AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಭೂಪಾಲದಲ್ಲಿ 18 ವಿಚ್ಛೇದಿತ ಪುರುಷರ ‘ಸ್ವಾತಂತ್ರ್ಯ’ ಸಮಾರಂಭ ಆಯೋಜನೆ

Divorce Invitation : ‘ವಿಚ್ಛೇದನಾ ಆಮಂತ್ರಣ’ ಆಮಂತ್ರಣದ ಶೀರ್ಷಿಕೆಯೇ ಹೌಹಾರುವಂತಿದೆ! ಹಮ್ಮಿಕೊಂಡ ಕಾರ್ಯಕ್ರಮಗಳು ಹುಬ್ಬೇರಿಸುವಂತಿವೆ.  ‘ಪುರುಷರ ಆತ್ಮಸಾಕ್ಷಿಯನ್ನು ಪವಿತ್ರಗೊಳಿಸುವ ಸಮಾರಂಭ’ ಅಸಲಿಯೋ ನಕಲಿಯೋ ಎಂಬ ಜಿಜ್ಞಾಸೆಗೆ ನೆಟ್ಟಿಗರು ಬಿದ್ದಿದ್ದಾರೆ.

Trending : ಭೂಪಾಲದಲ್ಲಿ 18 ವಿಚ್ಛೇದಿತ ಪುರುಷರ ‘ಸ್ವಾತಂತ್ರ್ಯ’ ಸಮಾರಂಭ ಆಯೋಜನೆ
ವಿಚ್ಛೇದನ ಆಮಂತ್ರಣ ಪತ್ರಿಕೆ
TV9 Web
| Updated By: ಶ್ರೀದೇವಿ ಕಳಸದ|

Updated on:Sep 13, 2022 | 12:27 PM

Share

Trending : ಭೂಪಾಲದಲ್ಲಿ ಹೀಗೊಂದು ವಿಚಿತ್ರ ಸಮಾರಂಭ ಆಯೋಜನೆಗೊಂಡಿದೆ. ಬಹುಕಾಲದಿಂದ ವೈವಾಹಿಕ ವ್ಯಾಜ್ಯಗಳಲ್ಲಿ ಸಿಲುಕಿದ್ದ 18 ಪುರುಷರಿಗೆ ವಿಚ್ಛೇದನ ದೊರೆತ ಹಿನ್ನೆಲೆಯಲ್ಲಿ, ಸ್ವಯಂ ಸೇವಾ ಸಂಸ್ಥೆಯೊಂದು ಈ ಸಮಾರಂಭವನ್ನು ಆಯೋಜಿಸಿದೆ. ಟೈಮ್ಸ್ ಆಫ್​ ಇಂಡಿಯಾದ ವರದಿ ಪ್ರಕಾರ, ಈ ಎನ್​ಜಿಒದ ಸದಸ್ಯರಾದ ಝಕಿ ಅಹಮ್ಮದ್, ‘ವಿಚ್ಛೇದನ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಪುರುಷರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಬಲಿಪಶುಗಳಾಗುತ್ತಾರೆ. ಆದರೆ ಪುರುಷರಿಗೂ ಆರ್ಥಿಕ, ಮಾನಸಿಕ, ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಅತ್ಯಗತ್ಯ. ಹಾಗಾಗಿ ಇಷ್ಟು ದಿನಗಳ ಈ ಘೋರ ಹೋರಾಟದಿಂದ ಮುಕ್ತರಾಗಿ ಈ ಕ್ಷಣಗಳನ್ನು ಪುರುಷರು ಸಂಭ್ರಮಿಸುವಂತಾಗಲಿ ಎಂಬ ಆಶಯದಿಂದ ಈ ಸಮಾರಂಭ ಆಯೋಜಿಸಲಾಗಿದೆ’ ಎಂದಿದ್ದಾರೆ.

