AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಿಗ್ಗಿ, ಝೊಮ್ಯಾಟೋ ಡೆಲಿವರಿ ಏಜೆಂಟರುಗಳು ಈ ಹೌಸಿಂಗ್​ ಸೊಸೈಟಿಯ ಲಿಫ್ಟ್​ ಉಪಯೋಗಿಸುವಂತಿಲ್ಲ!

Delivery Agents : ಈ ನೋಟೀಸ್​ನೊಂದಿಗೆ ಇನ್ನೊಂದು ನೋಟೀಸ್​ ಅಂಟಿಸಬೇಕು; ಸ್ವಿಗ್ಗಿ ಝೊಮ್ಯಾಟೋನಿಂದ ಆರ್ಡರ್​ ತರಿಸಿಕೊಳ್ಳುವವರು ಸೊಸೈಟಿಯ ನೆಲಮಹಡಿಗೆ ಹೋಗಿ ತಮ್ಮ ಆರ್ಡರ್​​ ಪಡೆದುಕೊಳ್ಳಬೇಕು ಎಂದು.

ಸ್ವಿಗ್ಗಿ, ಝೊಮ್ಯಾಟೋ ಡೆಲಿವರಿ ಏಜೆಂಟರುಗಳು ಈ ಹೌಸಿಂಗ್​ ಸೊಸೈಟಿಯ ಲಿಫ್ಟ್​ ಉಪಯೋಗಿಸುವಂತಿಲ್ಲ!
ನೋಟೀಸ್​ : ಡೆಲಿವರಿ ಏಜೆಂಟರುಗಳು ಲಿಫ್ಟ್​ ಉಪಯೋಗಿಸುವ ಹಾಗಿಲ್ಲ.
TV9 Web
| Edited By: ಶ್ರೀದೇವಿ ಕಳಸದ|

Updated on:Nov 25, 2022 | 1:26 PM

Share

Viral Video : ಎಂಥ ಮಳೆಯಲ್ಲಿ, ಎಂಥ ಚಳಿಯಲ್ಲಿ, ಎಂಥ ಬಿಸಿಲಲ್ಲಿ ಮತ್ತು ಕಿಕ್ಕಿರಿದ ಟ್ರಾಫಿಕ್ಕಿನಲ್ಲಿಯೂ ಸರಿಯಾದ ಸಮಯಕ್ಕೆ ಬಿಸಿಬಿಸಿಯಾದ ಆಹಾರವನ್ನು ಮತ್ತು ಸಾಮಾನುಗಳನ್ನು ಗ್ರಾಹಕರಿಗೆ ತಲುಪಿಸುವ ಡೆಲಿವರಿ ಏಜೆಂಟರುಗಳ ಬಗ್ಗೆ ಹೀಗೆ ಈ ಹೌಸಿಂಗ್​ ಸೊಸೈಟಿಯವರು ಕಟ್ಟಳೆ ಹೇರಿರುವುದು ಯಾಕೆ? ಐಎಎಸ್​ ಅಧಿಕಾರಿ ಅವನೀಶ ಶರಣ ಹೌಸಿಂಗ್​ ಬೋರ್ಡ್​ನ ಗೋಡೆಗೆ ಅಂಟಿಸಿರುವ ಈ ನೋಟೀಸಿನ ಕುರಿತು ಪ್ರಶ್ನಿಸಿದ್ದಾರೆ. ನೆಟ್ಟಿಗರು ಈ ಸೊಸೈಟಿಯ ನಡೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ.

