ಮುದಿಸಿಂಹದ ಮೇಲೆ ಕಾಡೆಮ್ಮೆಗಳ ಹಿಂಡು ಆಕ್ರಮಣ ಮಾಡಿದ ವಿಡಿಯೋ ವೈರಲ್

Viral Video : ಪಾಪ ಸಿಂಹದ ಹಣೆಬರಹ ನೋಡಿರೋ ಎಂದು ಗೋಳಾಡುತ್ತಿದ್ದಾರೆ ನೆಟ್ಟಿಗರು. ಹಸಿವು ಇಷ್ಟೊಂದು ಕ್ರೂರತನದಿಂದ ಕೂಡಿರುತ್ತದೆಯೇ ಎಂದಿದ್ದಾರೆ ಒಬ್ಬರು. ಕಾಡೆಮ್ಮೆ ಸಸ್ಯಾಹಾರಿ, ಸಮಾಧಾನ ಸ್ವಲ್ಪ ಎಂದಿದ್ದಾರೆ ಇನ್ನೊಬ್ಬರು..

ಮುದಿಸಿಂಹದ ಮೇಲೆ ಕಾಡೆಮ್ಮೆಗಳ ಹಿಂಡು ಆಕ್ರಮಣ ಮಾಡಿದ ವಿಡಿಯೋ ವೈರಲ್
ಕಾಡೆಮ್ಮೆಗಳ ಹಿಂಡು ಮುದಿಸಿಂಹದ ಮೇಲೆ ಆಕ್ರಮಣ ಮಾಡುತ್ತಿರುವುದು
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Nov 25, 2022 | 11:58 AM

Viral Video : ಸಿಂಹದ ಮೇಲೆ ಅನ್ಯಪ್ರಾಣಿಗಳ ದಾಳಿಯೇ?! ಹೌದು. ನೀವು ಓದುತ್ತಿರುವುದು ಸರಿ ಇದೆ. ಕಾಡಿನೊಳಗೆ ತನ್ನ ಪಾಡಿಗೆ ತಾನು ಈ ಮುದಿಸಿಂಹ ಮಲಗಿತ್ತು. ಆದರೆ ಈ ಕಾಡೆಮ್ಮೆಗಳ ಗುಂಪು ಮಲಗಿದ ಸಿಂಹವನ್ನು ಕೆಣಕಿವೆ. ಸಿಂಹ ಇವುಗಳೊಂದಿಗೆ ಕಾದಾಡಿ ತಪ್ಪಿಸಿಕೊಳ್ಳಲು ನೋಡಿದೆ. ಆದರೂ ಅಟ್ಟಿಸಿಕೊಂಡು ಹೋದ ಈ ಕಾಡೆಮ್ಮೆಗಳು ಅದನ್ನು ಎತ್ತಿ, ತೂರಾಡಿ, ಕೋಡಿನಿಂದ ತಿವಿದು ದಾಳಿ ಮಾಡಲು ನೋಡಿದೆ. ಮುಂದೇನಾಯಿತು ನೋಡಿ.

ಕೆಲ್​ಬ್ರಿಕ್​ ಎಂಬ ಫೋಟೋಗ್ರಾಫರ್ ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಾಡೆಮ್ಮೆಗಳು ಕೋಡುಗಳಿಂದ ತಿವಿತಿವಿದು ಮುದಿಸಿಂಹವನ್ನು ಸಿಟ್ಟಿಗೆಬ್ಬಿಸಿ ದಾಳಿ ಮಾಡುವ ದೃಶ್ಯ ನಿಮ್ಮನ್ನು ಬೆಚ್ಚಿಬೀಳಿಸಿತಲ್ಲವೆ? ಮುದಿಸಿಂಹ ಪ್ರಾಣ ಕಾಪಾಡಿಕೊಂಡರೆ ಸಾಕು ಎಂಬಂತೆ ಎದ್ದುಬಿದ್ದು ಓಡಿದೆ. ಕೋಡಿನ ತಿವಿತ ಮತ್ತು ತುಳಿತಕ್ಕೆ ಸಾಕಷ್ಟು ಗಾಯಗಳು ಉಂಟಾಗಿರುವ ಸಂಭವವಿದೆ.

ಈ ವಿಡಿಯ ಅನ್ನು 1.5 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಪಾಪ ಸಿಂಹದ ಹಣೆಬರಹ ನೋಡಿರೋ ಎಂದು ಪೆಚ್ಚು ಮುಖ ಹಾಕಿದ್ದಾರೆ ನೆಟ್ಟಿಗರು. ಯಾಕೋ ಇದು ಬಹಳ ನೋವುಂಟು ಮಾಡಿತು. ಹೀಗೆ ಎಲ್ಲರೂ ಸೇರಿ ಸಿಂಹದ ಮೇಲೆ ಆಕ್ರಮಣ ಮಾಡಿದ್ದನ್ನು ನೋಡಿ ಎಂದಿದ್ದಾರೆ ಇನ್ನೂ ಒಬ್ಬರು. ಸಿಂಹದ ಜಾಗದಲ್ಲಿ ಬೇರೆ ಪ್ರಾಣಿ ಇದ್ದರೂ ಇದು ಹಿಂಸಾತ್ಮಕವೇ ಎಂದಿದ್ದಾರೆ ಮಗದೊಬ್ಬರು. ಹಸಿವು ಎನ್ನುವುದು ಹೀಗೆಲ್ಲ ಕ್ರೂರತನದಿಂದ ವರ್ತಿಸುವಂತೆ ಮಾಡುತ್ತದೆಯೇ? ಎಂದಿದ್ದಾರೆ ಮತ್ತೂ ಒಬ್ಬರು. ಕಾಡೆಮ್ಮೆಗಳು ಸಸ್ಯಾಹಾರಿಗಳು. ಅತಿಯಾಗಿ ಯೋಚಿಸಬೇಡಿ ಎಂದಿದ್ದಾರೆ ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು. ಮತ್ತೆ ಯಾಕೆ ಹೀಗೆ ಆಕ್ರಮಣ ಮಾಡಿದ್ಧಾವೆ ಕಾರಣವೇನು ಎಂದು ಕೇಳಿದ್ದಾರೆ ಒಬ್ಬರು, ನಿಮ್ಮ ಕಚೇರಿಯ ಬಾಸ್​ಗೆ ಕೇಳಿ ಎಂದು ಹಾಸ್ಯದ ಚಟಾಕಿ ಹಾರಿಸಿದ್ಧಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?

ಇದನ್ನೂ ಓದಿ

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada