ಟ್ರೆಡ್ ಮಿಲ್ ಮೇಲೆ ‘ಹಾಯ್ ರಾಮಾ’; ಶಭಾಷ್ ಅಲೋಕ್ ಶರ್ಮಾ
Rangeela : 1995ರಲ್ಲಿ ಬಿಡುಗಡೆಯಾದ ರಂಗೀಲಾ ಸಿನೆಮಾದ ‘ಹಾಯ್ ರಾಮಾ’ ಇಂದಿಗೂ ಕಾವನ್ನು ಉಳಿಸಿಕೊಂಡಿದೆ. ಇದೀಗ ಈ ಯುವಕ ಹೀಗೆ ನರ್ತಿಸಿ ಅದಕ್ಕೆ ಇನ್ನಷ್ಟು ಕಿಚ್ಚನ್ನು ಹಚ್ಚಿದ್ದಾರೆ.
Viral Video : ಜಿಮ್ ಸಾಧನಗಳೊಂದಿಗೆ ವ್ಯಾಯಾಮ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಅದರಲ್ಲಿಯೂ ಟ್ರೆಡ್ ಮಿಲ್ ಮೇಲೆ ಬಹಳೇ ಹುಷಾರಾಗಿರಬೇಕು. ಅಂಥದ್ದರಲ್ಲಿ ಈ ಯುವಕ ಟ್ರೆಡ್ಮಿಲ್ ಮೇಲೆ ನರ್ತಿಸಿ ನೆಟ್ಟಿಗರ ಹುಬ್ಬೇರಿಸುವಂತೆ ಮಾಡುತ್ತಿದ್ದಾನೆ. ಏಕೆಂದರೆ ಕಲೆ ಇದ್ದಲ್ಲಿ ಸಾಹಸ ಇರಲೇಬೇಕು. ಈ ಎರಡೂ ಇವನಲ್ಲಿವೆ. ಈತನ ಹೆಸರು ಅಲೋಕ್ ಶರ್ಮಾ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಇದನ್ನೂ ಓದಿView this post on Instagram
1995ರಲ್ಲಿ ಬಿಡುಗಡೆಯಾದ ರಂಗೀಲಾ ಸಿನೆಮಾದ ‘ಹಾಯ್ ರಾಮಾ’ ಹಾಡಿಗೆ ಈತ ನರ್ತಿಸಿದ್ದಾನೆ. 30,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದು, 2,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನಾನು ಗುಜರಾತಿನಲ್ಲಿ ವಾಸಿಸುತ್ತೇನೆ, ಈ ರೀಲ್ ನನಗೆ ತುಂಬಾ ಇಷ್ಟವಾಯಿತು ಎಂದಿದ್ದಾರೆ ಒಬ್ಬರು. ಈ ಹಾಡು ಇಂದಿಗೂ ಅದೇ ಬಿಸುಪನ್ನು ಉಳಿಸಿಕೊಂಡಿದೆ ಜೊತೆಗೆ ನಿಮ್ಮ ಈ ಸಾಹಸಮಯ ದೃಶ್ಯ! ಎಂದು ಇನ್ನೊಬ್ಬರು ಹೇಳಿದ್ಧಾರೆ.
ಸಾಮಾಜಿಕ ಜಾಲತಾಣದಲ್ಲಿ ಇಂತಹ ಸಾಕಷ್ಟು ಸಾಹಸಮಯ ರೀಲ್ಗಳು ನೋಡಲು ಸಿಗುತ್ತವೆ. ಆದರೆ ಎಲ್ಲವನ್ನೂ ಎಲ್ಲರೂ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರಸ್ತುತ ರೀಲ್ ನೋಡಿ ಉತ್ತೇಜನಗೊಂಡು ಅನುಕರಿಸಲು ಹೋಗದಿರುವುದು ಒಳ್ಳೆಯದು. ನಿಮ್ಮ ಜಾಗ್ರತೆಯಲ್ಲಿ ನೀವಿರಬೇಕು. ಮನರಂಜನೆಗಾಗಿ ಮಾತ್ರ ನೋಡಬೇಕು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:01 pm, Thu, 1 December 22