Viral Video : ಸೆಲ್ಫೀ ನಂತರ ಮೀನಿನ ಬದಲಿಗೆ ಮೊಬೈಲನ್ನೇ​ ನದಿಗೆಸೆದ ಈ ಭೂಪ

Selfie : ಸದ್ಯ ತಾನೇ ನದಿಗೆ ಹಾರಿಕೊಂಡಿಲ್ಲ ಈತ! 12.6 ಮಿಲಿಯನ್​ ನೆಟ್ಟಿಗರು ವೀಕ್ಷಿಸಿದ ಈ ವಿಡಿಯೋ ನೋಡಿದರೆ ಖಂಡಿತ ನೀವು ನದಿವಿಹಾರಕ್ಕೆ ಹೋದಾಗೆಲ್ಲ ಇದನ್ನು ನೆನಪಿನಲ್ಲಿಟ್ಟುಕೊಂಡಿರುತ್ತೀರಿ.

Viral Video : ಸೆಲ್ಫೀ ನಂತರ ಮೀನಿನ ಬದಲಿಗೆ ಮೊಬೈಲನ್ನೇ​ ನದಿಗೆಸೆದ ಈ ಭೂಪ
ಸೆಲ್ಫಿಯ ಅಮಲೇರಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 14, 2022 | 2:24 PM

Viral Video : ಸೆಲ್ಫೀ ಹುಚ್ಚಿನ ಅವಾಂತರಗಳು ಒಂದೆರಡಲ್ಲ. ಸೆಲ್ಫೀ ತೆಗೆದುಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಂಡಿರುವ ಜ್ವಲಂತ ಉದಾಹರಣೆಗಳೇ ನಮ್ಮೆದುರಿಗಿವೆ. ಸೆಲ್ಫೀ ಎನ್ನುವ ಮಾಯೆ ಇದೆಯಲ್ಲ… ವಿವರಿಸಲಸಾಧ್ಯ! ಇಲ್ಲೊಬ್ಬ ದೋಣಿವಿಹಾರ ಮಾಡುತ್ತಾ ಮೀನನ್ನು ಹಿಡಿದಿದ್ದಾನೆ. ಹಿಡಿದ ಮೀನಿನೊಂದಿಗೆ ಸೆಲ್ಫೀ ತೆಗೆದುಕೊಳ್ಳಬೇಕೆಂಬ ಆಸೆ ಉಂಟಾಗಿದೆ. ಒಂದಿಷ್ಟು ಸೆಲ್ಫೀ ತೆಗೆದುಕೊಂಡು ಖುಷಿಪಟ್ಟಿದ್ದಾನೆ. ಕೊನೆಗೆ ಆ ಮೀನಿನ ಬದಲಾಗಿ ಮೊಬೈಲ್​ ಅನ್ನೇ ನದಿಗೆಸೆದುಬಿಟ್ಟಿದ್ದಾನೆ. ಪಕ್ಕದಲ್ಲಿದ್ದ ದೋಣಿಯವರು ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಟ್ವಿಟರ್​ನಲ್ಲಿ ಪೋಸ್ಟ್​ ಆದ ಈ ವಿಡಿಯೋ ಈಗ ನೆಟ್ಟಿಗರ ನಗುವಿಗೆ ಕಾರಣವಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೀಗೆ ಸ್ಮಾರ್ಟ್​ ಫೋನ್​ ಅನ್ನು ಕೈಯ್ಯಾರೆ ಕಳೆದುಕೊಳ್ಳುವುದೆಂದರೆ ಯಾರಿಗೆ ತಾನೆ ದುಃಖವೆನ್ನಿಸುವುದಿಲ್ಲ? ಈವತ್ತು ಬದುಕು ಸಾಗುತ್ತಿರುವುದೇ ಸ್ಮಾರ್ಟ್​ ಫೋನಿನ ಮೂಲಕ. ಕಾಣದಂತೆ ಕಳೆದಿದ್ದರೆ ಆ ಮಾತು ಬೇರೆ. ಆದರೆ ಕೈಯ್ಯಾರೆ ನದಿಗೆ…

ಈ ವಿಡಿಯೋ ಅನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದವರು ತನ್ಸು ಯೆಗೆನ್​. ಇವರು ಆಗಾಗ ಇಂಥ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಪ್ರಸ್ತುತ ವಿಡಿಯೋ ಅನ್ನು ಸೆಪ್ಟೆಂಬರ್​ 11ರಂದು ಪೋಸ್ಟ್ ಮಾಡಿದ್ದಾರೆ. 12.6 ಮಿಲಿಯನ್‌ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 1,40,000 ಕ್ಕೂ ಹೆಚ್ಚು ಜನ  ಇಷ್ಟಪಟ್ಟಿದ್ದಾರೆ.  29,000 ಕ್ಕೂ ಹೆಚ್ಚು ಜನರು ರೀಟ್ವೀಟ್​ ಮಾಡಿದ್ಧಾರೆ.

ಕೆಲವರಿಗೆ ಈ ದೃಶ್ಯ ಹಾಸ್ಯವನ್ನುಕ್ಕಿಸಿದೆ. ಇನ್ನೂ ಕೆಲವರಿಗೆ ಸಹಾನುಭೂತಿ. ಒಂದಿಷ್ಟು ಜನ ಇದು ನಕಲಿ ವಿಡಿಯೋ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಒಬ್ಬರು, ನಕಲಿಯಾಗಿದ್ದರೆ ಸಮುದ್ರಕ್ಕೆ ಕಸವನ್ನು ಎಸೆಯುವುದು ಅಪರಾಧ. ಹಾಗಿದ್ದರೆ ಅವರು ದಂಡ ತೆರಬೇಕು ಎಂದಿದ್ದಾರೆ.

ನಿಮಗೇನು ಅನ್ನಿಸುತ್ತೆ, ಇದು ಅಸಲಿಯೋ ನಕಲಿಯೋ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:19 pm, Wed, 14 September 22