Trending : ಮಗನನ್ನು ಸಂಪರ್ಕಿಸಲು ವೃದ್ಧದಂಪತಿಗೆ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್

Swiggy Delivery Agent : ಎಷ್ಟು ಫೋನ್ ಮಾಡಿದರೂ ಪರಊರಿನಲ್ಲಿರುವ ತಮ್ಮ ಮಗ ಯಾಕೆ ಉತ್ತರಿಸುತ್ತಿಲ್ಲ ಎಂದು ವೃದ್ಧದಂಪತಿ ಕಳವಳಕ್ಕೀಡಾಗಿದ್ದಾರೆ. ಆಗ ಸ್ವಿಗ್ಗಿ ಡೆಲಿವರಿ ಏಜೆಂಟ್​ ಒಬ್ಬರು ಅವರಿಗೆ ಸಹಾಯ ಮಾಡಿದ್ದಾರೆ. ನೈಜಘಟನೆಯನ್ನು ಓದಿ.

Trending : ಮಗನನ್ನು ಸಂಪರ್ಕಿಸಲು ವೃದ್ಧದಂಪತಿಗೆ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 14, 2022 | 5:14 PM

Trending : ಆನ್​ಲೈನ್​ನಲ್ಲಿ ಆಗಾಗ ದಾಖಲಾಗುವ ಇಂಥ ಸತ್ಯಘಟನೆಗಳು, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿರುತ್ತವೆ. ಸಿಕಂದರಾಬಾದ್‌ನ ಸ್ವಿಗ್ಗಿ ಡೆಲಿವರಿ ಏಜೆಂಟ್​ ಒಬ್ಬರು ಕರ್ತವ್ಯದ ಮಧ್ಯೆ ಚೆನ್ನೈನಲ್ಲಿರುವ ವೃದ್ಧದಂಪತಿಗೆ ಸಹಾಯ ಮಾಡಿದ ಘಟನೆಯು ನೆಟ್ಟಿಗರನ್ನು ಆಪ್ತವಾಗಿ ಹಿಡಿದಿಟ್ಟಿದೆ.  ಸಾಯಿಕಿರಣ್​ ಕಣ್ಣನ್​ ಎಂಬ ಹವ್ಯಾಸಿ ಪತ್ರಕರ್ತರು ಟ್ವೀಟ್​ ಥ್ರೆಡ್​ ಮೂಲಕ ಈ ನೈಜಘಟನೆಯನ್ನು ಹಂತಹಂತವಾಗಿ ಹರವಿಟ್ಟಿದ್ದಾರೆ. ಈ ಕಥೆಯನ್ನು ಓದಿದ ನೆಟ್ಟಿಗರು ಭಾವುಕರಾಗಿದ್ದಾರೆ.

‘ನನ್ನ ತಾಯಿಯ ದೂರದ ಸಂಬಂಧಿಯು (ವೃದ್ಧದಂಪತಿ) ನಿನ್ನೆ ರಾತ್ರಿ ತಮ್ಮ ಮಗನನ್ನು (ಮಿಸ್ಟರ್​ ಎಕ್ಸ್​) ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಮಿಸ್ಟರ್ ಎಕ್ಸ್​ ಒಂಟಿಯಾಗಿ ಸಿಕಂದರಾಬಾದ್​ನಲ್ಲಿ ವಾಸಿಸುತ್ತಿರುವುದರಿಂದ ಅವರಿಗೆ ಸಹಜವಾಗಿ ಆತಂಕವಾಯಿತು. ಫೋನ್​ನಲ್ಲಿ ತಮ್ಮ ಮಗನನ್ನು ಸಂಪರ್ಕಿಸುವ ಅವರ ಪ್ರಯತ್ನ ಕೆಲ ದಿನಗಳಿಂದ ಸಾಗಿದೆ ಎನ್ನುವ ವಿಷಯ ತಿಳಿಯಿತು. ಆಗ ವೃದ್ಧದಂಪತಿಯು ಮಗನ ಮನೆಯ ವಿಳಾಸವನ್ನು  ಹಂಚಿಕೊಂಡರು.’

