AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಈಗ ಈ ಪುಟ್ಟಣ್ಣನ ಟೀಚರ್​ ಏನು ಹೇಳುತ್ತಿದ್ದಾರೆ?

Teacher and Student : ನಿನ್ನೆಯಷ್ಟೇ ವೈರಲ್ ಆದ ಈ ವಿಡಿಯೋ ನೋಡಿ, ನಮಗೂ ಇಂಥಾ ಟೀಚರ್ ಸಿಗಬಾರದೆ ಅಂತ ಮಿಶ್ರಭಾವ ವ್ಯಕ್ತಪಡಿಸಿದ್ದೀರಿ. ಉತ್ತರಪ್ರದೇಶದಿಂದ ಈ ವಿಶಾಖಾ ಟೀಚರ್ ಇದೀಗ​ ಪ್ರತಿಕ್ರಿಯಿಸಿದ್ದಾರೆ ನೋಡಿ, ಕೇಳಿ.

Viral Video : ಈಗ ಈ ಪುಟ್ಟಣ್ಣನ ಟೀಚರ್​ ಏನು ಹೇಳುತ್ತಿದ್ದಾರೆ?
ವೈರಲ್ ಆದನಂತರ ಪ್ರತಿಕ್ರಿಯಿಸಿದ ಶಿಕ್ಷಕಿ
TV9 Web
| Updated By: ಶ್ರೀದೇವಿ ಕಳಸದ|

Updated on:Sep 14, 2022 | 4:09 PM

Share

Viral Video : ಸಾಕು ಮಾಡು ನಿನ್ನ ಹುಚ್ಚಾಟಗಳನ್ನು. ಎಷ್ಟು ಸಲ ಹೇಳಿದರೂ ನೀನು ಕೇಳುವುದೇ ಇಲ್ಲವಲ್ಲ. ನನಗೆ ಕೋಪ ಬರುತ್ತಿದೆ. ನಿನ್ನೊಂದಿಗೆ ನಾನು ಮಾತನಾಡುವುದೇ ಇಲ್ಲ. ಹೀಗೆ ಟೀಚರ್ ಹೇಳಿದಾಗ ಯಾವ ಮಗುವಿಗೆ ದುಃಖವಾಗುವುದಿಲ್ಲ? ಆಗ ಮಗು ಕ್ಷಮೆ ಕೇಳದೆ ಬೇರೆ ಹಾದಿ ಇದೆಯೆ? ಕ್ಷಮೆ ಕೇಳಿದರೂ ಟೀಚರ್ ಮಣಿಯದಿದ್ದಾಗ ಏನು ಮಾಡಬೇಕು? ಏನು ಮಾಡಬೇಕೋ ಅದನ್ನೇ ಮಾಡಿ ಟೀಚರ್ ಮನಸ್ಸನ್ನು ಕರಗಿಸಿದ್ದಾನೆ ಈ ಪುಟ್ಟಣ್ಣ. ವೈರಲ್ ಆದ ಈ ಟೀಚರ್-ಸ್ಟೂಡೆಂಟ್​ ಜೋಡಿಯ ವಿಡಿಯೋ ಅನ್ನು ನಿನ್ನೆಯಷ್ಟೇ ನೀವು ನೋಡಿ ಮೆಚ್ಚಿದ್ದೀರಿ. ಇದೀಗ ಇದು ಮತ್ತಷ್ಟು ವೈರಲ್​ ಆಗಿರುವುದಲ್ಲದೆ, ಇದಕ್ಕೆ ಪ್ರತಿಯಾಗಿ ಪುಟ್ಟಣ್ಣನ ಟೀಚರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಯಾರು ಈ ಟೀಚರ್, ಯಾರು ಈ ಬಾಲಕ? ಎಂಬೆಲ್ಲ ಪ್ರಶ್ನೆಗಳು ನಿನ್ನೆಯಿಂದ ನಿಮ್ಮ ಮನಸ್ಸಿನಲ್ಲಿ ದಾಂಗುಡಿ ಇಟ್ಟಿರುತ್ತವೆ. ಉತ್ತರಪ್ರದೇಶದ ನೈನಿಯಲ್ಲಿರುವ ಸೇಠ್​ ಆನಂದರಾಮ್ ಜೈಪುರಿಯಾ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಇವರ ಹೆಸರು ವಿಶಾಖಾ ತ್ರಿಪಾಠಿ. ಈ ಟೀಚರ್​ ಅನ್ನು ತನ್ನ ಮುದ್ದು, ಮುತ್ತಿನಿಂದ ಜಗದ್ವ್ಯಾಪಿಯಾಗಿಸಿರುವ ಶಿಷ್ಯೋತ್ತಮನ ಹೆಸರು ಅಥರ್ವ.

