Viral Video : ‘ಈ ಪಾಪಚ್ಚಿಯನ್ನು ಕ್ಷಮಿಸಿಬಿಡಿ ಟೀಚರ್’ ಎನ್ನುತ್ತಿದ್ದಾರೆ ನೆಟ್ಟಿಗರು

Teacher and Kid : ಪದೇಪದೆ ಹೀಗೇ ಮಾಡುತ್ತೀಯಾ. ಒಮ್ಮೆ ಹೇಳಿದರೆ ನೀನು ಅರ್ಥವನ್ನೇ ಮಾಡಿಕೊಳ್ಳುವುದಿಲ್ಲ ಎಂದು ಟೀಚರಮ್ಮ ಗಲ್ಲ ಉಬ್ಬಿಸಿಕೊಂಡು ಕುಳಿತಿದ್ದಾರೆ. ಆಗ ಈ ಪುಟ್ಟಣ್ಣ ಏನು ಮಾಡುತ್ತಾನೆ? ಮುದ್ದಾದ ವಿಡಿಯೋ ನೋಡಿ.

Viral Video : ‘ಈ ಪಾಪಚ್ಚಿಯನ್ನು ಕ್ಷಮಿಸಿಬಿಡಿ ಟೀಚರ್’ ಎನ್ನುತ್ತಿದ್ದಾರೆ ನೆಟ್ಟಿಗರು
ನನ್ನ ಕ್ಷಮಿಸಿ ಟೀಚರ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 13, 2022 | 3:24 PM

Viral Video : ಆಗಷ್ಟೇ ಶಾಲೆಗೆ ಹೋಗಲು ಶುರು ಮಾಡಿದ ಪುಟ್ಟಮಕ್ಕಳಿಗೆ ಶಾಲೆಯಲ್ಲಿರುವ ಟೀಚರ್ ಅಮ್ಮನಂತೆಯೇ ಕಾಣುವುದು ಸಹಜ. ಸಾಕಷ್ಟು ಸಲ ಮನೆಗೆ ಬಂದು ಅಮ್ಮನಿಗೆ ಟೀಚರ್​ ಎನ್ನುವುದು, ಶಾಲೆಗೆ ಹೋಗಿ ಟೀಚರ್​ಗೆ ಅಮ್ಮನೆಂದು ಹೇಳುವುದನ್ನು ನೋಡಿರುತ್ತೀರಿ, ಅನುಭವಿಸಿರುತ್ತೀರಿ ಅಥವಾ ಕೇಳಿರುತ್ತೀರಿ. ಇದೊಂಥರಾ ಸ್ಥಿತ್ಯಂತರದ ಅವಧಿ. ಮನೆಯನ್ನು ಮನೆಯಲ್ಲಿಯೇ ಬಿಟ್ಟು, ಶಾಲೆಯನ್ನು ಶಾಲೆಯಲ್ಲೇ ಬಿಡಲಾಗದಂಥ ಪರಿಸ್ಥಿತಿ. ಹಾಗಾಗಿ ಆಗಾಗ ಮಕ್ಕಳ ವರ್ತನೆಯಲ್ಲಿ ಸಂದರ್ಭಕ್ಕನುಸಾರವಾಗಿ ಇಂಥ ಸಿಹಿಯಾದ ಗೊಂದಲ ವ್ಯಕ್ತವಾಗುತ್ತಿರುತ್ತದೆ. ಇದು ಮಗುವಿನ ಮುಗ್ಧತೆಯಲ್ಲದೆ ಬೇರೇನೂ ಅಲ್ಲ. ಹಾಗೆಯೇ ತನ್ನ ತಾಯಿತಂದೆಯಂತೆಯೇ ಶಿಕ್ಷಕರೂ ಕೂಡ ಎಂಬ ವಿಶ್ವಾಸದ ನೋಟ ಮತ್ತು ನಿರೀಕ್ಷೆಯೂ. ಈ ವಿಡಿಯೋ ಗಮನಿಸಿದರೆ ಸಾಕು ಈ ಬಗ್ಗೆ ನಿಮಗೆ ಸ್ಪಷ್ಟತೆ ಬರುತ್ತದೆ.

