕರವಾಗಿದೆ. ಸೈಕಲ್ ರಿಕ್ಷಾ ಮಾದರಿಯಲ್ಲಿ ಆರು ಆಸನಗಳನ್ನು ಜೋಡಿಸಲಾಗಿದೆ. ಒಬ್ಬರಿಗೆ ಪ್ರಯಾಣ ಶುಲ್ಕ ರೂ. 10.
ನೆಟ್ಟಿಗರು ಈ ಆವಿಷ್ಕಾರವನ್ನು ಸ್ವಾಗತಿಸಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಹೌದು ಮೃಗಾಲಯ, ಉದ್ಯಾನದಂಥ ಜಾಗಗಳಿಗೆ ಇದು ಹೇಳಿ ಮಾಡಿಸಿದಂತಿದೆ. ತಾಂತ್ರಿಕವಾಗಿಯೂ ಇದು ಸೂಕ್ತವಾಗಿದೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral : ಬೇಕಾ ನಿಮಗೂ ‘ಲಲ್ಲೂರಾಮ್ಸ್ ಸೋಲಾರ್ ಫ್ಯಾನ್ ಹೆಲ್ಮೆಟ್’?
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಇದು ಒಳ್ಳೆಯ ಆವಿಷ್ಕಾರ. ಅವರು ನೀರಿಗಾಗಿ ದಿನವೂ ಮೈಲಿಗಳಷ್ಟು ನಡೆದುಕೊಂಡೇ ಪ್ರಯಾಣಿಸುತ್ತಾರೆ. ಅವರಿಗೆ ಇದು ಪ್ರಯೋಜನಕಾರಿ ಎಂದಿದ್ದಾರೆ ಇನ್ನೊಬ್ಬರು. ಇನ್ನು ದೂರ ಎನ್ನುವ ಕಾರಣಕ್ಕೆ ಎಷ್ಟೋ ಮಕ್ಕಳು ಶಾಲಾಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರಿಗೂ ಇದು ಅನುಕೂಲ ಎಂದಿದ್ದಾರೆ ಮತ್ತೂ ಒಬ್ಬರು.
ಇಂಥ ಪರಿಸರಸ್ನೇಹಿ ಆವಿಷ್ಕಾರಗಳು ಹೆಚ್ಚೆಚ್ಚು ಆಗಬೇಕು. ಅದರಲ್ಲೂ ನಮ್ಮ ಭಾರತದಂಥ ದೇಶಗಳಿಗೆ ಎಂದಿದ್ದಾರೆ ಹಲವರು. ಇದು ಜಾಗತಿಕವಾಗಿ ಬಳಕೆಗೆ ಬರಬೇಕು ಎಂದಿದ್ಧಾರೆ ಇನ್ನೂ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:45 am, Fri, 2 December 22