ಛತ್ತೀಸ್‌ಗಢ: ಚಲಿಸುತ್ತಿದ್ದ ಬಸ್ಸಿನ ಚಕ್ರದ ಮುಂದೆ ಮಲಗಿ ಯುವಕ ಆತ್ಮಹತ್ಯೆ; ಕ್ಯಾಮೆರಾದಲ್ಲಿ ಸಾವಿನ ದೃಶ್ಯ ಸೆರೆ
ಬಿಸ್ನಾಥ್ ಎರಡು ದಿನಗಳ ಹಿಂದೆ ಕೊಂಡಗಾಂವ್‌ನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ಸೋಮವಾರ ಮನೆಗೆ ಮರಳಲು ಬಸ್ ನಿಲ್ದಾಣಕ್ಕೆ ಬಂದಿದ್ದರು.
ಚಲಿಸುತ್ತಿದ್ದ ಬಸ್ಸಿನ ಟೈರ್ ಮುಂದೆ ಮಲಗಿ ಛತ್ತೀಸ್‌ಗಢದ (chhattisgarh) ಕೊಂಡಗಾಂವ್‌ನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೊಂಡಗಾಂವ್ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಮೃತರನ್ನು ಇರಗಾಂವ್ ನಿವಾಸಿ 40 ವರ್ಷದ ಬಿಸ್ನಾಥ್ ದುಗ್ಗಾ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಮಾಹಿತಿ ಪ್ರಕಾರ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಚಲಿಸುತ್ತಿದ್ದ ಬಸ್ಸಿನ ಹಿಂಬದಿಯ ಟೈರ್‌ಗೆ ಜಿಗಿದಿದಿದ್ದು ಚಕ್ರಕ್ಕೆ ಸಿಲುಕಿದ್ದಾರೆ. ಚಕ್ರದಡಿ ಸಿಲುಕಿದ ಬಿಸ್ನಾಥ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಆಜ್ ತಕ್ ವರದಿ ಮಾಡಿದೆ.
ಬಿಸ್ನಾಥ್ ಎರಡು ದಿನಗಳ ಹಿಂದೆ ಕೊಂಡಗಾಂವ್‌ನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ಸೋಮವಾರ ಮನೆಗೆ ಮರಳಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿ ರಾಯ್‌ಪುರದಿಂದ ಜಗದಲ್‌ಪುರಕ್ಕೆ ಹೋಗುತ್ತಿದ್ದ ಶರ್ಮಾ ಟ್ರಾವೆಲ್ಸ್ ಬಸ್‌ನ ಮುಂದೆ ಹಾರಿದ್ದಾರೆ. ಬಸ್ ಚಾಲಕನಿಗೆ ವಿಷಯ ತಿಳಿದ ತಕ್ಷಣ ಆತ ಬ್ರೇಕ್ ಹಾಕಿದ್ದಾನೆ. ಆದರೆ ಅಷ್ಟೊತ್ತಿಗಾಗಲೇ ತಡವಾಗಿತ್ತು.
ಇದನ್ನೂ ಓದಿ: ವರುಣ್ ಗಾಂಧಿಯವರ ಸಿದ್ಧಾಂತ ಬೇರೆ, ಅದನ್ನು ಒಪ್ಪಲಾರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಗಂಭೀರವಾಗಿ ಗಾಯಗೊಂಡ ಬಿಸ್ನಾಥ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು.ಅಲ್ಲಿ ಅವರು ಮೃತಪಟ್ಟಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