ಪಾಪ ಅಲ್ವಾ? ಈ ಪುಟ್ಟಣ್ಣ ಏನೋ ತಪ್ಪುಮಾಡಿದ್ದಾನೆ. ಟೀಚರ್​ಗೆ ಕೋಪ ಬಂದಿದೆ. ಇನ್ನೊಮ್ಮೆ ಹೀಗೆಲ್ಲ ಮಾಡಲ್ಲ ಕ್ಷಮಿಸಿ ಎಂದು ಕೇಳಿಕೊಂಡರೂ ಟೀಚರ್ ಮಾತ್ರ ಪುರಿಯಂತೆ ಗಲ್ಲ ಉಬ್ಬಿಸಿಕೊಂಡು ಕುಳಿತಿದ್ದಾರೆ.  ಅಸಹಾಯಕನಾದ ಪುಟ್ಟಣ್ಣನಿಗೆ ಕಣ್ಣುಗಳು ಉಕ್ಕುತ್ತಿವೆ. ಎದುರಿಗಿರುವವರು ಟೀಚರೋ ಅಮ್ಮನೋ ಎಂಬ ಗೊಂದಲ ಉಂಟಾಗಿರಲು ಸಾಕು. ಏನು ಮಾಡುವುದು? ನನ್ನನ್ನು ಟೀಚರ್ ಕ್ಷಮಿಸದಿದ್ದರೆ ಎಂಬ ಆತಂಕ ಮತ್ತೆ ಮತ್ತೆ ಕ್ಷಮೆ ಕೇಳುವ ಹಾಗೆ ಮಾಡುತ್ತಿದೆ. ಏನೂ ತೋಚದೆ, ಟೀಚರ್​ ಕಣ್ಣಲ್ಲಿ ಕಣ್ಣಿಟ್ಟು ಅವರನ್ನು ತಬ್ಬಿಕೊಂಡು ಗಲ್ಲಕ್ಕೆ ಮುತ್ತು ಕೊಟ್ಟು ಕ್ಷಮೆ ಕೇಳಿಬಿಟ್ಟಿದ್ದಾನೆ! ಮನಸೋಲದಿದ್ದೀತೇ ಟೀಚರ್​ಗೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

10,58,564 ನೆಟ್ಟಿಗರು ಈ ವಿಡಿಯೋ ವೀಕ್ಷಿಸಿದ್ದಾರೆ. ಇನ್ನು ಪ್ರತಿಕ್ರಿಯೆಗಳು, ಮನಸಿನಂತೆ ಮಾದೇವ! ‘ರಣಬೀರ್​ ಕಪೂರ್ ಕಾ ಲಡಕಾ’ ಎಂದೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಬಡಾ ಖಿಲಾಡಿ, ಬನೇಗಾ ಆಗೇ ಜಾಕೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಕೆಲವರು, ‘ಇವನು ಅಮ್ಮಾ ಅನ್ನುತ್ತಿದ್ದಾನೆ ಮೇಡಮ್​ ಅನ್ನುತ್ತಿಲ್ಲ’ ಎಂದಿದ್ದಾರೆ. ‘ಶಿಕ್ಷಕಿಯೂ ತಾಯಿಯ ಸಮಾನ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಇಷ್ಟು ಚಿಕ್ಕ ಮಕ್ಕಳಿಗೆ ಇಂಥಾ ಶಿಕ್ಷಕಿಯರೇ ಸಿಗಬೇಕು’ ಎಂದು ಆಪ್ತವಾಗಿ ಹೇಳಿದ್ದಾರೆ ಮಗದೊಬ್ಬರು. ‘ಅಯ್ಯೋ ನಮ್ಮ ಟೀಚರುಗಳೆಲ್ಲ ಸರೀ ಶಿಕ್ಷೆ ಕೊಡುತ್ತಿದ್ದರು’ ಎಂದು ಶಿಕ್ಷೆಯ ಪರಿಯನ್ನು ಸಾಕಷ್ಟು ಜನ ವಿವರಿಸಿದ್ದಾರೆ.

ಅಮ್ಮನ ತೋಳಿನಿಂದ ಬಂದ ಮಗುವಿಗೆ ಶಾಲೆಯಲ್ಲಿ ಶಿಕ್ಷಕರೇ ಎಲ್ಲ ಅಲ್ಲವೆ? ಪ್ರೀತಿಯಿಂದ ತಿದ್ದಿದಲ್ಲಿ ಮಕ್ಕಳ ಆತ್ಮವಿಶ್ವಾಸ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅಷ್ಟೊಂದು ಮಕ್ಕಳನ್ನು ನೋಡಿಕೊಳ್ಳುವಾಗ ಟೀಚರ್​ಗೂ ಸುಸ್ತಾಗಿಬಿಡುತ್ತದೆ. ಆಗ ಇಂಥ ಸಾತ್ವಿಕ ಕೋಪವನ್ನು ಪ್ರಕಟಿಸುವುದು ಅಥವಾ ನಟಿಸುವುದು ಅನಿವಾರ್ಯ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:18 pm, Tue, 13 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