AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತ್ಯಂತ ಹಿರಿಯ ಮಹಿಳೆ 118 ವರ್ಷದ ಸಿಸ್ಟರ್ ಆ್ಯಂಡ್ರೆ ಈಗ ನಮ್ಮೊಂದಿಗಿಲ್ಲ

Sister Andre : ಜಗತ್ತಿನ ಎರಡು ಮಹಾಯುದ್ದಗಳಿಗೆ ಸಾಕ್ಷಿಯಾಗಿದ್ದ ಸಿಸ್ಟರ್ ಆ್ಯಂಡ್ರೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮಕ್ಕಳಿಗೆ ಶಿಕ್ಷಕಿಯಾಗಿ, ಅನಾಥರಿಗೆ ಬಾಳಿನ ಬೆಳಕಾಗಿ ತಮ್ಮ ಜೀವಿತಾವಧಿಪೂರ್ತಿ ಸಮಾಜಸೇವೆಗೇ ಮೀಸಲಿರಿಸಿದ್ದರು.

ವಿಶ್ವದ ಅತ್ಯಂತ ಹಿರಿಯ ಮಹಿಳೆ 118 ವರ್ಷದ ಸಿಸ್ಟರ್ ಆ್ಯಂಡ್ರೆ ಈಗ ನಮ್ಮೊಂದಿಗಿಲ್ಲ
ಸಿಸ್ಟರ್ ಆ್ಯಂಡ್ರೆ
TV9 Web
| Updated By: ಶ್ರೀದೇವಿ ಕಳಸದ|

Updated on:Jan 18, 2023 | 11:57 AM

Share

Viral News : ಎರಡು ಮಹಾಯುದ್ಧಗಳಿಗೆ ಸಾಕ್ಷಿಯಾಗಿದ್ದ, ಜಗತ್ತಿನ ಅತೀ ಹಿರಿಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದ ಫ್ರೆಂಚ್​ನ​ ನನ್ ಲ್ಯೂಸೈಲ್​ ರ್ಯಾಂಡನ್​ (Lucile Randon) ನಿಧನ ಹೊಂದಿದ್ದಾರೆ. ಸಿಸ್ಟರ್​ ಆ್ಯಂಡ್ರೆ (Sister Andre) ಎಂಬ ಹೆಸರಿನಿಂದ ಖ್ಯಾತರಾಗಿದ್ದ ಅವರಿಗೆ 118 ವಯಸ್ಸಾಗಿತ್ತು. ಇವರು ದಕ್ಷಿಣ  ಆಫ್ರಿಕಾದಲ್ಲಿ 1904ರ ಫೆ. 11ರಂದು ಜನಿಸಿದ್ದರು. ‘ನಿನ್ನೆ ರಾತ್ರಿ ಮಲಗಿದಲ್ಲಿಯೇ ಇಹಲೋಕವನ್ನು ತ್ಯಜಿಸಿದ್ದಾರೆ. ಅವರಿಗೆ ಅವರ ಪ್ರೀತಿಯ ಸಹೋದರನನ್ನು ಸೇರುವ ಇಚ್ಛೆಯಾಗಿತ್ತು. ಈಗದು ಈಡೇರಿದೆ’ ಎಂದು ಸೇಂಟ್​ ಕ್ಯಾಥರೀನ್​ ಲೇಬರ್ ನರ್ಸಿಂಗ್​ ಹೋಂನ ಡೇವಿಡ್​ ತವೆಲ್ಲಾ ತಿಳಿಸಿದ್ಧಾರೆ.

ಕಳೆದ ವರ್ಷ ತೀರಿದ ಜಪಾನಿನ 119 ವರ್ಷದ ಕೇನ್ ತನಕಾ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎನ್ನಿಸಿಕೊಂಡಿದ್ದರು. ಆನಂತರ ಸಿಸ್ಟರ್ ಆ್ಯಂಡ್ರೆ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2022ರ ಏಪ್ರಿಲ್​ನಲ್ಲಿ ಗಿನ್ನೀಸ್​ ವಿಶ್ವದಾಖಲೆ ಪಟ್ಟಿಯಲ್ಲಿ ಇವರ ಹೆಸರು ಸೇರಿತು.

ಇದನ್ನೂ ಓದಿ : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್​ಗೆ ಹೆಸರಾದವರು ಯಾರು ಗೊತ್ತಾ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಿಸ್ಟರ್ ಆ್ಯಂಡ್ರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಮಕ್ಕಳಿಗೆ ಶಿಕ್ಷಕಿಯಾಗಿ ಪಾಠ ಹೇಳಿಕೊಟ್ಟಿದ್ದರು. ಜೊತೆಗೆ ಶೈಕ್ಷಣಿಕ ಆಡಳಿತ ಉಸ್ತುವಾರಿಯನ್ನೂ ನಿಭಾಯಿಸಿದ್ದರು. ಯುದ್ಧದ ಬಳಿಕ ಸುಮಾರು ಮೂವತ್ತು ವರ್ಷಗಳ ಕಾಲ ಹಿರಿಯನಾಗರಿಕರು ಮತ್ತು ಅನಾಥರ ಏಳಿಗೆಗಾಗಿ ಕೆಲಸ ಮಾಡಿದರು. ಕ್ಯಾಥೊಲಿಕ್​ ಸನ್ಯಾಸಿನಿಯಾಗುವ ಮೊದಲು ಮೂವತ್ತು ವರ್ಷಗಳ ಕಾಲ ಫ್ರಾನ್ಸ್​ನ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರು.

ಇದನ್ನೂ ಓದಿ : ವಿಶ್ವದ ಅತ್ಯಂತ ಹಿರಿಯ ವೈದ್ಯ ಹೊವಾರ್ಡ್​ ಟಕರ್ 100ನೇ ವಯಸ್ಸಿನಲ್ಲಿಯೂ ವೃತ್ತಿನಿರತ

ಇವರು ಬದುಕುಳಿದದ್ದು ಪವಾಡವೇ. ಇವರು ಎರಡು ಮಹಾ ಸಾಂಕ್ರಾಮಿಕ ರೋಗಗಳಿಗೆ ತುತ್ತಾದರೂ ಪಾರಾಗಿದ್ದರು. ಒಂದು, 1918ರಲ್ಲಿ ಸ್ಪ್ಯಾನಿಷ್​ ಫ್ಲ್ಯೂ ಎಂಬ ಸಾಂಕ್ರಾಮಿಕ ರೋಗ. ಇನ್ನೊಂದು ಕೊವಿಡ್​, 2021ರ ಜನವರಿ 16ರಂದು ಕೊರೊನಾ ಪಾಸಿಟಿವ್​ಗೆ ಈಡಾಗಿದ್ದರು. ಆದರೆ ಆನಂತರವೂ ಚೇತರಿಸಿಕೊಂಡಿದ್ದರು. ಆದರೆ ವಿಧಿ ಈಗ ಅವರನ್ನು ಕರೆದುಕೊಂಡಿತು.

ಈ ಹಿರಿಯ ಜೀವಕ್ಕೆ ವಿಶ್ವದ ಅನೇಕ ಗಣ್ಯವ್ಯಕ್ತಿಗಳು ಕಂಬನಿ ಮಿಡಿದಿದ್ದಾರೆ.

ಇನ್ನಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:24 am, Wed, 18 January 23

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್