ಆಮಂತ್ರಣದ ಶೀರ್ಷಿಕೆಯೇ ಹೌಹಾರುವಂತಿದೆ! ಹಮ್ಮಿಕೊಂಡ ಕಾರ್ಯಕ್ರಮಗಳು ಹುಬ್ಬೇರಿಸುವಂತಿವೆ. ಹೊಸ ಜೀವನಕ್ಕೆ ಪ್ರವೇಶಿಸುವ ಮುನ್ನ ಪ್ರತಿಜ್ಞಾ ವಿಧಿ ಸ್ವೀಕರಿಸುವ ವಿಷಯವಂತೂ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ;  ‘ಪುರುಷರ ಆತ್ಮಸಾಕ್ಷಿಯನ್ನು ಪವಿತ್ರಗೊಳಿಸುವ ಸಮಾರಂಭ’.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನಮ್ಮ ಸಂಸ್ಥೆಯು, ಇಂಥ ಪ್ರಕರಣಗಳಲ್ಲಿ ಸಿಲುಕಿದ ಪುರುಷರಿಗೆ ಬೆಂಬಲ ನೀಡಿ ಈ ಪ್ರಕರಣಗಳ ವಿರುದ್ಧ ಹೋರಾಡುತ್ತ ಬಂದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ 18 ಪುರುಷರು ಕಷ್ಟದಾಯಕವಾದ ವೈವಾಹಿಕ ಜೀವನದಿಂದ ಹೊರಬಂದಿದ್ದಾರೆ. ಅವರನ್ನು ನಮ್ಮ ಸಹಾಯವಾಣಿಯ ಮೂಲಕ ಮಾನಸಿಕವಾಗಿ ಸದೃಢಗೊಳಿಸುತ್ತ ಬಂದಿದ್ದೇವೆ. ಹಾಗಾಗಿ ಈಗ ಅವರೆಲ್ಲರನ್ನೂ ಒಟ್ಟುಗೂಡಿಸಿ ಅವರ ಮುಂದಿನ ಬದುಕು ಆಶಾದಾಯಕದೆಡೆ ಹೊರಳಿಕೊಳ್ಳಲಿ ಎಂಬ ಆಶಯದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಅಲ್ಲದೆ, ಮದುವೆಯ ಹೊರತಾಗಿಯೂ ಪ್ರತಿಯೊಬ್ಬರಿಗೂ ಬದುಕಿದೆ. ಸ್ವಯಂಪ್ರೀತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಬದುಕಿನ ಬಗ್ಗೆ ಭರವಸೆ ಮೂಡಿಸಿಕೊಳ್ಳಬೇಕು ಎಂಬ ಅರಿವು ಮತ್ತು ಉತ್ಸಾಹ ತುಂಬುವ ಆಲೋಚನೆ ನಮ್ಮ ಈ ಸಮಾರಂಭದ್ದು’ ಎಂದಿದ್ದಾರೆ ಅಹಮ್ಮದ್.

ತನಗೆ ವಿಚ್ಛೇದನ ಬೇಕೆಂದು ಈ ಎನ್​ಜಿಒ ಸಹಾಯ ಕೋರಿ ಬಂದ ಜೋಡಿಯೊಂದು ಮದುವೆಯಾಗಿ ಒಂದು ದಿನ ಕಳೆದಿತ್ತಷ್ಟೆ. ಇನ್ನೊಂದು ಜೋಡಿ ಮದುವೆಯಾಗಿ ಕೇವಲ 30 ದಿನಗಳು ಕಳೆದಿದ್ದವು, ಅವರೂ ವಿಚ್ಛೇದನದ ನಿರ್ಧಾರಕ್ಕೆ ಬಂದಿದ್ದರು. ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಮತ್ತಿತರೇ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದ ಆರೋಪಗಳು ಈ ಹದಿನೆಂಟು ಜನರ ಮೇಲಿದ್ದವು. ಅಂತೂ ಅಷ್ಟೆಲ್ಲಾ ಹೋರಾಟ ಮಾಡಿ ವಿಚ್ಛೇದನ ಪಡೆದು ಬದುಕಿನಲ್ಲಿ ಬಸವಳಿದ ಈ ಪುರುಷರನ್ನು ಸೇರಿಸಿ ಸೆ. 18ರಂದು ಖಾಸಗಿಯಾಗಿ ಸಂಭ್ರಮಾಚರಣೆ ಮಾಡಬೇಕೆಂದು ಸಂಸ್ಥೆಯು ಯೋಚಿಸಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿತು. ಅಷ್ಟರಲ್ಲಿ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣವೆಂಬ ಸಾಗರದಲ್ಲಿ ಬಿದ್ದುಬಿಟ್ಟಿತು! ಮುಂದೆ ಕೇಳಬೇಕೆ?

ಕಾರ್ಯಕ್ರಮದ ಆಹ್ವಾನ ಪತ್ರಿಕೆಯು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಭಯಂಕರ ಜಾಗ್ರತರಾಗಿದ್ದಾರೆ! ಕೆಲವರು ಇದನ್ನು ನಕಲಿ ಎಂದಿದ್ದಾರೆ. ಇನ್ನೂ ಕೆಲವರು, ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸಾಚಾರದ ವಿರುದ್ಧ ಇರುವ ಕಾನೂನುಗಳಿಗೆ ಭಾರತೀಯ ಪುರುಷರು ಹೇಗೆ ಬಲುಪಶುಗಳಾಗುತ್ತಿದ್ದಾರೆ ಎನ್ನುವುದರ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈ ಆಮಂತ್ರಣವನ್ನು ಹಂಚಿಕೊಂಡ ಟ್ವಿಟರ್ ಖಾತೆದಾರರೊಬ್ಬರು, ‘ಓಹ್ ದೇವರೇ! ವಿಚ್ಚೇದನ ಸಮಾರಂಭ! ಇದು ನಿಜವಾ? ಸಂಸ್ಥೆಯ ಹೆಸರು ಬೇರೆ ಇದೆ; ‘BHAI Welfare Society’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಮದುವೆ ಎನ್ನುವುದು …. ; ಬಿಟ್ಟ ಸ್ಥಳವನ್ನು ನೀವೇ ತುಂಬಿಕೊಳ್ಳಿ!

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:08 pm, Tue, 13 September 22

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