Viral Video : ಕಾರ್ ರಿಪೇರಿ ಮಾಡುತ್ತಿದ್ದ ಈ ವ್ಯಕ್ತಿ ಕ್ಷಣದಲ್ಲೇ ನುಜ್ಜುಗುಜ್ಜು
Accident : ಇದ್ದಕ್ಕಿದ್ದಂತೆ ಕಾರ್ ಮುಂದೆ ಚಲಿಸಿಬಿಡುತ್ತದೆ. ಹಿಂದೆ ಶಟರ್, ಮುಂದೆ ಕಾರ್, ನಡುವೆ ಈ ವ್ಯಕ್ತಿ. 8 ಮಿಲಿಯನ್ ಜನರು ವೀಕ್ಷಿಸಿದ ಈ ವಿಡಿಯೋ ಎಲ್ಲರಲ್ಲೂ ಎಚ್ಚರಿಕೆ ಹುಟ್ಟಿಸುವಂಥದ್ದು.
Viral Video : ರಿಪೇರಿ ಎನ್ನುವುದು ತಾಂತ್ರಿಕ ಪರಿಣತಿಯನ್ನು ನಿರೀಕ್ಷಿಸುತ್ತದೆ. ಅದರಲ್ಲೂ ವಾಹನಗಳನ್ನು ಸ್ವತಃ ರಿಪೇರಿ ಮಾಡಲು ಸಾಕಷ್ಟು ತಿಳಿವಳಿಕೆ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಈ ವಿಡಿಯೋದಲ್ಲಿ ಆದ ಗತಿ ಉಂಟಾಗುತ್ತದೆ. ಇಲ್ಲೊಂದು ಕಾರ್ ಸಮಸ್ಯೆಯಾಗಿದೆ. ಕಾರ್ ಶುರು ಮಾಡಿಟ್ಟು ಬಾನೆಟ್ ಓಪನ್ ಮಾಡಿದ್ದಾರೆ ಈ ವ್ಯಕ್ತಿ. ಕೆಲ ಕ್ಷಣಗಳಲ್ಲಿಯೇ ಕಾರ್ ಮುಂದಕ್ಕೆ ಚಲಿಸಿ ಹಿಂದಿದ್ದ ಶಟರ್ಗೆ ಢಿಕ್ಕಿ ಹೊಡೆದಿದೆ, ಶಟರ್ ಮತ್ತು ಕಾರಿನ ಮಧ್ಯೆ ಈ ಮನುಷ್ಯ ನುಜ್ಜುಗುಜ್ಜಾಗಿ ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡಿದ ಎಲ್ಲರಲ್ಲೂ ಭೀತಿ ಹುಟ್ಟಿಸಿದೆ. ಈ ವ್ಯಕ್ತಿ ಮೆಕ್ಯಾನಿಕ್ ಹೌದೋ ಅಲ್ಲವೋ ಎಂಬ ಬಗ್ಗೆ ನೆಟ್ಟಿಗರಿಗೆ ಅನುಮಾನ ಉಂಟಾಗಿದೆ. ಆದರೆ ನಡೆದ ಘಟನೆಯನ್ನು ಅವಲೋಕಿಸಿದಾಗ ಈ ಮೆಕ್ಯಾನಿಕ್ ಇರಲಿಕ್ಕಿಲ್ಲ ಎಂದೆನ್ನಿಸುತ್ತದೆ. ಈ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಸಾಧ್ಯತೆ ಖಂಡಿತ ಇದೆ.
#WARNING If an automatic vehicle breaks down, never stand in front of the vehicle. Please warn your friends and relatives. Share this message as an example. pic.twitter.com/P2OPQDXgvg
ಇದನ್ನೂ ಓದಿ— Deepak.Prabhu/दीपक प्रभू (@ragiing_bull) September 12, 2022
ದೀಪಕ್ ಪ್ರಭು ಎಂಬುವವರ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ‘ಆಟೋಮ್ಯಾಟಿಕ್ ಕಾರ್ ಕೆಟ್ಟುಹೋದಾಗ ಅದರ ಮುಂದೆ ದಯವಿಟ್ಟು ನಿಲ್ಲಬೇಡಿ. ಈ ಬಗ್ಗೆ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳಿಗೆ ಎಚ್ಚರಿಕೆ ನೀಡಿ, ಈ ಘಟನೆಯನ್ನು ಉದಾಹರಿಸಿ’ ಎಂದಿದ್ದಾರೆ ಪ್ರಭು. ಸುಮಾರು 8 ಮಿಲಿಯನ್ ವೀಕ್ಷಕರು ಈ ವಿಡಿಯೋ ನೋಡಿದ್ದಾರೆ. ರೀಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಒಬ್ಬ ಟ್ವಿಟರ್ ಖಾತೆದಾರರು, ‘ಈ ಕಾರು ಆಟೋಮ್ಯಾಟಿಕ್ ಅಲ್ಲ, ಮ್ಯಾನುಯೆಲ್. ಅನೇಕರು ಮ್ಯಾನುಯೆಲ್ ಕಾರುಗಳನ್ನು ಒಂದನೇ ಗೇರ್ನಲ್ಲಿಟ್ಟು ಹ್ಯಾಂಡ್ ಬ್ರೇಕ್ ಹಾಕದೆ ಹಾಗೇ ನಿಲ್ಲಿಸಿರುತ್ತಾರೆ. ನಂತರ ಕಾರು ಗೇರ್ನಲ್ಲಿದೆ ಎಂಬುದನ್ನು ಮರೆತು ಕಾರ್ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಾರೆ. ಆಗ ಇಂಥ ಅವಘಡ ಸಂಭವಿಸುತ್ತದೆ. ಇನ್ನು ಎಲ್ಲಾ ಆಧುನಿಕ ಆಟೋಮ್ಯಾಟಿಕ್ ಕಾರುಗಳಲ್ಲಿ ಇಂಥ ದುರ್ಘಟನೆಗಳು ಉಂಟಾಗದಂಥ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸಲಾಗಿರುತ್ತದೆ’ ಎಂದಿದ್ದಾರೆ.
ಈ ಅಪಘಾತಕ್ಕೆ ಕಾರಣವಾಗಿರುವ ತಾಂತ್ರಿಕ ಸಮಸ್ಯೆಗಳ ಸಾಧ್ಯತೆಗಳ ಬಗ್ಗೆ ವಿಮರ್ಶಿಸುತ್ತಾ, ತಮ್ಮ ಅಭಿಪ್ರಾಯಗಳನ್ನು ಅನೇಕರು ಹಂಚಿಕೊಂಡಿದ್ದಾರೆ.
ನೂರಾರು ಆಲೋಚನೆಗಳನ್ನು ತಲೆಯಲ್ಲಿ ತುಂಬಿಕೊಂಡು ಓಡಾಡುವ ಇಂದಿನ ಕಾಲದವರು ಇಂಥ ವಿಷಯವಾಗಿ ಬಹಳೇ ಎಚ್ಚರಿಕೆಯಿಂದ ಇರಬೇಕು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:55 am, Thu, 15 September 22