ಇಲ್ಲಿ ಅಡಗಿರುವ ಎಮ್ಮೆಗಳನ್ನು ಈತನಕ ಶೇ.5 ರಷ್ಟು ಜನ ಮಾತ್ರ ಹುಡುಕಿದ್ದಾರೆ, ನೀವು?
Optical Illusion : ಈ ಹಸಿರು ಮೈದಾನದಲ್ಲಿ ಎಮ್ಮೆಗಳು ಅಡಗಿವೆ. ನಿಮಗೇನಾದರೂ ಕಾಣತ್ತಾ? ಹುಡುಕುವ ಪ್ರಯತ್ನ ಮಾಡುತ್ತೀರಾ? ಈ ಮಧ್ಯಾಹ್ನದ ಹೊತ್ತಿನಲ್ಲಿ ನಿಮ್ಮ ಮೆದುಳಿಗೊಂಚೂರು ಕೆಲಸ ಕೊಡಬಹುದಾ?
Viral Optical Illusion : ಇಲ್ಲಿ ವಿಶಾಲವಾದ ಹುಲ್ಲುಗಾವಲು ಇದೆ. ಎಮ್ಮೆಗಳು ಮೇಯಲು ಇಲ್ಲಿ ಬಂದಿದೆ. ಇಷ್ಟು ದೊಡ್ಡ ಮೈದಾನದಲ್ಲಿ ಎಮ್ಮೆಗಳು ಕಾಣುವುದು ತುಸು ಕಷ್ಟವೇ. ಆದರೂ ಅದು ಇಲ್ಲೇ ಇದೆ. ಈಗಾಗಲೇ ಶೇ. 5 ರಷ್ಟು ಜನರು ಮಾತ್ರ ಈ ಎಮ್ಮೆಯನ್ನು ಕಂಡುಹಿಡಿದಿದ್ದಾರೆ. ನೀವು ಪ್ರಯತ್ನಿಸಿ. ಕೊಡುತ್ತಿರುವ ಸಮಯ 9 ಸೆಕೆಂಡುಗಳು. ಮೊದಲಿಗೇ ಒಂದು ಸುಳಿವು, ಒಟ್ಟು ಎರಡು ಎಮ್ಮೆಗಳಿವೆ.
ಈಗಾಗಲೇ ಸಾಕಷ್ಟು ಇಂಥ ಸವಾಲುಗಳಿಗೆ ಉತ್ತರ ಕಂಡುಕೊಂಡ ನಿಮಗೆ ಇದು ಸುಲಭವೇ ಎಂಬ ಅನಿಸಿಕೆ ನಮ್ಮದು. ಮೆದುಳು ಮತ್ತು ಕಣ್ಣುಗಳ ನಡುವೆ ಸೃಷ್ಟಿಯಾಗುವ ಭ್ರಮೆಯನ್ನು ಹೊಡೆದೋಡಿಸಿ ಸವಾಲಿಗೆ ಉತ್ತರ ಕಂಡುಕೊಳ್ಳುವ ತಂತ್ರಗಳು ನಿಮಗೀಗಾಗಲೇ ತಿಳಿದಿರುತ್ತವೆ. ಏಕೆಂದರೆ ನಿಯಮಿತವಾಗಿ ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಪರಿಣತಿ ನಿಮ್ಮಲ್ಲಿ ತಾನಾಗಿಯೇ ಹೊಮ್ಮುತ್ತದೆ. ಹಾಗಾಗಿ ನೀವು ಪದೇಪದೆ ಇಂಥ ಚಿತ್ರಗಳನ್ನು ನೋಡಿ ಉತ್ತರ ಕಂಡುಕೊಳ್ಳುವಲ್ಲಿ ಈಗಾಗಲೇ ನಿಷ್ಣಾತರಾಗಿಬಿಟ್ಟಿದ್ದೀರಿ.
ಇದನ್ನೂ ಓದಿ : ವಿಶ್ವದ ಅತ್ಯಂತ ಹಿರಿಯ ಮಹಿಳೆ 118 ವರ್ಷದ ಸಿಸ್ಟರ್ ಆ್ಯಂಡ್ರೆ ಈಗ ನಮ್ಮೊಂದಿಗಿಲ್ಲ
ಹಾಗಿದ್ದರೆ ನಿಮ್ಮ ಸಮಯವೀಗ ಶುರು. ಬಿಳೀ ಆಕಾಶಕ್ಕೆ ಅಂಟಿಕೊಂಡಂತೆ ಕಾಣುವ ಈ ಹಸಿರು ಮೈದಾನಲ್ಲಿ ಎನ್ನೆಗಳು ಎಲ್ಲಿ ಅಡಗಿದೆ? ಕೊಟ್ಟ ಸಮಯದಲ್ಲಿ ಹುಡುಕಲು ಆಗಲಿಲ್ಲವಾ? ಒಂದು ಸುಳಿವು ಬೇಕಾ? ಚಿತ್ರದ ಬಲಬದಿಯ ತುದಿಯನ್ನು ಗಮನಿಸಿ. ಈಗಲೂ ಗೊತ್ತಾಗಲಿಲ್ಲವಾ? ಹಾಗಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿಬಿಡಿ.
ಹೌದು ಎರಡು ಎಮ್ಮೆಗಳು ಚಿತ್ರದ ಬಲಭಾಗದಲ್ಲಿ ಮೇಯುತ್ತಿವೆ. ನಿಮಗೆ ಅನುಮಾನ ಬಂದಿತ್ತಲ್ಲವಾ? ಹೌದು. ಅಲ್ಲಿ ಎರಡು ಎಮ್ಮೆಗಳಿವೆ. ನೀವು ಈಗಾಗಲೇ ಇವುಗಳನ್ನು ಗುರುತಿಸಿದ್ದರೆ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಿದೆ ಎಂದರ್ಥ. ಇಲ್ಲವಾದರೆ ಇನ್ನೂ ಸ್ವಲ್ಪ ಚುರುಕುಗೊಳಿಸಿಕೊಳ್ಳಲು ಇಂಥ ಆಪ್ಟಿಕಲ್ ಇಲ್ಲ್ಯೂಷನ್ಗಳನ್ನು ದಿನವೂ ನೋಡಿ.
ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ ಓದಲು ಕ್ಲಿಕ್ ಮಾಡಿ
Published On - 1:57 pm, Wed, 18 January 23