ಹೌದಾ! ಗ್ಯಾರಂಟಿ ಇಲ್ಲದೆಯೇ ಮಹಿಳೆಯರಿಗೆ SBI 25 ಲಕ್ಷ ರೂಪಾಯಿ ಸಾಲ ಕೊಡುತ್ತಿದೆಯಂತೆ! ಏನಿದರ ಲೆಕ್ಕಾಚಾರ?

SBI Loan Fact Check: ನಿಮ್ಮ ಮೊಬೈಲ್‌ಗೆ ಅಥವಾ, ಈಮೇಲ್‌ ಗೆ ಬರುವ ಲಿಂಕ್‌ಗಳನ್ನು ಒತ್ತುವ ಮುನ್ನ ಎಚ್ಚರ, ಆ ಲಿಂಕ್ ಅನ್ನು ಓಪನ್ ಮಾಡಬೇಡಿ. ಇಲ್ಲದಿದ್ದರೆ ನಿಮಗೆ ಭ್ರಮನಿರಸ, ಭಾರಿ ಲುಕ್ಸಾನು ಆಗುವ ಅಪಾಯವಿದೆ ಎಂದು PIB ಎಚ್ಚರಿಸಿದೆ.

ಹೌದಾ! ಗ್ಯಾರಂಟಿ ಇಲ್ಲದೆಯೇ ಮಹಿಳೆಯರಿಗೆ SBI 25 ಲಕ್ಷ ರೂಪಾಯಿ ಸಾಲ ಕೊಡುತ್ತಿದೆಯಂತೆ! ಏನಿದರ ಲೆಕ್ಕಾಚಾರ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 12, 2022 | 8:14 PM

ಕೇಂದ್ರ ಸರ್ಕಾರವು ಕಡುಬಡವರಿಗೆ, ನಿಸ್ಸಹಾಯಕರಿಗೆ ಆರ್ಥಿಕವಾಗಿ ನೆರವಾಗಲು ಅನೇಕ ಸರ್ಕಾರಿ ಯೋಜನೆಗಳನ್ನು ಕಾಲಕಾಲಕ್ಕೆ ಜಾರಿಗೊಳಿಸುತ್ತಿದೆ. ದೇಶ ಜನರಿಗೆ ಆರ್ಥಿಕವಾಗಿ ನ ನೆರವಾಗುವುದು ಇದರ ನಿಜಾರ್ಥ. ವಿವಿಧ ಸ್ಕೀಮ್‌ಗಳನ್ನು ರೂಪಿಸಿ, ಆರ್ಥಿಕ ಸ್ವಾಲಂಬಿಯಾಗಲು, ಹಣ ಸಂಪಾದಿಸುವ ಮಾರ್ಗಗಳನ್ನು ಸೃಷ್ಟಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್ ಅಪರಾಧಗಳನ್ನು ಎಸಗುತ್ತಾ, ಜನರಿಗೆ ಆರ್ಥಿಕ ಸಹಾಯ ಮಾಡಲು ಸಂಬಂಧಿಸಿದಂತೆ ಸರ್ಕಾರದ ನಾನಾ ಯೋಜನೆಗಳ ಹೆಸರಿನಲ್ಲಿ ಅನೇಕ ರೀತಿಯ ಸುಳ್ಳು, ವಂಚನೆಗಳ ಅಪ್ರಚಾರಗಳನ್ನು ಮಾಡುತ್ತಿದ್ದಾರೆ.

ಇದರಿಂದ ಈ ಪ್ರಕರಣದಲ್ಲಿ ಮಹಿಳೆಯರು ತುಂಬಾ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ. ಸರ್ಕಾರದ ‘ನಾರಿ ಶಕ್ತಿ ಯೋಜನಾ’ ಅಡಿಯಲ್ಲಿ, SBI ದೇಶದ ಮಹಿಳೆಯರಿಗೆ ಗ್ಯಾರೆಂಟಿ ಇಲ್ಲದೆ, ಬಡ್ಡಿ ಇಲ್ಲದೆ ರೂ. 25 ಲಕ್ಷ ಸಾಲವನ್ನು ನೀಡುತ್ತಿದೆ ಎಂದು ಸುದ್ದಿ ಇದೀಗ ವೈರಲ್ ಆಗಿದೆ. ವಿವಿಧ ಯೂಟ್ಯೂಬ್ ಚಾನೆಲ್‌ಗಳು ಸಹ ಸರ್ಕಾರಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿವೆ.

ಇದರಲ್ಲಿ ನಿಜವೆಷ್ಟು..? ವೈರಲ್ ಆಗುತ್ತಿರುವ ಇಂತಹ ಸುದ್ದಿಗಳಲ್ಲಿ ಯಾವುದೇ ಸತ್ಯವಿಲ್ಲ. ಎಲ್ಲವೂ ಸುಳ್ಳು ಸುಳ್ಳೆಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಮೂಲಕ ಸ್ಪಷ್ಟಪಡಿಸಿದೆ. ಈ ಬಗ್ಗೆ ಪಿಐಬಿ ಟ್ವಿಟ್‌ ಮಾಡಿದೆ. ಇಂತಹ ಕೃತ್ರಿಕ ಸುದ್ದಿಗಳನ್ನು ಯಾವುದೇ ಪರಿಸ್ಥಿತಿಯಲ್ಲಿ ನಂಬಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ. ಇಂತಹ ಫೇಕ್ ಸ್ಕೀಮ್‌ಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳೀ, ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳಿ ಎಂದು ಪಿಐಬಿ ಸೂಚಿಸಿದೆ.

ನಿಮ್ಮ ಮೊಬೈಲ್‌ಗೆ ಅಥವಾ, ಈಮೇಲ್‌ ಗೆ ಬರುವ ಲಿಂಕ್‌ಗಳನ್ನು ಒತ್ತುವ ಮುನ್ನ ಎಚ್ಚರ, ಆ ಲಿಂಕ್ ಅನ್ನು ಓಪನ್ ಮಾಡಬೇಡಿ. ಇಲ್ಲದಿದ್ದರೆ ನಿಮಗೆ ಭ್ರಮನಿರಸ, ಭಾರಿ ಲುಕ್ಸಾನು ಆಗುವ ಅಪಾಯವಿದೆ ಎಂದು ಎಚ್ಚರಿಸಿದೆ. ಇದೇ ರೀತಿಯ ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಜನರ ಜೊತೆ ಪಿಐಬಿ ತನ್ನ ಆತಂಕವನ್ನು ತೋಡಿಕೊಂಡಿದೆ. ಈ ಕುರಿತಾದ PIB ಟ್ವೀಟ್ ಇಲ್ಲಿದೆ:

Published On - 8:12 pm, Mon, 12 September 22

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?