ಈ ಸಮಯ ಆನಂದಮಯ; ಸಿಂಹಚುಂಬನದ ವಿಡಿಯೋ ವೈರಲ್​

Viral Video of a Lion : ಹೀಗೆ ಸಿಂಹವನ್ನು ಮುದ್ಧಾಡಬೇಕೆಂಬ ಆಸೆ ಎಷ್ಟು ಜನರಿಗೆ ಇದ್ದೀತು? ಹಾಗೆಯೇ ಹೀಗೆ ಮನುಷ್ಯನೊಂದಿಗೆ ಸ್ನೇಹಮಯಿಯಾಗಿರಬೇಕೆಂದು ಎಷ್ಟು ಸಿಂಹಗಳಿಗೆ ಇದ್ದೀತು? ಅಂತೂ ಇಲ್ಲಿ ಸಾಧ್ಯವಾಗಿದೆ ನೋಡಿ.

ಈ ಸಮಯ ಆನಂದಮಯ; ಸಿಂಹಚುಂಬನದ ವಿಡಿಯೋ ವೈರಲ್​
ಸಿಂಹದೊಂದಿಗೆ ಮುದ್ಧಾಡುತ್ತಿರುವ ಈ ಯುವಕ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 01, 2022 | 6:29 PM

Viral Video : ಬೆಕ್ಕು, ನಾಯಿ, ಆಕಳು, ಕುರಿ, ಮೊಲ, ಅಳಿಲು ಮುಂತಾದ ಪ್ರಾಣಿಗಳನ್ನು ಮುದ್ದಿಸಿ ಗೊತ್ತು. ಕೋಟ್ಯಂತರ ವಿಡಿಯೋಗಳನ್ನು ನೋಡಿದ್ದೀರಿ. ಆದರೆ ಸಿಂಹ! ದೂರದಿಂದ ಇವುಗಳ ಗರ್ಜನೆ ಕೇಳಿದರೇ ನಡುಕ ಬರುತ್ತದೆ. ಅಂಥದ್ದರಲ್ಲಿ ಇವುಗಳ ಸಮೀಪ ಹೋಗುವುದು, ಸ್ಪರ್ಶಿಸುವುದು, ಮುದ್ದಾಡುವುದು, ಚುಂಬಿಸುವುದು! ಅಬ್ಬಾ ಎಷ್ಟೊಂದು ಧೈರ್ಯ, ತಾಳ್ಮೆ, ಪ್ರೀತಿ ಬೇಕಲ್ಲವೆ? ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ಯುವಕ ಸಿಂಹವನ್ನು ಮುದ್ಧಾಡುತ್ತಿರುವ ಪರಿ, ಎಲ್ಲಕ್ಕಿಂತ ಮುಖ್ಯವಾಗಿ ಆ ಸಿಂಹದ ಮುಖವನ್ನು ನೋಡಿ, ಎಂಥ ನೆಮ್ಮದಿಯನ್ನು ಅನುಭವಿಸುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Lion Lovers (@lionlovershub)

ಇನ್‌ಸ್ಟಾಗ್ರಾಮ್‌ನ lionlovershub ಎಂಬ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಮೊದಲು ಈ ವಿಡಿಯೋ ಅನ್ನು ಟಿಕ್​ಟಾಕ್​ನಲ್ಲಿ ಹಂಚಿಕೊಳ್ಳಾಗಿತ್ತು. ಈತನಕ ಈ ರೀಲ್​ 3.6 ಮಿಲಿಯನ್​ ವೀಕ್ಷಕರನ್ನು ಸೆಳೆದಿದೆ. 2 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಎಂಥ ಆಪ್ತವಾಗಿದೆ ಈ ವಿಡಿಯೋ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ನೋಡಿ : ಮುದಿಸಿಂಹದ ಮೇಲೆ ಕಾಡೆಮ್ಮೆಗಳ ಹಿಂಡು ಆಕ್ರಮಣ ಮಾಡಿದ ವಿಡಿಯೋ ವೈರಲ್

ಇವರಿಬ್ಬರೂ ಬಹಳ ಅದೃಷ್ಟಶಾಲಿಗಳು ಎಂದಿದ್ಧಾರೆ ಕೆಲವರು. ನನಗೂ ಹೀಗೆಲ್ಲ ಮುದ್ಧಾಡಬೇಕು ಅನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಇದೇ ನಿಜವಾದ ಪ್ರೀತಿ. ಪ್ರಾಣಿಗಳಿಗೂ ಮನುಷ್ಯನ ಪ್ರೀತಿ ಬೇಕು ಎಂದಿದ್ದಾರೆ ಮತ್ತೊಬ್ಬರು. ಪ್ರಾಣಿಗಳೊಂದಿಗೆ ಹೀಗೆ ಶಾಂತಿಯುತವಾಗಿ ಬದುಕಬೇಕು ಇದೇ ಬದುಕಿನ ಗುರಿಯಾಗಬೇಕು ಎಂದಿದ್ದಾರೆ ಮಗದೊಬ್ಬರು.

ಇದು ಅಸಾಮಾನ್ಯ ಬಂಧ ಎಂದಿದ್ದಾರೆ ಇನ್ನೂ ಒಬ್ಬರು. ಕಾಡುಪ್ರಾಣಿಗಳು ಕಾಡಿನಲ್ಲಿಯೇ ಉಳೀಯಬೇಕು ಸಾಕುಪ್ರಾಣಿಗಳಂತೆ ಅಲ್ಲ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 6:29 pm, Thu, 1 December 22