ಸೊಸೈಟಿಯಲ್ಲಿ ವಾಸಿಸುವವರಿಗೆ ಮಾತ್ರ ಈ ಲಿಫ್ಟ್ ಬಳಕೆ. ಉಳಿದಂತೆ ಸ್ವಿಗ್ಗಿ, ಝೊಮ್ಯಾಟೋ ಮತ್ತು ಇನ್ನುಳಿದ ಯಾವುದೇ ಡೆಲಿವರಿ ಏಜೆಂಟರುಗಳು ಈ ಲಿಫ್ಟ್​ ಉಪಯೋಗಿಸುವಂತಿಲ್ಲ ಎಂದು ಗೋಡೆಯ ಮೇಲೆ ನೊಟೀಸ್ ಅಂಟಿಸಿದ್ದಾರೆ ಈ ಹೌಸಿಂಗ್​ ಸೊಸೈಟಿಯವರು. ಈ ತನಕ ಈ ಟ್ವೀಟ್​ ಅನ್ನು17,400ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 1,200 ಜನರು ಲೈಕ್ ಮಾಡಿದ್ದಾರೆ. 1,500 ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Trending : ಮಗನನ್ನು ಸಂಪರ್ಕಿಸಲು ವೃದ್ಧದಂಪತಿಗೆ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್

ಹೀಗೆ ಬರೆದು ಅಂಟಿಸುವ ಬದಲು ಡೆಲಿವರಿ ಏಜೆಂಟರುಗಳ ಸಲುವಾಗಿಯೇ ಪ್ರತ್ಯೇಕ ಲಿಫ್ಟ್​ ಅಳವಡಿಸಬೇಕು. ಇದು ಸಾಕಷ್ಟು ಅಪಾರ್ಟ್​ಮೆಂಟ್​ಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಎಂದಿದ್ದಾರೆ ಒಬ್ಬರು. ಶುಚಿತ್ವ ಮತ್ತು ಸುರಕ್ಷತೆ ಸಲುವಾಗಿ ಹೀಗೆ ಹೇಳಿರುವ ಸಾಧ್ಯತೆ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ವಿದ್ಯುತ್​ ವೆಚ್ಚ ಹೆಚ್ಚುವ ಬಗ್ಗೆ ಕಟ್ಟಡ ಮಾಲೀಕರಿಗೆ ವ್ಯಥೆಯಾಗಿ ಹೀಗೆ ಹೇಳಿರಲು ಸಾಧ್ಯ ಎಂದು ಮಗದೊಬ್ಬರು ಹೇಳಿದ್ದಾರೆ.

ಈ ನೋಟೀಸ್​ನೊಂದಿಗೆ ಇನ್ನೊಂದು ನೋಟೀಸ್​ ಅಂಟಿಸಬೇಕು; ಸ್ವಿಗ್ಗಿ ಝೊಮ್ಯಾಟೋನಿಂದ ಆರ್ಡರ್​ ತರಿಸಿಕೊಳ್ಳುವವರು ಸೊಸೈಟಿಯ ನೆಲಮಹಡಿಗೆ ಹೋಗಿ ತಮ್ಮ ಆರ್ಡರ್​​ ಪಡೆದುಕೊಳ್ಳಬೇಕು ಎಂದು ಒಬ್ಬರು ಹೇಳಿದ್ದಾರೆ. ಹೌದು, ಇವರು ಹೀಗೆ ನೋಟೀಸ್​ ಅಂಟಿಸಿರುವುದು ಅನ್ಯಾಯ. ಅದಕ್ಕೆ ಪರ್ಯಾಯವನ್ನೂ ಅವರು ಸೂಚಿಸಬೇಕಿತ್ತು ಎಂದಿದ್ದಾರೆ ಇನ್ನೂ ಒಬ್ಬರು. ಈ ತಾರತಮ್ಯ ಸರಿಯಲ್ಲ, ಕನಿಷ್ಟ ಪ್ರಜ್ಞೆ ಇರಬೇಕಿತ್ತು, ಡೆಲಿವರಿ ಏಜೆಂಟರುಗಳು ಯಾರಿಗೆ ಸಹಾಯ ಮಾಡಲು ಬರುತ್ತಾರೆ ಎನ್ನುವುದನ್ನು ಯೋಚಿಸಬೇಕಿತ್ತು ಎಂದಿದ್ದಾರೆ ಹಲವರು.

ಇದನ್ನು ಓದಿದ ನೀವು ಏನು ಅಭಿಪ್ರಾಯ ಕೊಡುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:17 pm, Fri, 25 November 22

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