Viral: ಪ್ರವಾಹ ಟೀಕೆಗಳ ನಂತರ ಟ್ರೋಲ್ಗೆ ಗುರಿಯಾದ ‘ಬೆಂಗಳೂರು ನಗರದ ಸ್ಥಿತಿ’
ಬೆಂಗಳೂರು ನಗರ ಪ್ರವಾಹವನ್ನು ಎದುರಿಸಿದ ನಂತರ ಅರಂಭವಾದ ಟೀಕೆಗಳ ಬೆನ್ನಲ್ಲೆ ಮೀಮ್‌ಗಳು ಆರಂಭಗೊಂಡಿವೆ. ಮೀಮ್ ವಿಡಿಯೋ ಇಲ್ಲಿದೆ ನೋಡಿ..
ಬೆಂಗಳೂರು: ಸುರಿದ ಅಬ್ಬದ ಮಳೆಗೆ ಇಡೀ ನಗರದ ಜನರು ತತ್ತರಿಸಿದ್ದು, ಒಂದಷ್ಟು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿತ್ತು. ಈ ಘಟನೆಗೆ ರಾಜಕಾಲವೆ, ಕೆರೆಗೆಳ ಒತ್ತುವರಿಯೇ ಕಾರಣ ಎಂಬ ಟೀಕೆಗಳ ನಡುವೆ ನಗರದ ಸದ್ಯದ ಪರಿಸ್ಥಿತಿ ಬಗ್ಗೆ ಟ್ರೋಲ್ಗಳು ಆಗಲು ಪ್ರಾರಂಭವಾಗಿವೆ. ‘ಬೆಂಗಳೂರಿನಲ್ಲಿ ಒಂದು ದಿನ’ ಎಂದು ಬರೆದು ಎಡಿಟ್ ಮಾಡಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನಿಮಗೆ ಸಾಕಷ್ಟು ನಗು ತರಲಿದ್ದು, ಒಂದಷ್ಟು ಮಂದಿ ಕಾಮೆಂಟ್ಗಳನ್ನು ಕೂಡ ಮಾಡಿದ್ದಾರೆ.
ಎರಡನೆಯದು ಒರಾಂಗುಟಾನ್ ತನ್ನ ತಲೆಯನ್ನು ಅಲ್ಲಾಡಿಸುವುದನ್ನು ತೋರಿಸಲಾಗಿದೆ, ಅದರಲ್ಲಿ “ಇನ್ನೊಬ್ಬ ಬೆಂಗಳೂರಿನ ವ್ಯಕ್ತಿ ತನ್ನ ಸ್ಟಾರ್ಟ್-ಅಪ್ ಯೋಜನೆಯನ್ನು ವಿವರಿಸುತ್ತಾನೆ” ಎಂದು ಶೀರ್ಷಿಕೆ ಬರೆಯಲಾಗಿದೆ, ಮೂರನೆಯ ವಿಡಿಯೋದಲ್ಲಿ ಕೋತಿಯೊಂದು ಲ್ಯಾಪ್ಟಾಪ್ ಒತ್ತುವುದನ್ನು ಕಾಣಬಹುದು. ಇದರಲ್ಲಿ “ಕಚೇರಿ ಫೈಲ್‌ನಲ್ಲಿ ಕನ್ನಡದ ಬದಲಾಗಿ Kannad ಎಂದು ಟೈಪ್ ಮಾಡಿದ ಬೆಂಗಳೂರಲ್ಲದ ವ್ಯಕ್ತಿ” ಎಂದು ಶೀರ್ಷಿಕೆ ನೀಡಲಾಗಿದೆ.
ವಿಡಿಯೋಗೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರೊಬ್ಬರು, “ಈ ದಿನಗಳಲ್ಲಿ ಮೀಮ್‌ಗಳು ಏಕೆ ತುಂಬಾ ಸಂಬಂಧಿತವಾಗಿವೆ?” ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, “ಬೆಂಗಳೂರು ಜನರು ತಮ್ಮ ಮಕ್ಕಳಿಗೆ ಪ್ರತಿದಿನ ಕಚೇರಿಗೆ ಹೋಗಲು ನದಿಯನ್ನು ಹೇಗೆ ದಾಟುತ್ತಿದ್ದರು ಎಂದು ಹೇಳಲಿದ್ದಾರೆ” ಎಂದಿದ್ದಾರೆ. ಮಗದೊಬ್ಬರು, “ಬೆಂಗಳೂರಿನಲ್ಲಿ ಕೆಲಸ ಪಡೆಯಲು ಕೋಡಿಂಗ್ ಸಾಕಾಗುವುದಿಲ್ಲ. ಈಜು ಗೊತ್ತಿರಬೇಕು” ಎಂದರೆ ಚೇಂಜ್‌ಮೇಕರ್ಸ್ ಆಫ್ ಕನಕಪುರ ರೋಡ್ ಎಂಬ ಟ್ವಿಟರ್ ಪುಟದಿಂದ ಟೈಟಾನಿಕ್ ಸಿನಿಮಾದ ತುಣಕನ್ನು ಎಡಿಟ್ ಮಾಡಿ ಹಂಚಕೊಳ್ಳಲಾಗಿದೆ.
Bangalore people gonna tell their kids, how they used to cross river to go to office everyday.
— Vanshika Garg (@vanshika_garg17) August 30, 2022
ಟೈಟಾನಿಕ್ ಚಿತ್ರದ ಮುಂದಿನ ಭಾಗವನ್ನು ಚಿತ್ರಿಸಲು ವಾಜರಹಳ್ಳಿ ನೂರಡಿ ರಸ್ತೆಯನ್ನು ಆಯ್ಕೆ ಮಾಡಲಾಗಿದ್ದು ಚಿತ್ರೀಕರಣವನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಚಿತ್ರದ ತಾಂತ್ರಿಕ ತಂಡ ಇದೀಗ ತಾನೇ ಪ್ರಕಟಿಸಿದೆ ಕನಕಪುರ ರಸ್ತೆಯ ವಾರ್ಡ್ 198 ನ್ನು ಇದಕ್ಕಾಗಿ ಆಯ್ಕೆ ಮಾಡಿರುವುದು ನಮಗೆಲ್ಲ ಅತ್ಯಂತ ಹೆಮ್ಮೆಯ ವಿಷಯ. (1/3) pic.twitter.com/KLLNEI2eME
— ChangeMakers of Kanakapura Road (CMKR) ® (@_kanakapuraroad) July 10, 2022
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 pm, Wed, 14 September 22