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನನ್ನ ತಾಯಿ ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕು ಎಂದುಕೊಂಡರು. ಮಿಸ್ಟರ್ ಎಕ್ಸ್​ಗೆ ಕೆಲ ದಿನಸಿಗಳನ್ನು ತಲುಪಿಸಲು ಆಲೋಚಿಸಿದರು. ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಮೂಲಕ ಈ ಉಪಾಯ ಫಲಿಸಬಹುದೆಂದು ಕಾರ್ಯಪ್ರವೃತ್ತರಾದರು. ಆದರೆ ಅಂದುಕೊಂಡ ಹಾಗೆ ಆಗಲೇ ಇಲ್ಲ. ವಿಳಾಸ ಪತ್ತೆ ಹಚ್ಚುವಲ್ಲಿ ಡೆಲಿವರಿ ಏಜೆಂಟ್​ ವಿಫಲರಾದರು. ಆಗ ಬೆಂಗಳೂರಿನಲ್ಲಿದ್ದುಕೊಂಡೇ ನನ್ನ ತಾಯಿ, ಚೆನ್ನೈನಲ್ಲಿರುವ ವೃದ್ಧದಂಪತಿಗೆ ಅವರ ಮಗನೊಂದಿಗೆ ಸಂಪರ್ಕ ಕಲ್ಪಿಸಲು ಮತ್ತೊಂದು ಉಪಾಯ ಹೂಡಿದರು.’

‘ಮಿಸ್ಟರ್​ ಎಕ್ಸ್​ನ ಕೆಲ ಸ್ನೇಹಿತರನ್ನು ಪತ್ತೆ ಹಚ್ಚಿ ಆತನ ಸರಿಯಾದ ವಿಳಾಸವನ್ನು ಪಡೆದುಕೊಂಡರು. ಮತ್ತೊಮ್ಮೆ ಡೆಲಿವರಿ ಏಜೆಂಟ್​ನನ್ನು ಸಂಪರ್ಕಿಸಿ ಅವನ ವಿಳಾಸಕ್ಕೆ ಭೇಟಿ ನೀಡುವಂತೆ ವಿನಂತಿಸಿಕೊಂಡರು. ಡೆಲಿವರಿ ಏಜೆಂಟ್​ ಶ್ರೀನಾಥ್ ಶ್ರೀಕಾಂತ್, ತನ್ನ ಡೆಲಿವರಿ ಕೆಲಸವನ್ನು ಮುಗಿಸಿ ಆ ವಿಳಾಸಕ್ಕೆ ಹೋಗುವುದಾಗಿ ಭರವಸೆ ನೀಡಿದರು. ಕೊನೆಗೆ ದಿನಸಿ ಸಾಮಾನುಗಳನ್ನು ಮಿಸ್ಟರ್ ಎಕ್ಸ್​ ಮನೆಗೆ ಯಶಸ್ವಿಯಾಗಿ ತಲುಪಿಸಿದರು. ಆದರೆ ಅಲ್ಲೊಂದು ಆಘಾತ ಕಾದಿತ್ತು. ಮಿಸ್ಟರ್​ ಎಕ್ಸ್​ಗೆ ಅಪಘಾತ ಸಂಭವಿಸಿದೆ ಎನ್ನುವ ವಿಷಯ ಶ್ರೀನಾಥ ಮೂಲಕ ತಿಳಿಯಿತು. ಮಿಸ್ಟರ್ ಎಕ್ಸ್​, ತನ್ನ ಈ ಪರಿಸ್ಥಿತಿಯಿಂದಾಗಿ ಪೋಷಕರು ಒತ್ತಡ ಅನುಭವಿಸಬಾರದು ಎಂಬ ಕಾರಣಕ್ಕೆ ಅವರ ಕರೆಯನ್ನು ನಿರ್ಲಕ್ಷಿಸತೊಡಗಿದ್ದೆ ಎಂಬ ವಿಷಯವನ್ನು ತಿಳಿಸಿದರು. ನಂತರ ತನ್ನ ಪೋಷಕರೊಂದಿಗೆ ಮಾತನಾಡಿದರು. ಸ್ವಿಗ್ಗಿ ಡೆಲಿವರಿ ಏಜೆಂಟ್​ರ ಈ ಸಹಾಯಕ್ಕೆ ವೃದ್ಧದಂಪತಿ ವಂದನೆ ಸಲ್ಲಿಸಿತು.’

ಈ ಘಟನೆಯನ್ನು 5,000ಕ್ಕೂ ಹೆಚ್ಚು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ನೂರಾರು ಪ್ರತಿಕ್ರಿಯೆಗಳು ಈ ಪೋಸ್ಟ್​ಗೆ ವ್ಯಕ್ತವಾಗಿವೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:06 pm, Wed, 14 September 22