ಸಿಕಂದರಾಬಾದ್ ವಿಶಾಖಪಟ್ಟಣಂ ರೈಲು ಪ್ರಯಾಣ ಮಧ್ಯೆ ಮಹಿಳೆಗೆ ಹೆರಿಗೆಗೆ ಸಹಾಯ ಮಾಡಿದ ವೈದ್ಯಕೀಯ ವಿದ್ಯಾರ್ಥಿನಿ
ಸ್ವಾತಿ ಪ್ರಕಾರ, ಮುಂಜಾನೆ 3:30 ರ ಸುಮಾರಿಗೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಮುಂಜಾನೆ 4:40 ಕ್ಕೆ ಯಾರೋ ವೈದ್ಯರಿದ್ದಾರೆಯೇ ಎಂದು ಕೂಗಿ ಕರೆದರು. ಅಷ್ಟೊತ್ತಿಗೆ ನಾನು ಆಕೆಗೆ ಸಹಾಯ ಮಾಡಲು ಮುಂದಾದೆ.
ಮಂಗಳವಾರ ಎಕ್ಸ್‌ಪ್ರೆಸ್ ರೈಲಿನಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬಳು ಹೆರಿಗೆಗೆ ಸಹಾಯ ಮಾಡಿದ್ದಾಳೆ.. ಸಿಕಂದರಾಬಾದ್-ವಿಶಾಖಪಟ್ಟಣಂ ದುರಂತೊ ಎಕ್ಸ್‌ಪ್ರೆಸ್‌ನಲ್ಲಿ (Secunderabad-Visakhapatnam Duronto Express) ಇಬ್ಬರೂ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವೈದ್ಯಕೀಯ ವಿದ್ಯಾರ್ಥಿನಿ ನರಸರಾವ್‌ಪೇಟೆಯ ಕೆ ಸ್ವಾತಿ ರೆಡ್ಡಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವಳು. ಈಕೆ ಗೀತಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಜಿಮ್ಸ್) ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದಾಳೆ. ತನ್ನ ಪತಿಯೊಂದಿಗೆ ತಮ್ಮ ಹುಟ್ಟೂರಾದ ಶ್ರೀಕಾಕುಳಂಗೆ ಹೋಗುತ್ತಿದ್ದ 28 ವರ್ಷದ ಗರ್ಭಿಣಿಯ ಅದೇ ಬೋಗಿಯಲ್ಲಿ ಸ್ವಾತಿ ಪ್ರಯಾಣಿಸುತ್ತಿದ್ದಳು.
ಸ್ವಾತಿ ಪ್ರಕಾರ, ಮುಂಜಾನೆ 3:30 ರ ಸುಮಾರಿಗೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಮುಂಜಾನೆ 4:40 ಕ್ಕೆ ಯಾರೋ ವೈದ್ಯರಿದ್ದಾರೆಯೇ ಎಂದು ಕೂಗಿ ಕರೆದರು. ಅಷ್ಟೊತ್ತಿಗೆ ನಾನು ಆಕೆಗೆ ಸಹಾಯ ಮಾಡಲು ಮುಂದಾದೆ. ನಾನು ಇಷ್ಟರವರೆಗೆ ಹೆರಿಗೆ ಮಾಡಿಸಿರಲಿಲ್ಲ. ಆಸ್ಪತ್ರೆಯಲ್ಲಿ ಪ್ರೊಫೆಸರ್ ಜತೆ ಹೆರಿಗೆಗೆ ಸಹಾಯ ಮಾಡಿದ್ದೆ. ಹಾಗಾಗಿ ಹೇಗಪ್ಪಾ ಈ ಮಹಿಳೆಗೆ ಹೆರಿಗೆ ಮಾಡಿಸುವುದು ಎಂದು ಚಿಂತಿತಳಾಗಿದ್ದೆ ಎಂದು ಸ್ವಾತಿ ಹೇಳಿದ್ದಾಳೆ.
45 ನಿಮಿಷಗಳ ಕಾಲ ಮಾಸು(placenta) ಹೊರಬರದ ಕಾರಣ ನಾನು ಆತಂಕಗೊಂಡಿದ್ದೆ. ಹೆದರಿಕೆಯೂ ಆಯಿತು. ನ ಮಗು ಹೊರಬಂದಾಗ ನನಗೆ ಸಮಾಧಾನವಾಯಿತು ಎಂದಿದ್ದಾರೆ ಸ್ವಾತಿ.
ರೈಲು ಅಣ್ಣಾವರಂ ಸಮೀಪ ತಲುಪುತ್ತಿದ್ದಂಚೆ ಬೆಳಗ್ಗೆ 5:35ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಲಾಯಿತು. ನವಜಾತ ಶಿಶುಗಳನ್ನು ಬೆಚ್ಚಗಿನ ಸ್ಥಿತಿಯಲ್ಲಿ ಇಡಬೇಕು. ಆದರೆ ಅವರು ಪ್ರಯಾಣಿಸುತ್ತಿದ್ದ ಕೋಚ್ ಹವಾನಿಯಂತ್ರಿತವಾಗಿತ್ತು. ನವಜಾತ ಶಿಶುಗೆ ಸಾಕಷ್ಟು ಉಷ್ಣತೆಯನ್ನು ಸಿಗುವಂತಾಗಲು ಪ್ರಯಾಣಿಕರು ಸಹಾಯವನ್ನು ಮಾಡಿದರು. ಮಗುವನ್ನು ಬೆಚ್ಚಗಿಡಲು ತಮ್ಮ ಕಂಬಳಿಗಳನ್ನು ನೀಡಿದರು. ಅನೇಕ ಪ್ರಯಾಣಿಕರು ಹೆರಿಗೆ ವೇಳೆ ತನಗೆ ಸಹಾಯ ಮಾಡಿದ್ದು, ನಾನು ಪ್ರಯಾಣಿಸುತ್ತಿದ್ದ ಬೋಗಿಯನ್ನು ತಾತ್ಕಾಲಿಕ ಡೆಲಿವರಿ ರೂಂ ಆಗಿ ಮಾಡಿದರು.
ಮಗು ಜನಿಸಿದ ನಂತರ, ರೈಲಿಗೆ ವಿಜಯವಾಡ ಮತ್ತು ವಿಶಾಖಪಟ್ಟಣಂ ನಡುವೆ ಯಾವುದೇ ನಿಲುಗಡೆ ಇಲ್ಲದ ಕಾರಣ ಒಂದೂವರೆ ಗಂಟೆಗಳ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅನಕಪಲ್ಲಿ ನಿಲ್ದಾಣ ತಲುಪಿದ ನಂತರ ಅಲ್ಲಿ ಸಿದ್ಧವಾಗಿದ್ದ ಆಂಬುಲೆನ್ಸ್‌ನಲ್ಲಿ ತಾಯಿ ಮತ್ತು ನವಜಾತ ಶಿಶುವನ್ನು ಎನ್‌ಟಿಆರ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯ ವರೆಗೂ ಮಹಿಳೆಯ ಜತೆಗೆ ಹೋಗಿದ್ದ ಸ್ವಾತಿ ಅವಧಿಪೂರ್ವ ಹೆರಿಗೆ ಬಗ್ಗೆ ಅಲ್ಲಿನ ವೈದ್ಯರಿಗೆ ತಿಳಿಸಿದ್ದಾರೆ. ಮಗುವನ್ನು ಇನ್ ಕ್ಯುಬೇಟರ್ ನಲ್ಲಿರಿಸಲಾಗಿದೆ