ಇಂಡಿಯಾ ಟುಡೇ ವರದಿಯ ಪ್ರಕಾರ, ಮಕ್ಕಳಿಗಾಗಿ ಶಾಲೆಯಲ್ಲಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸಿದ ಸಂದರ್ಭದಲ್ಲಿ ವಿಶಾಖಾ ಸಹೋದ್ಯೋಗಿ ನಿಶಾ, ಈ ದೃಶ್ಯವನ್ನು ವಿಡಿಯೋ ಮಾಡಿ ದಾಖಲಿಸಿದ್ದಾರೆ.

ಕ್ಲಾಸಿನಲ್ಲಿ ಹೆಚ್ಚು ಗಲಾಟೆ ಮಾಡುವ ಹುಡುಗರ ಪೈಕಿ ಈ ಅಥರ್ವ ಕೂಡ ಒಬ್ಬನಂತೆ. ನಿನ್ನೆ ವೈರಲ್ ಆದ ಇವರಿಬ್ಬರ ವಿಡಿಯೋದಲ್ಲಿ, ‘ನೀನು ಬಹಳ ಗಲಾಟೆ ಮಾಡುತ್ತೀಯಾ. ಅದಕ್ಕೆ ನಾ ನಿನ್ನೊಂದಿಗೆ ಮಾತನಾಡುವುದಿಲ್ಲ’ ಎಂದು ಟೀಚರ್ ಹುಸಿಕೋಪ ಪ್ರದರ್ಶಿಸಿದ್ದರು. ಆದರೆ ಕಂಗಾಲಾದ ಅಥರ್ವ ಬಗೆಬಗೆಯಲ್ಲಿ ವಿನಂತಿಸಿಕೊಂಡು ಕ್ಷಮೆ ಕೇಳಿ, ಕೊನೆಗೆ ಏನೂ ದಾರಿ ಕಾಣದಾದಾಗ ಅವರನ್ನು ಅಪ್ಪಿ ಮುದ್ದು ಕೊಟ್ಟಿದ್ದ. ನಂತರವೂ ಟೀಚರ್​ಗೆ ಕೋಪ ನಟಿಸಲು ಸಾಧ್ಯವೆ?

ನಿನ್ನೆ ವೈರಲ್ ಆದ ಈ ವಿಡಿಯೋ ಮತ್ತೊಮ್ಮೆ ನೋಡಿ : ‘ಈ ಪಾಪಚ್ಚಿಯನ್ನು ಕ್ಷಮಿಸಿಬಿಡಿ ಟೀಚರ್’ ಎನ್ನುತ್ತಿದ್ದಾರೆ ನೆಟ್ಟಿಗರು

ಹೀಗೆ ತರಗತಿಯಲ್ಲಿ ಆಗಾಗ ಶಿಕ್ಷಕರು ವಿಡಿಯೋ ಮಾಡಿ ಪೋಷಕರೊಂದಿಗೆ ಹಂಚಿಕೊಳ್ಳುವ ಕ್ರಮ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಅದನ್ನು ಪೋಷಕರಿಗೆ ಕಳಿಸಿದಾಗ ಅವರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಹಾಗೆಯೇ ಟೀಚರ್​ಗಳೂ. ‘ಈ ವಿಡಿಯೋ ನನಗೆ ನಿಜಕ್ಕೂ ಇಷ್ಟವಾಯಿತು. ಆದ್ದರಿಂದ ನಾನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಅದು ವೈರಲ್ ಆಗಿಬಿಟ್ಟಿತು’ ಎಂದಿದ್ದಾರೆ ವಿಶಾಖಾ.

ಮಕ್ಕಳೊಂದಿಗೆ ಇಂಥ ವಿಡಿಯೋ ಮತ್ತಷ್ಟು ಮಾಡಿ ಟೀಚರ್, ಎನ್ನೋಣವೆ?

Published On - 3:51 pm, Wed, 14 September 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್